Advertisement

ನಾನು ಎಂಗೇಜ್ ಆಗಿದ್ದೇನೆ ಎಂದ ನಯನತಾರಾ : ಸದ್ಯದಲ್ಲೇ ಮದುವೆಯಂತೆ

09:07 AM Aug 11, 2021 | Team Udayavani |

ಬಹುಭಾಷಾ ನಟಿ, ಲೇಡಿ ಸೂಪರ್​ಸ್ಟಾರ್​ ನಯನತಾರಾ ಕೊನೆಗೂ ತಾವು ಎಂಗೇಜ್ ಮೆಂಟ್ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

Advertisement

ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಭಾಗಿಯಾಗಿ ಮಾಹಿತಿ ಹಂಚಿಕೊಂಡಿರುವ ನಯನತಾರಾ, ತಮ್ಮ ಬಹುಕಾಲದ ಗೆಳೆಯ ವಿಘ್ನೇಶ್​ ಶಿವನ್​ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ತಮ್ಮ ಎಂಗೇಜ್ ​ಮೆಂಟ್​ ರಿಂಗ್​ ಅನ್ನು ಬಹಿರಂಗವಾಗಿ ತೋರಿಸಿದ್ದಾರೆ. ಅಲ್ಲದೆ ಆದಷ್ಟು ಬೇಗ ಮದುವೆಯಾಗುವುದಾಗಿಯೂ ಲೇಡಿ ಸೂಪರ್​ ಸ್ಟಾರ್​ ಹೇಳಿದ್ದಾರೆ.

ಇಂಟರ್​ ವ್ಯೂನಲ್ಲಿ ಹೋಸ್ಟ್ ನಯನತಾರಾ ಅವರ ಕೈನಲ್ಲಿದ್ದ ರಿಂಗ್ ಬಗ್ಗೆ ಪ್ರಶ್ನೆ ಕೇಳಿದಾಗ ನಯನತಾರಾ ಇದು ತಮ್ಮ ಎಂಗೇಜ್​ ಮೆಂಟ್ ರಿಂಗ್ ಎಂದು ಮಾಹಿತಿ ನೀಡಿದ್ದಾರೆ. ಇನ್ನು ನಾನು ರೌಡಿದಾನ್ ಸಿನಿಮಾ ಸೆಟ್​​ನಲ್ಲಿ ನಯನತಾರಾ ಮತ್ತು ವಿಘ್ನೇಶ್ ಮೊದಲಿಗೆ ಭೇಟಿಯಾಗಿದ್ದರಂತೆ.

ಈ ಹಿಂದೆ ಹಲವು ಬಾರಿ ನಯನತಾರಾ ವಿಘ್ನೇಶ್ ಜೊತೆ ಫೋಟೋ ಹಂಚಿಕೊಂಡಿದ್ದರು. ಹೀಗಾಗಿ ನಯನತಾರಾ ಗೊತ್ತಿಲ್ಲದೆ ಮದುವೆಯಾಗಿದ್ದಾರಾ ಎಂಬ ಕುತೂಹಲ ಹುಟ್ಟಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next