Advertisement

Kerala; ಶುಕ್ರವಾರದ ಚುನಾವಣ ದಿನಾಂಕ ಬದಲಾವಣೆ ಮುಸ್ಲಿಂ ಸಂಘಟನೆಗಳ ಮನವಿ

05:07 PM Mar 17, 2024 | Team Udayavani |

ತಿರುವನಂತಪುರಂ:ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನಂತರ ಕೇರಳದ ಕೆಲವು ಪ್ರಮುಖ ಮುಸ್ಲಿಂ ಧಾರ್ಮಿಕ ಸಂಘಟನೆಗಳು ಶುಕ್ರವಾರದಂದು ಮತದಾನ ನಡೆಸುವ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

Advertisement

ಇಸ್ಲಾಮಿಕ್ ಪ್ರಮುಖರ ವೇದಿಕೆಯಾದ ಸಮಸ್ತ ಕೇರಳ ಜಮಿಯ್ಯತುಲ್ ಉಲಮಾ, ಅಖಿಲ ಭಾರತ ಸುನ್ನಿ ಜಮಿಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕಂಠಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಸೇರಿದಂತೆ ಹಲವರು, ಇಸ್ಲಾಮಿಕ್ ನಂಬಿಕೆಯುಳ್ಳ ಸಮುದಾಯವು ಶುಕ್ರವಾರದಂದು ಪ್ರಾರ್ಥನೆಗಾಗಿ ಮಸೀದಿಗಳಿಗೆ ಹೋಗುತ್ತಾರೆ. ಶುಕ್ರವಾರ ನಡೆಯುವ ಮತದಾನವು ಮತದಾರರಿಗೆ ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಅನಾನುಕೂಲವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ‘ಪಕ್ಷ ಚುನಾವಣ ಆಯೋಗದೊಂದಿಗೆ ಮಾತನಾಡಲಿದೆ’ ಎಂದು ಐಯುಎಂಎಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ. ಸಲಾಂ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೇರಳದಲ್ಲಿ ಎರಡನೇ ಹಂತದ ಚುನಾವಣೆ ಏಪ್ರಿಲ್ 26 ರಂದು ಶುಕ್ರವಾರ ನಡೆಯಲಿದೆ. ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ಶುಕ್ರವಾರ ನಡೆಯಲಿದ್ದು, ತಮಿಳುನಾಡಿನಲ್ಲೂ ಕೂಡ ಅಂದೇ ಮತದಾನ ನಡೆಯಲಿದೆ.ಕಾಂಗ್ರೆಸ್‌ನ ಮೈತ್ರಿ ಕೂಟದ ಪಾಲುದಾರ ಪಕ್ಷ ಐಯುಎಂಎಲ್ ಕೇರಳದ ಎರಡು ಮತ್ತು ತಮಿಳುನಾಡಿನ ಒಂದು ಸೀಟ್‌ನಲ್ಲಿ ಸ್ಪರ್ಧಿಸುತ್ತಿದೆ.ಏತನ್ಮಧ್ಯೆ, ಕೇರಳದ ಕೆಲವು ಬಿಜೆಪಿ ನಾಯಕರೂ ಶುಕ್ರವಾರದಂದು ಚುನಾವಣೆ ನಡೆಸುವುದರ ವಿರುದ್ಧ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next