Advertisement

ಮಾನ ನಷ್ಟ ಮೊಕದ್ದಮೆ ಹಾಕುತ್ತೇವೆ: ಐವನ್‌ ಡಿ’ಸೋಜಾ

09:50 AM Oct 12, 2017 | Karthik A |

ಮಂಗಳೂರು: ಬೆಂಗಳೂರು ಉತ್ತರ ತಾಲೂಕು ಭೂಪಸಂದ್ರದಲ್ಲಿ ರಾಜ ಮಹಲ್‌ ವಿಲಾಸ್‌ 2 ನೇ ಹಂತದ ಮುಂದುವರಿದ ಬಡಾವಣೆ ನಿರ್ಮಾಣಕ್ಕೆ 6.26 ಎಕರೆ ಭೂಮಿ ಡಿನೋಟಿ ಫೈ ಮಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡ ಇದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಇದು ಅಪ್ಪಟ ಸುಳ್ಳು. ಈ ಬಗ್ಗೆ ಪುಟ್ಟಸ್ವಾಮಿ, ಗೋ ಮಧುಸೂದನ್‌ ಮತ್ತು ಶಾಸಕರೋರ್ವರ ವಿರುದ್ಧ ಮಂಗಳೂರಿನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ತಿಳಿಸಿದ್ದಾರೆ.

Advertisement

ಈ ಬಗ್ಗೆ ಕಡತ ಪರಿಶೀಲಿಸುವಂತೆ ಕಾನೂನು ಸಲಹೆಗಾರರಿಗೆ ಸೂಚನೆ ನೀಡಲಾಗಿದೆ. ಒಂದೆರಡು ದಿನದಲ್ಲಿ ಕೇಸು ದಾಖಲಿಸಲಾಗುವುದು ಎಂದವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬಿಡಿಎ ನೋಟಿಫೈ ಮಾಡಿ ಮಂಜೂರು ಮಾಡಿದ್ದ ಜಾಗವನ್ನು ಫಲಾನುಭವಿ ನಿಗದಿತ ಉದ್ದೇಶಕ್ಕೆ ಬಳಸದೆ ಇದ್ದಾಗ ನ್ಯಾಯಾಲಯ ಆ ಜಾಗವನ್ನು ಅದರ ಮೂಲ ಮಾಲಕರಿಗೆ ವಾಪಸ್‌ ನೀಡುವಂತೆ ಸೂಚಿಸಿತ್ತು. ಶಾಸಕ ವಸಂತ ಬಂಗೇರ ಅವರು ಕಡತವನ್ನು ಮುಖ್ಯಮಂತ್ರಿ ಬಳಿ ಕೊಂಡೊಯ್ದಾಗ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಮಾತ್ರ ಸೂಚಿಸಿದ್ದರು. ಸಚಿವರ ಬಳಿಗೆ ಯಾವುದೇ ಕಡತ ಹೋದಾಗ ಅವರು ಅದನ್ನು  “ಪರಿಶೀಲಿಸಿ ಕ್ರಮ ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚಿಸುವುದು ಸರ್ವೇ ಸಾಮಾನ್ಯ. ಮುಖ್ಯಮಂತ್ರಿಯವರೂ ಅಷ್ಟನ್ನೇ ಮಾಡಿದ್ದಾರೆ ಎಂದು ಐವನ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next