ಹುಣಸೂರು: ಗ್ರಾಮೀಣ ಭಾಗದ ಜನರ ಅಭ್ಯುದಯಕ್ಕಾಗಿ ಐಟಿಸಿ ಕಂಪನಿಯು ಹಲವಾರು ಜನಪರ ಕಾರ್ಯಕ್ರಮ ಆಯೋಜಿಸುತ್ತಿದೆಯಲ್ಲದೆ ಕಳೆದ 10 ವರ್ಷಗಳಿಂದ ಶೈಕ್ಷಣಿಕ ಪ್ರಗತಿಗೂ ಕೊಡುಗೆ ನೀಡಲಾಗುತ್ತಿದೆ ಎಂದು ಐಟಿಸಿ ಕಂಪನಿಯ ಲೀಪ್ ಮೇನೆಜರ್ ರವೀಶ್ ತಿಳಿಸಿದರು.
ತಾಲೂಕಿನ ಹನಗೋಡು ಹೋಬಳಿಯ ಅರಸು ಕಲ್ಲಹಳ್ಳಿ , ಕೊತ್ತೆಗಾಲ ಗ್ರಾಮಗಳ ಪ್ರೌಢಶಾಲೆ ಮತ್ತು ಮತ್ತರಾಯನಹೊಸಹಳ್ಳಿ, ಯಮಗುಂಭ ಗ್ರಾಮದ ಸರ್ಕಾರಿ ಪೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಡೆಸ್ಕ್ಗಳನ್ನು ವಿತರಿಸಿ ಮಾತನಾಡಿದರು.
ಐಟಿಸಿ ಕಂಪನಿಯು ಜಿಲ್ಲೆಯ ವಿವಿಧ ಗ್ರಾಮಗಳ ಗ್ರಾಮಸ್ಥರ ಹಾಗೂ ಶಾಲಾ ಮುಖ್ಯಸ್ಥರ ಮನವಿ ಮೇರೆಗೆ ಕಳೆದ ಹತ್ತಾರು ವರ್ಷಗಳಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕೆಂಬ ಮಹತ್ವಾಕಾಂಕ್ಷೆಯಿಂದ ಮೂಲಭೂತ ಸಮಸ್ಯೆಗಳ ಕೊರತೆಯಿಂದ ಸಿಲುಕಿರುವ ಶಾಲೆಗಳಿಗೆ ಕೊಠಡಿ,
ಕಾಂಪೌಡ್, ಶೌಚಾಲಯ, ಡೆಸ್ಕ್, ಶುದ್ಧ ಕುಡಿವ ನೀರಿನ ವ್ಯವಸ್ಥೆ ಸೇರಿದಂತೆ ಅನೇಕ ಸವಲತ್ತುಗಳನ್ನು ಆದ್ಯತೆ ಮೇರೆಗೆ ನೀಡಲಾಗುತ್ತಿದ್ದು, ಗ್ರಾಮೀಣ ಭಾಗದ ರೈತರ ಮಕ್ಕಳು ಸಂಘ-ಸಂಸ್ಥೆಗಳ ಕೊಡಮಾಡುವ ಸವಲತ್ತುಗಳನ್ನು ಸದುಪಂೋಗಪಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳುವಂತೆ ಸೂಚಿಸಿದರು.
ಪರಿಸರ ಪೂರಕ ವಾತಾವರಣ: ಹುಣಸೂರು ಉಪ ವಿಭಾಗದ ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು,ಕೆ.ಆರ್.ನಗರದ ಕೆಲ ಭಾಗದಲ್ಲಿ ಈವರೆಗೆ 450ಕ್ಕೂ ಹೆಚ್ಚು ಕೆರೆಗಳ ಅಂತರ್ಜಲ ವೃದ್ಧಿಸುವ ಸಲುವಾಗಿ ಕಂಪನಿವತಿಯಿಂದ ಕೆರೆಗಳ ಹೂಳೆತ್ತಲು ನೆರವು, ಜಮೀನುಗಳಲ್ಲಿ ಪ್ಲಾಸ್ಟಿಕ್ ಮತ್ತಿತರ ಪದಾರ್ಥ ಸೇರದಂತೆ ರೈತರ ಜಮೀನುಗಳ ಅಂಚಿನಲ್ಲಿ ತೊಟ್ಟಿ ನಿರ್ಮಿಸಿಕೊಡುವುದು,
ಕಾಲಕಾಲಕ್ಕೆ ರೈತರಿಗೆ ತಾಂತ್ರಿಕ ಸಲಹೆ ನೀಡಲಾಗುತ್ತಿದೆ ಎಂದರು. ಸಮಾರಂಭದಲ್ಲಿ ಕಂಪನಿಯ ವ್ಯವಸ್ಥಾಪಕರಾದ ಪೂರ್ಣೇಶ್, ಚನ್ನವೀರೇಶ್, ಶೇಷಶಯನ ಕಂಪನಿ ಸಿಬ್ಬಂದಿ ಜಯಣ್ಣ, ಚಂದ್ರು ಸೇರಿದಂತೆ ಶಾಲಾ ಮುಖ್ಯಶಿಕ್ಷಕರು ಹಾಗೂ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗಹಿಸಿದರು.