Advertisement

ಮಾಜಿ ಕ್ರಿಕೆಟರ್‌ ಅಂಶುಮಾನ್‌ಗೆ ಕ್ಯಾನ್ಸರ್‌ಬಿಸಿಸಿಐ ಆರ್ಥಿಕ ನೆರವಿಗೆ ಕಪಿಲ್‌ ಒತ್ತಾಯ

09:43 PM Jul 13, 2024 | Team Udayavani |

ಹೊಸದಿಲ್ಲಿ: ಭಾರತದ ಮಾಜಿ ಕ್ರಿಕೆಟಿಗ 71ರ ಹರೆಯದ ಅಂಶುಮಾನ್‌ ಗಾಯಕ್ವಾಡ್‌, ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರಿಗೆ ಆರ್ಥಿಕ ನೆರವು ನೀಡುವಂತೆ ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕ ಕಪಿಲ್‌ ದೇವ್‌, ಬಿಸಿಸಿಐಯನ್ನು ಒತ್ತಾಯಿಸಿದ್ದಾರೆ. ಕ್ರಿಕೆಟ್‌ ತಂಡದಲ್ಲಿ ತಮ್ಮ ಜತೆಗಿದ್ದ ಆಟಗಾರನ ಚಿಕಿತ್ಸೆಗಾಗಿ ತಮ್ಮ ಪಿಂಚಣಿ ಹಣವನ್ನೇ ನೀಡಲು ಮಾಜಿ ಕ್ರಿಕೆಟಿಗರು ಮುಂದಾಗಿರುವುದಾಗಿ ಕಪಿಲ್‌ ಹೇಳಿಕೊಂಡಿದ್ದಾರೆ.

Advertisement

ಇದು ಬಹಳ ಬೇಸರ ಮತ್ತು ಖನ್ನತೆಗೆ ಒಳಗಾಗುವಂತೆ ಮಾಡಿರುವ ಸಂಗತಿ. ನಾನೀಗ ನೋವಿನಲ್ಲಿದ್ದೇನೆ; ಯಾಕೆಂದರೆ ನಾನು ಅಂಶುಮಾನ್‌ ಜತೆಯಲ್ಲಿ ಆಡಿದ್ದೇನೆ. ಇಂಥ ಕಷ್ಟದ ಪರಿಸ್ಥಿತಿಯಲ್ಲಿ ಅವರನ್ನು ನೋಡಲು ನನ್ನಿಂದ ಸಾಧ್ಯವಿಲ್ಲ ಎಂದು ಕಪಿಲ್‌ ದೇವ್‌ ಹೇಳಿದ್ದಾರೆ. ಮಾಜಿ ಆಟಗಾರರು ಸಂಕಷ್ಟಕ್ಕೆ ಒಳಗಾದಾಗ ನೆರವು ನೀಡುವ ವ್ಯವಸ್ಥೆ ಬಿಸಿಸಿಐಯಲ್ಲಿ ಇಲ್ಲದಿರುವ ಬಗ್ಗೆಯೂ ಕಪಿಲ್‌ ಬೇಸರ ವ್ಯಕ್ತಪಡಿಸಿದ್ದಾರೆ.

1975-1987ರ ವರಗೆ ಭಾರತ ಪರ 40 ಟೆಸ್ಟ್‌ ಮತ್ತು 15 ಏಕದಿನ ಪಂದ್ಯಗಳನ್ನಾಡಿರುವ ಅಂಶುಮಾನ್‌, ಕಳೆದ ವರ್ಷದಿಂದ ಲಂಡನ್‌ನ ಕಿಂಗ್ಸ್‌ ಕಾಲೇಜು ಆಸ್ಪತ್ರೆಯಲ್ಲಿ ಬ್ಲಿಡ್‌ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಹ ಆಟಗಾರನಿಗೆ ನೆರವು:

ಅನಾರೋಗ್ಯಕ್ಕೀಡಾಗಿರುವ ಅಂಶುಮಾನ್‌ ಅವರಿಗೆ ಕಪಿಲ್‌ ಜತೆಗೆ, ಅವರ ಸಹ ಆಟಗಾರರಾಗಿದ್ದ ಮಾಜಿ ಕ್ರಿಕೆಟರ್‌ಗಳಾದ ಮೋಹಿಂದರ್‌ ಅಮರನಾಥ್‌, ಸುನೀಲ್‌ ಗಾವಸ್ಕರ್‌, ಸಂದೀಪ್‌ ಪಾಟೀಲ್‌, ದಿಲೀಪ್‌ ವೆಂಗ್‌ಸರ್ಕಾರ್‌, ಮದನ್‌ ಲಾಲ್‌, ರವಿ ಶಾಸ್ತ್ರಿ  ಮತ್ತು ಕೀರ್ತಿ ಆಜಾದ್‌ ಮೊದಲಾದವರು ನೆರವು ನೀಡಿರುವುದಾಗಿ ಕಪಿಲ್‌ ಹೇಳಿಕೊಂಡಿದ್ದಾರೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next