Advertisement

ಇಟಲಿಯ 11 ಫ‌ುಟ್ಬಾಲಿಗರಿಗೆ ಕೊರೊನಾ ಸೋಂಕು!

10:24 AM Mar 17, 2020 | sudhir |

ರೋಮ್‌: ಚೀನದ ಬಳಿಕ ಇಟಲಿಯಲ್ಲಿ ಕೊರೊನಾ ಹಾವಳಿ ತೀವ್ರಗೊಂಡಿದೆ. ಇಲ್ಲಿನ 11 ಮಂದಿ ವೃತ್ತಿಪರ ಕ್ಲಬ್‌ ಫ‌ುಟ್ಬಾಲಿಗರಿಗೆ ಕೊರೊನಾ ತಗುಲಿದೆ ಎನ್ನುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಈ ಬಗ್ಗೆ ಸ್ವತಃ ಕ್ಲಬ್‌ ತಂಡಗಳು ಮಾಹಿತಿ ಬಹಿರಂಗಪಡಿಸಿವೆ.

Advertisement

ಫಿಯೊರೆಂಟಿನಾ ಹಾಗೂ ಸ್ಯಾಂಪ್‌ಡೊರಿಯಾ ಕ್ಲಬ್‌ ತಂಡದ ಆಟಗಾರರಿಗೆ ಕೊರೊನಾ ಅಂಟಿರುವುದು ದೃಢಪಟ್ಟಿದೆ. ಆರ್ಜೆಂಟೀನಾ ಫ‌ುಟ್‌ಬಾಲ್‌ ತಂಡದ ಖ್ಯಾತ ಆಟಗಾರರಾದ ಜರ್ಮನ್‌ ಫೆಝೆಲ್ಲ ಹಾಗೂ ಫಾರ್ವರ್ಡ್‌ ಆಟಗಾರ ಪ್ಯಾಟ್ರಿಕ್‌ ಕಲೊóàನ್‌ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇವರಿಬ್ಬರು “ಸೆರಿ ಎ’ ಕೂಟದಲ್ಲಿ ಫಿಯೊರೆಂಟಿನಾ ಕ್ಲಬ್‌ ತಂಡವನ್ನು ಪ್ರತಿನಿಧಿಸುತ್ತಿದ್ದರು. ಉಳಿದಂತೆ ಸ್ಯಾಂಪ್‌ಡೊರಿಯಾ ತಂಡದ ಮಿಡ್‌ಫಿàಲ್ಡರ್‌ ಡೆಪಾವೊಲಿ ಹಾಗೂ ಬರ್ಟೊಝಿಗೂ ಕೊರೊನಾ ತಟ್ಟಿದೆ. ಇದಕ್ಕೂ ಮೊದಲು ಇದೇ ತಂಡಗಳಲ್ಲಿನ ಒಟ್ಟು 7 ಆಟಗಾರರಲ್ಲಿ ಕೊರೊನಾ ಬೆಳಕಿಗೆ ಬಂದಿತ್ತು ಎಂದು ಕ್ಲಬ್‌ ಮೂಲಗಳು ತಿಳಿಸಿವೆ.

ಮನೆಯಲ್ಲೇ ಚಿಕಿತ್ಸೆ: “ಆಟಗಾರರಲ್ಲಿ ಉಸಿರಾಟದ ಸಮಸ್ಯೆ ಕಂಡು ಬಂದಿದೆ. ತತ್‌ಕ್ಷಣ ಆಸ್ಪತ್ರೆಗೆ ಸೇರಿಸಿದಾಗ ಕೊರೊನಾ ಇರುವುದು ಗೊತ್ತಾಗಿದೆ. ಸದ್ಯ ಎಲ್ಲರೂ ಮನೆಗೆ ತೆರಳಿದ್ದಾರೆ. ಅಲ್ಲಿದ್ದುಕೊಂಡೇ ಚಿಕಿತ್ಸೆ ನೀಡಲಾಗುತ್ತಿದೆ.

ಹನ್ನೊಂದು ಆಟಗಾರರ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಅವರೆಲ್ಲರ ಆರೋಗ್ಯ ಸ್ಥಿರವಾಗಿದೆ’ ಎಂದು ಫಿಯೊರೆಂಟಿನಾ ಕ್ಲಬ್‌ ಮಾಹಿತಿ ನೀಡಿದೆ.
ಆಟಗಾರರಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆ ಎ. 3 ರ ತನಕ “ಸೆರಿ ಎ’ ಫ‌ುಟ್‌ಬಾಲ್‌ ಕೂಟವನ್ನು ರದ್ದುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next