ಸಾಗರ.
Advertisement
– ಇಷ್ಟು ಹೇಳಿದ ಮೇಲೆ ಇದೊಂದು ಜರ್ನಿ ಕಥೆ ಅಲ್ಲದೆ ಮತ್ತೇನು? ಹೌದು, ಇದು “ಪ್ರಯಾಣಿಕರ ಗಮನಕ್ಕೆ’ ಚಿತ್ರದ ಒನ್‌ಲೈನ್. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಈಗಷ್ಟೇ ಹಿನ್ನೆಲೆ ಸಂಗೀತ ಶುರುವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಏಪ್ರಿಲ್‌ನಲ್ಲಿ ಬಿಡುಗಡೆ ಮಾಡುವ ಯೋಚನೆ ಚಿತ್ರ ತಂಡದ್ದು.
ಪಾತ್ರಗಳು ಚಿತ್ರದ ಹೈಲೈಟ್. ಸಿಟಿಯಿಂದ ಹೊರಗೆ ಹೋಗುವ ಆ ಬಸ್‌ನಲ್ಲಿ ಏನೆಲ್ಲಾ ನಡೆದು ಹೋಗುತ್ತೆ ಎಂಬುದೇ ಕಥೆ. ಇಲ್ಲಿ
ಡ್ರೈವರ್ ಮತ್ತು ಕಂಡಕ್ಟರ್‌ನದ್ದೇ ವಿಶೇಷ. ಮಿನಿಬಸ್‌ನಲ್ಲೊಂದು ಪುಟ್ಟ ಕಥೆ ಹೇಳ ಹೊರಟಿದ್ದೇನೆ. ಆ ಕಥೆ ಸಂಜೆ 6.30 ಕ್ಕೆ ಶುರುವಾಗಿ, ರಾತ್ರಿ 10 ರ ಹೊತ್ತಿಗೆ ಮುಗಿಯುತ್ತೆ. ಆ ಮಧ್ಯೆ ಏನೇನು ಆಗುತ್ತೆ ಎಂಬುದು ಸಸ್ಪೆನ್ಸ್ ಎಂದ ನಿರ್ದೇಶಕರು, ಈ ಮಿನಿಬಸ್‌ನಲ್ಲಿ, ಮನೆ ಬಿಟ್ಟು ಓಡಿ ಹೋಗುವ ಹುಡುಗ, ಹುಡುಗಿ, ಮುಗಟಛಿ ಹುಡುಗ, ಅಷ್ಟೇ ಜೋರಿನ ಹುಡುಗಿ, ಡೈವರ್ಸ್ ಆಗಿದ್ದರೂ, ಮಡದಿ ಭೇಟಿ ಮಾಡಲು ಹೊರಟಿರುವ ವೃದಟಛಿ, ಒಬ್ಬ ಕೋಪಿಷ್ಟ, ಇನ್ನೊಬ್ಬ ತಮಾಷೆಗಾರ ಹೀಗೆ ಎಂಟು ಪಾತ್ರಗಳ ಸುತ್ತ ನಡೆಯುವ ಕಥೆಯಲ್ಲಿ ಸಾಕಷ್ಟು ಏರಿಳಿತಗಳಿವೆ’ಅಂತ ವಿವರ ಕೊಟ್ಟರು ಮನೋಹರ್.
Related Articles
ಎರಡು ಹಾಡುಗಳಿವೆ. ಮೆಜೆಸ್ಟಿಕ್ ಮೇಲೆ ಕುರಿತು ಅರ್ಜುನ್ ಒಂದು ಹಾಡು ಬರೆದಿದ್ದಾರೆ. ಅದು ಸಂಜೆ ಆದ ಬಳಿಕ ಮೆಜೆಸ್ಟಿಕ್‌ನ ಕತ್ತಲ ಜಗತ್ತು ಹೇಗೆಲ್ಲಾ ಇರುತ್ತೆ ಎಂಬುದರ ಮೇಲೆ ಆ ಹಾಡು ಮೂಡಿ ಬಂದಿದೆ. ಇನ್ನು, ಬಹದ್ದೂರ್ ಚೇತನ್‌ಕುಮಾರ್ ಅವರು, “ಸಂಜೆಯಾದರೇನು…’ ಹಾಡು ಬರೆದಿದ್ದಾರೆ. ಹಿನ್ನೆಲೆ ಸಂಗೀತ ಕೆಲಸ ನಡೆಯುತ್ತಿದೆ. ಒಳ್ಳೆಯ ತಂಡ, ಒಳ್ಳೆಯ ಚಿತ್ರ ಮಾಡಿರುವ ಖುಷಿ ನನ್ನದು’ ಅಂದರು ವಿಜೇತ್‌ಕೃಷ್ಣ. ನಾಯಕ ಭರತ್ ಅವರಿಲ್ಲಿ ಡ್ರೈವರ್ ಆಗಿ ನಟಿಸಿದ್ದಾರಂತೆ. ಅವರಿಗೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್‌ಗಳ ಕಷ್ಟ ಏನೆಂಬುದು ಗೊತ್ತಾಯಿತಂತೆ. “ಟ್ರಾಫಿಕ್ ನಡುವೆ ಅವರು ಪ್ರಯಾಣಿಕರನ್ನು ಸೇಫ್
ಆಗಿ ಕರೆದುಕೊಂಡು ಹೋಗುವುದೇ ಸಾಹಸ, ಅದು ಇಲ್ಲಿ ಅನುಭವಕ್ಕೆ ಬಂತು. ಕಥೆ ಬಗ್ಗೆ ಹೇಳುವುದಕ್ಕಿಂತ, ನೀವೇ ಸಿನಿಮಾ ನೋಡಿದರೆ, “ನಿಮ್ಮ ಗಮನಕ್ಕೆ’ ಕೆಲ ವಿಷಯಗಳು ಬರಲಿವೆ’ ಎಂದರು ಭರತ್. ನಾಯಕಿ ಅಮಿತಾ ಅವರಿಲ್ಲಿ, ಬೋಲ್ಡ್ ಹುಡುಗಿ ಪಾತ್ರ ಮಾಡಿದ್ದಾರಂತೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಆರಂಭದಿಂದ ಅಂತ್ಯದವರೆಗೂ ಕುತೂಹಲ ಕೆರಳಿಸುತ್ತದೆ ಎಂದರು ಅವರು. “ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಲೋಕೇಶ್ ಇಲ್ಲಿ ನಗಿಸುತ್ತಲೇ, ನೋಡುಗರ ಕಣ್ಣು ಒದ್ದೆ ಮಾಡಿಸವ ಪಾತ್ರ ಮಾಡಿದ್ದಾರಂತೆ. ಇನ್ನು, ದೀಪಕ್‌ಶೆಟ್ಟಿ ಅವರಿಗೆ ಇಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಸಿಕ್ಕಿದೆ. ಇದುವರೆಗೆ ನೆಗೆಟಿವ್ ಶೇಡ್ ಮಾಡಿದ್ದ ಅವರಿಗೆ
ಇಲ್ಲಿ ಪಾಸಿಟಿವ್ ಪಾತ್ರವಿದೆ. ಅಂಜನ್, ರಂಗಭೂಮಿ ಕಲಾವಿದ ನಂಜಪ್ಪಣ್ಣ ತಮ್ಮ ಅನುಭವ ಹಂಚಿಕೊಂಡರು. ನಿರ್ಮಾಪಕ ಸುರೇಶ್ ಹೆಚ್ಚು ಮಾತಾಡಲಿಲ್ಲ. ಛಾಯಾ ಗ್ರಾಹಕ ಕಿರಣ್ ಹಂಪಾಪುರ್ ಕೂಡ ಥ್ಯಾಂಕ್ಸ್‌ಗೆ ಸೀಮಿತವಾದರು. ಅಂದು ಅಶ್ವತ್ಥ್ ಗೌಡ, ಮೋಹನ್‌ಕುಮಾರ್, ಮನುಕುಮಾರ್ ಇತರರು ಇದ್ದರು. ನಿರ್ದೇಶಕರಾದ ಎ.ಪಿ.ಅರ್ಜುನ್ ಹಾಗೂ “ಬಹದ್ದೂರ್’ ಚೇ ತನ್‌ಕುಮಾರ್ ಆಡಿಯೋ ಸಿಡಿ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರುವ ಹೊತ್ತಿಗೆ ಮಾತುಕತೆಗೆ ಬ್ರೇಕ್ ಬಿತ್ತು.
Advertisement