Advertisement

‘ಕ್ವೀನ್‌’ ಲುಕ್‌ನಲ್ಲಿ ಇತಿ ಆಚಾರ್ಯ

04:03 PM Jan 05, 2023 | Team Udayavani |

ಸ್ಯಾಂಡಲ್‌ವುಡ್‌ನ‌ ಗ್ಲಾಮರಸ್‌ ನಟಿ ಇತಿ ಆಚಾರ್ಯ ಈಗ ಕ್ವೀನ್‌ ಲುಕ್‌ನಲ್ಲಿ ತೆರೆಮೇಲೆ ಬರಲು ತಯಾರಾಗುತ್ತಿದ್ದಾರೆ. ಹೌದು, ಇತಿ ಆಚಾರ್ಯ ಸದ್ಯ “ಕಿಂಗ್‌ ಆ್ಯಂಡ್‌ ಕ್ವೀನ್‌’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿ ಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಈ ಸಿನಿಮಾದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ.

Advertisement

ಯುವನಟ ಶ್ರೇಯಸ್‌ ಚಿಂಗ ನಾಯಕನಾಗಿ ಹಾಗೂ ಇತಿ ಆಚಾರ್ಯ ನಾಯಕಿಯಾಗಿ ಅಭಿನಯಿಸುತ್ತಿರುವ “ಕಿಂಗ್‌ ಆ್ಯಂಡ್‌ ಕ್ವೀನ್‌’ ಚಿತ್ರದಲ್ಲಿ ಹಿರಿಯ ನಟ ಜಗ್ಗೇಶ್‌ ಪುತ್ರ ಯತಿರಾಜ್‌ ಈ ಸಿನಿಮಾದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಉಳಿದಂತೆ ಶೋಭರಾಜ್‌, ಲಲಿತಾ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಹಲವು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಅರ್ಜುನ್‌ ಸುಬ್ರಹ್ಮಣ್ಯ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next