Advertisement

ಈಗ ಇಟಲಿಯಲ್ಲೂ ಲಾಕ್‌ ಡೌನ್‌ ಸಡಿಲಿಕೆಯ ಮಾತು

04:28 PM Apr 19, 2020 | sudhir |

ಇಟಲಿ: ಕೋವಿಡ್ ವೈರಸ್‌ ಸೋಂಕಿತರ ಸಂಖ್ಯೆ ಇಟಲಿಯಲ್ಲಿ ಕಡಿಮೆಯಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರೂ ಮತ್ತು ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಈ ಕಾರಣಕ್ಕೆ ಸರಕಾರ ಲಾಕ್‌ಡೌನ್‌ ಅನ್ನು ತುಸು ಸಡಿಲಿಸುವ ಕುರಿತು ಚಿಂತನೆ ನಡೆಸುತ್ತಿದೆ. ಕೋವಿಡ್‌ -19 ವೈರಸ್‌ ಪ್ರಾರಂಭವಾದ ಬಳಿಕ ಮೊದಲ ಬಾರಿಗೆ ಚಿಕಿತ್ಸೆ ಪಡೆಯುತ್ತಿರುವ ಜನರ ಸಂಖ್ಯೆ ಗಣನೀಯ ಇಳಿಕೆಯಾಗಿದೆ.

Advertisement

ಉತ್ತರ ಮಿಲನ್‌ನ ಲೊಂಬಾರ್ಡಿಯಲ್ಲಿ 11 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಲಾಕ್‌ಡೌನ್‌ ಒಂದೆಡೆ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆ ಮಾಡುತ್ತಿದ್ದರೂ, ದೇಶದ ಆರ್ಥಿಕತೆಯ ಮೇಲೂ ಭಾರೀ ಪರಿಣಾಮ ಬೀರುತ್ತಿದೆ. ಈ ಕುರಿತಂತೆ ಸರಕಾರದ ಮಟ್ಟದಲ್ಲಿ ಮಾತುಕತೆಯಾಗಿದ್ದು, ಕೆಲವೆಡೆ ಪ್ರಾಯೋಗಿಕವಾಗಿ ಲಾಕ್‌ಡೌನ್‌ ತೆರವುಗೊಳಿಸುವ ಸಾಧ್ಯತೆ ಇದೆ. ಲಾಕ್‌ಡೌನ್‌ ಸಡಿಲಗೊಳಿಸುವುದು ಹೇಗೆ? ಮತ್ತು ಯಾವಾಗ ಪ್ರಾರಂಭಿಸಬೇಕು ಎಂಬ ಬಗ್ಗೆ ಇನ್ನೂ ಚರ್ಚೆಗಳು ಚಾಲ್ತಿಯಲ್ಲಿವೆ.

ಪ್ರಸ್ತುತ ರಾಷ್ಟ್ರೀಯ ನಿರ್ಬಂಧಗಳು ಮೇ 3ರಂದು ಮುಕ್ತಾಯಗೊಳ್ಳಲಿದ್ದು, ಹೊಸ ಪ್ರಕರಣಗಳು ತೀವ್ರವಾಗಿ ಕುಸಿದಿರುವ ಪ್ರದೇಶಗಳಲ್ಲಿ ಮನೆಯಲ್ಲಿಯೇ ಇರುವ ಆದೇಶಗಳನ್ನು ಭಾಗಶಃ ಸರಕಾರ ತೆಗೆದು ಹಾಕಬಹುದು. ರೋಮ್‌ನ ದಕ್ಷಿಣದ ಪ್ರದೇಶಗಳಲ್ಲಿನ ನಿರ್ಬಂಧವನ್ನು ಸದ್ಯಕ್ಕೆ ತೆಗೆದು ಹಾಕಲು ನಿರ್ಧರಿಸಿಲ್ಲ ಎನ್ನಲಾಗಿದೆ.

ಲಾಕ್‌ಡೌನ್‌ ಬಳಿಕ ಲಕ್ಷಾಂತರ ಮಂದಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ದೇಶದ ವಿತ್ತೀಯ ಬೆಳವಣಿಗೆಗಳು ಶೂನ್ಯಕ್ಕೆ ತಲುಪಿದೆ. ಎರಡನೆಯ ಮಹಾಯುದ್ಧದ ಅನಂತರದ ಅತ್ಯಂತ ಕೆಟ್ಟ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟಿನ ಪರಿಣಾಮಗಳನ್ನು ಇಟಲಿ ಎದುರಿಸುತ್ತಿದೆ.ಇಟಲಿ ಕೋವಿಡ್‌-19ನ ಆರ್ಭಟಕ್ಕೆ ತತ್ತರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next