ರೋಮ್: ಇಟಲಿಯ ದಕ್ಷಿಣ ಭಾಗದ ಇಸ್ಕಿಯಾ ದ್ವೀಪದಲ್ಲಿ ಶನಿವಾರ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಆ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.
Advertisement
ಸದ್ಯಕ್ಕೆ ಎಂಟು ಮಂದಿ ಅಸುನೀಗಿದ್ದಾರೆ ಎಂದು ದೃಢಪಡಿಸಲಾಗಿದ್ದರೂ, ಹಲವಾರು ಮಂದಿ ಮಣ್ಣಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಅವರಿಗಾಗಿ, ಶೋಧ ಕಾರ್ಯಾಚರಣೆ ಮುಂದುವರಿದಿದೆ. ಏಕಾಏಕಿ ಭಾರಿ ಗಾತ್ರದ ಗುಡ್ಡ ಕುಸಿದು ಮನೆ ಹಾಗೂ ಕಾರುಗಳ ಮೇಲೆಯೂ ಬಿದ್ದಿದೆ. ಗುಡ್ಡದ ಒಂದಷ್ಟು ಭಾಗ ಸಮುದ್ರ ಪಾಲಾಗಿದೆ. 200ಕ್ಕೂ ಅಧಿಕ ಸಿಬ್ಬಂದಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.