Advertisement

ಪ್ರಭಾಸ್‌ ಕುಟುಂಬ ಸೇರಿದ ಹೊಸ ಅತಿಥಿ

08:04 AM Nov 30, 2021 | Team Udayavani |

ತೆಲುಗು ನಟ ಪ್ರಭಾಸ್‌ ಕಾರು ಪ್ರಿಯರು. ಈಗಾಗಲೇ 6 ಕೋಟಿ ರೂ. ಮೌಲ್ಯ ಲ್ಯಾಂಬೋರ್ಗಿನಿ ಜೊತೆ ಹಲವು ಲಕ್ಸುರಿ ಕಾರುಗಳನ್ನು ಹೊಂದಿರುವ ಅವರು ಇದೀಗ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಸೇರಿಸಿಕೊಂಡಿದ್ದಾರೆ.

Advertisement

ರೋಲ್ಸ್‌ ರಾಯ್ಸನ ಫ್ಯಾಂಟಮ್‌ ಕಾರನ್ನು ಖರೀದಿಸಿದ್ದಾರೆ. ಅಂದ ಹಾಗೆ ಈ ಕಾರಿನ ಮೌಲ್ಯ 8-9 ಕೋಟಿ ರೂಪಾಯಿ. ಅದಷ್ಟೇ ಅಲ್ಲದೆ, ಕಾರನ್ನು ಕಸ್ಟಮೈಸ್‌ ಮಾಡಿಸಿರುವ ಪ್ರಭಾಸ್‌, ಅದಕ್ಕೆಂದು 2.5 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.

ಸದ್ಯ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾ ಹವಾ ಜೋರಾಗಿದೆ. ಪೋಸ್ಟರ್ ಹಾಗೂ ಹಾಡುಗಳಿಂದಲೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಜೊತೆ ಪ್ರಭಾಸ್ ಹೆಜ್ಜೆ ಹಾಕಿದ್ದಾರೆ. ಸಿನಿಮಾಕ್ಕೆ ರಾಧ ಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next