ಹೊಸದಿಲ್ಲಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಶನಿವಾರ ಹರಿಯಾಣದ ಬದರ್‌ಪುರ ಗಡಿಯಿಂದ ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಿದೆ. ದೆಹಲಿಯ ಕೆಂಪು ಕೋಟೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಇದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವಲ್ಲ, ಅಂಬಾನಿ ಮತ್ತು ಅದಾನಿ ಸರ್ಕಾರ” ಎಂದು ಆರೋಪಿಸಿದರು.
ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ದೇಶದಲ್ಲಿ ಹಿಂದೂ ಮುಸ್ಲಿಂ ದ್ವೇಷವನ್ನು ಹರಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಆರೋಪಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಗುರಿ ಮತ್ತು ಇಲ್ಲಿಯವರೆಗಿನ ಅನುಭವದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, “ಭಾರತವನ್ನು ಒಗ್ಗೂಡಿಸುವುದು ಯಾತ್ರೆಯ ಗುರಿಯಾಗಿದೆ. ನಾವು ಈ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಪ್ರಾರಂಭಿಸಿದಾಗ, ದ್ವೇಷವನ್ನು ಅಳಿಸಬೇಕು ಎಂದು ನಾನು ಯೋಚಿಸಿದ್ದೆವು. ನಾನು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಡೆದಿದ್ದೇನೆ. ಈ ದೇಶದಲ್ಲಿ ದ್ವೇಷ ಎಲ್ಲೆಲ್ಲೂ ಇದೆ. ಆದರೆ ನಾನು ನಡೆಯಲು ಆರಂಭಿಸಿದಾಗ ಸತ್ಯ ದರ್ಶನವಾಯಿತು. 24×7 ಹಿಂದೂ, ಮುಸ್ಲಿಂ ದ್ವೇಷ ಹರಡಲಾಗುತ್ತಿದೆ. ಆದರೆ ಇದು ಸತ್ಯವಲ್ಲ. ನಾನು ಲಕ್ಷಗಟ್ಟಲೆ ಜನರನ್ನು ಭೇಟಿ ಮಾಡಿದ್ದೇನೆ. ಅವರೆಲ್ಲರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ, ದ್ವೇಷವನ್ನು ಏಕೆ ಹರಡಲಾಗುತ್ತಿದೆ ಎನ್ನುವುದೇ ಪ್ರಶ್ನೆ?” ಎಂದರು.
ಇದನ್ನೂ ಓದಿ:ಸುರತ್ಕಲ್ ನಲ್ಲಿ ಬಂದ್ ವಾತಾವರಣ: ಪಂಜಿಮೊಗರಿನಲ್ಲಿಂದು ಜಲೀಲ್ ದಫನ ಕ್ರಿಯೆ
Related Articles
ಕೆಂಪು ಕೋಟೆಯಿಂದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ನಿಮ್ಮ ಸುತ್ತಲೂ ನೋಡಿ, ಜೈನ ಮಂದಿರ, ಗುರುದ್ವಾರ, ದೇವಸ್ಥಾನ ಮತ್ತು ಮಸೀದಿ ಇದೆ. ಇದು ಭಾರತ” ಎಂದು ಹೇಳಿದರು.
ಗಮನ ಬೇರೆಡೆ ಸೆಳೆಯಲು ಹಿಂದೂ-ಮುಸ್ಲಿಂ ದ್ವೇಷ ಹರಡಲಾಗುತ್ತಿದೆ ಎಂದು ಆರೋಪಿಸಿದರು. “ಯಾರಾದರೂ ನಿಮ್ಮನ್ನು ಪಿಕ್‌ಪಾಕೆಟ್ ಮಾಡಲು ಪ್ರಯತ್ನಿಸಿದಾಗ, ಅವರು ಮಾಡುವ ಮೊದಲ ಕೆಲಸವೆಂದರೆ ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸುವುದು. ನಿಜವಾದ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಹಿಂದೂ ಮುಸ್ಲಿಂ ರಾಜಕೀಯವನ್ನು ಮಾಡಲಾಗುತ್ತಿದೆ” ಎಂದು ರಾಹುಲ್ ಆರೋಪಿಸಿದರು.