Advertisement
ಕ್ಲಚ್ ಎಂದಾಗ ಎಲ್ಲರೂ ವಾಹನದ ಕ್ಲಚ್ ಬಗ್ಗೆ ತೋಚಿಸುತ್ತಾರೆ. ಆದರೆ, ಫ್ಯಾಷನ್‌ಪ್ರಿಯರು ಪರ್ಸ್‌ಗಿಂತ ದೊಡ್ಡದಾದ ಮತ್ತು ಬ್ಯಾಗ್‌ಗಿಂತ ಚಿಕ್ಕದಾದ, ಚೊಕ್ಕದಾದ ಹಾಗು ಸ್ಟೈಲಿಶ್ ಆಗಿರುವ ವಸ್ತುವಿನ ಬಗ್ಗೆ ಯೋಚಿಸುತ್ತಾರೆ.
Related Articles
Advertisement
ಹಾಗಾಗಿ ಇವುಗಳಲ್ಲಿ ಕಲ್ಲು, ಮುತ್ತು, ಮಣಿ, ದಾರ, ಉಣ್ಣೆ, ಚಿನ್ನ- ಬೆಳ್ಳಿ ಅಥವಾ ಇತರ ಹೊಳೆಯುವ ವಸ್ತುಗಳನ್ನು ಅಲಂಕಾರಕ್ಕೆ ಉಪಯೋಗಿಸಲಾಗುತ್ತವೆ. ವೆಲ್ವೆಟ್ (ಮಖಮಲ್) ಬಟ್ಟೆಯಿಂದ ಹೊಲಿದ ಉಡುಪುಗಳು ಇದೀಗ ಫ್ಯಾಷನ್‌ನಲ್ಲಿ ಇಲ್ಲದಿದ್ದರೂ, ವೆಲ್ವೆಟ್ ಬಳಸಿ ಮಾಡಲಾದ ಆಕ್ಸೆಸರೀಸ್ ಟ್ರೆಂಡ್ ಆಗುತ್ತಲೇ ಇವೆ. ಆದ್ದರಿಂದ ಮಖಮಲ್ನ ಕ್ಲಚ್‌ಗಳು ಕೂಡ ಅಷ್ಟೇ ಟ್ರೆಂಡಿ.
ಹಳೆ ಬಟ್ಟೆ ಹೊಸ ಕ್ಲಚ್: ಫಾರ್ಮಲ್ ಉಡುಗೆಯ ಜೊತೆ ಲೆದರ್ (ಚರ್ಮ) ಅಥವಾ ಆರ್ಟಿಫಿಷಿಯಲ್ ಲೆದರ್‌ನ ಕ್ಲಚ್, ಪ್ಲಾಸ್ಟಿಕ್, ರಬ್ಬರ್ ಮುಂತಾದ ಮಟೀರಿಯಲ್ಗಳಿಂದ ಮಾಡಿದ ಕ್ಲಚ್‌ಗಳನ್ನೂ ಬಳಸಬಹುದು. ಇವೆಲ್ಲವುಗಳಲ್ಲಿ ಒಂದೇ ಬಣ್ಣ, ಅಥವಾ ಒಂದೆರಡು ಬಣ್ಣ, ಅಥವಾ ಸಿಕ್ಕಾಪಟ್ಟೆ ಬಣ್ಣವನ್ನೂ ಬಳಸಬಹುದು.
ಆದರೆ ಮುತ್ತು, ರತ್ನ, ಹೊನ್ನಿನಂಥ ಹೊಳೆಯುವ ಅಥವಾ ಜಗಮಗಿಸುವ ಅಲಂಕಾರಿಕ ವಸ್ತುಗಳು ಒಂದೋ ಇರಲೇಬಾರದು. ಇಲ್ಲವೇ ಬಹಳ ಕಡಿಮೆ ಇರಬೇಕು. ಅದೇ ಸಾಂಪ್ರದಾಯಿಕ ಉಡುಗೆಗಳ ಜೊತೆ ಪಳ ಪಳ ಹೊಳೆಯುವ ಕ್ಲಚ್‌ಗಳೇ ಅಂದ!
ನೋಡ್ಕೊಂಡ್ ತಗೊಳ್ಳಿ: ಕ್ಲಚ್‌ಗಳನ್ನು ಕೈಯಲ್ಲೇ ಹಿಡಿದು ಓಡಾಡುವುದರಿಂದ, ಕೈಯ ಬೆವರು ಅವುಗಳ ಮೇಲಿನ ಬಣ್ಣ ಬಿಡುವಂತೆ ಮಾಡಬಹುದು. ಇಲ್ಲವೆ, ಅವುಗಳ ಅಲಂಕಾರಿಕ ವಸ್ತುಗಳು ಎದ್ದು ಬರುವಂತೆ ಮಾಡಬಹುದು. ಆದ್ದರಿಂದ ಬಣ್ಣ ಬಿಡದ (ವಾಟರ್‌ಪ್ರೂಫ್), ಉತ್ತಮ ಗುಣಮಟ್ಟದ ಹಾಗು ದೃಢ ಕಸೂತಿ ಕೆಲಸ ಇರುವ ಕ್ಲಚ್‌ಗಳನ್ನೇ ಆಯ್ದು ಖರೀದಿಸಬೇಕು.
ರಸ್ತೆ ಬದಿಯ ಅಂಗಡಿಗಳಲ್ಲಾದರೆ ನೀವೇ ಸ್ವತಃ ನೋಡಿ, ಪರೀಕ್ಷಿಸಿ ಖರೀದಿ ಮಾಡಬಹುದು. ಆದರೆ ರಿಟರ್ನ್ ಪಾಲಿಸಿ ಇದ್ದರೂ ಆನ್‌ಲೈನ್ ಮೂಲಕ ಇವುಗಳನ್ನು ಪರೀಕ್ಷಿಸಲು ಸಾಧ್ಯವಿರುವುದಿಲ್ಲ. ಹಾಗಾಗಿ ಉತ್ತಮ ಬ್ರಾಂಡ್‌ನ ಕ್ಲಚ್‌ಗಳನ್ನು ಕೊಂಡುಕೊಳ್ಳುವುದು ಒಳಿತು.
* ಅದಿತಿಮಾನಸ ಟಿ. ಎಸ್.