Advertisement

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮೊದಲ ಪತ್ನಿ ನಿಧನ

08:11 PM Jul 16, 2022 | Team Udayavani |

ವಾಷಿಂಗ್ಟನ್‌: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮೊದಲನೇ ಪತ್ನಿ ಇವಾನಾ ಟ್ರಂಪ್‌(73) ನಿಧನರಾಗಿದ್ದಾರೆ. ಅವರು ಗುರುವಾರದಂದು ನ್ಯೂಯಾರ್ಕ್‌ ಮನೆಯಲ್ಲಿ ಕೊನೆಯುಸಿರೆಳೆದಿದ್ದಾಗಿ ತಿಳಿಸಲಾಗಿದೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಟ್ರಂಪ್‌, “ಇವಾನಾ ಅದ್ಭುತ ಮಹಿಳೆಯಾಗಿದ್ದರು. ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದರು’ ಎಂದಿದ್ದಾರೆ.

ಇವಾನಾ ಮೂಲತಃ ಜೆಕ್‌ ರಿಪಬ್ಲಿಕ್‌ನವರಾಗಿದ್ದು, 1977ರಲ್ಲಿ ಟ್ರಂಪ್‌ ಅವರನ್ನು ವರಿಸಿದ್ದರು. 15 ವರ್ಷಗಳ ದಾಂಪತ್ಯದ ನಂತರ 1992ರಲ್ಲಿ ವಿಚ್ಛೇದನ ಪಡೆದಿದ್ದರು.

ಟ್ರಂಪ್‌-ಇವಾನಾ ದಂಪತಿಗೆ ಡೊನಾಲ್ಡ್‌ ಜೂನಿಯರ್‌, ಇವಾಂಕಾ ಮತ್ತು ಎರಿಕ್‌ ಟ್ರಂಪ್‌ ಹೆಸರಿನ ಮೂರು ಮಕ್ಕಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next