Advertisement

ಪಿಎಫ್ಐ ಬ್ಯಾನ್ ಮಾಡುವಂತೆ ಅಸೆಂಬ್ಲಿಯಲ್ಲಿ ಕೂಗಾಡಿದ್ದೇ ಕಾಂಗ್ರೆಸ್ ನವರು; ಸಿಎಂ ಬೊಮ್ಮಾಯಿ

12:01 PM Sep 29, 2022 | Team Udayavani |

ಹಾವೇರಿ: ಕಾಂಗ್ರೆಸ್ ನವರ ಕಡೆಯಿಂದ ಏನೂ ನಿರೀಕ್ಷೆ ಮಾಡಲಾಗದು. ಹಿಂದೆ ಪಿಎಫ್ ಐ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿದಾಗ ಇದೇ ಕಾಂಗ್ರೆಸ್ ನವರು ಬ್ಯಾನ್ ಮಾಡಿ, ಬ್ಯಾನ್ ಮಾಡಿಯೆಂದು ಅಸೆಂಬ್ಲಿಯಲ್ಲಿ ಕೂಗಾಡಿದ್ದರು. ಈಗ ಪಿಎಫ್ಐ ಬ್ಯಾನ್ ಮಾಡಿದ ಮೇಲೆ ಎಲೆಕ್ಷನ್ ಗಿಮಿಕ್ ಎನ್ನುವುದು ಎಷ್ಟು ಸರಿ ಎಂದು ಕಾಂಗ್ರೆಸ್ ನ ಬಿಕೆ ಹರಿಪ್ರಸಾದ್ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

Advertisement

ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಕಚೇರಿ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಜಿಲ್ಲೆಗೆ ಆಗಮಿಸಿದ ಸಿಎಂ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡಿ, ಬಜೆಟ್ ನಲ್ಲಿ ಘೋಷಣೆ  ಮಾಡಿದಂತೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬಂದಿದ್ದೇನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಜೆಟ್ ನಲ್ಲಿ ಹೇಳಿದಂತೆ ಕಾರ್ಯಗತ ಮಾಡಲಾಗುತ್ತಿದೆ ಎಂದು ಹೇಳಿದರು.

ಪಿಎಫ್ಐ ಈಗಾಗಲೇ ಬ್ಯಾನ್ ಮಾಡಲಾಗಿದೆ. ಮೊದಲು ಸಿಮಿ ಇತ್ತು, ಮುಂದೆ ಕೆ‌ಎಫ್ ಡಿ ಆಯ್ತು ಬಳಿಕ ಪಿಎಫ್ಐ ಆಗಿದೆ. ಎಸ್ ಡಿಪಿಐ ರಿಜಸ್ಟರಡ್ ಪೊಲಿಟಿಕಲ್ ಪಾರ್ಟಿ ಹೀಗಾಗಿ ಅದಕ್ಕೆ ಅದರದೇ ಆದಂತಹ ಕಾನೂನುಗಳಿದೆ. ಮುಂಬರುವ  ದಿನಗಳಲ್ಲಿ ಬೆಳವಣಿಗೆಗಳ ಆಧಾರದಲ್ಲಿ ಕ್ರಮ ತಗೊಳ್ಳಲಾಗುವುದು ಎಂದರು.

ಇದನ್ನೂ ಓದಿ:ವಿವಾಹಿತ / ಅವಿವಾಹಿತ ಸೇರಿ ಎಲ್ಲಾ ಮಹಿಳೆಯರು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು: ಸುಪ್ರೀಂ

ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಫ್ಲೆಕ್ಸ್ ಹರಿದು ಹಾಕಿದಕ್ಕೆ ಡಿಕೆ ಶಿವಕುಮಾರ್ ಕಿಡಿ ಕಾರಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಡಿಕೆಶಿ ಹೇಳಲಿ ಬಿಡಲಿ. ಮೊದಲೆಯದಾಗಿ ಅನುಮತಿ ಪಡೆದು ಫ್ಲೆಕ್ಸ್ ಹಾಕಬೇಕು. ಪರ್ಮಿಷನ್ ತಗೊಂಡಿದ್ದರ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವ ಪಕ್ಷಕ್ಕೂ ಫ್ಲೆಕ್ಸ್ ಹರಿಯುವಂತಹ ಅವಶ್ಯಕತೆ ಇಲ್ಲ. ಭಾರತ್ ಜೋಡೋ ಯಾರು ಮಾಡುತ್ತಿದ್ದಾರೆ, ಭಾರತ್ ಥೋಡೋ ಯಾರು ಮಾಡುತ್ತಿದ್ದಾರೆಂದು ಜನಕ್ಕೆ ಗೊತ್ತಿದೆ ಎಂದರು.

Advertisement

ಭಾರತ್ ಜೋಡೋ ಗೆ ಸಾಹಿತಿಗಳ ಬೆಂಬಲ ವಿಚಾರ, ಸಾಹಿತಿಗಳು ಎರಡೂ ಕಡೆ ಇದ್ದಾರೆ. ಕೆಲವು ವಿಚಾರದಲ್ಲಿ ಅಲ್ಲೂ ಬೆಂಬಲ ಮಾಡುತ್ತಾರೆ‌. ಕೆಲವು ವಿಚಾರದಲ್ಲಿ ಇಲ್ಲಿಯೂ ಬೆಂಬಲ ನೀಡುತ್ತಾರೆ ಎಂದರು.

ಅಖಿಲ ಭಾರತ ಸಾಹಿತ್ಯ ಸಮ್ಮೇಳಕ್ಕೆ ಈಗಾಗಲೇ ಪೂರ್ವ ತಯಾರಿ ನಡೆದಿದೆ. ನಿಗದಿತದಂತೆ ಬರುವ ನವೆಂಬರ್ ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯಲಿದೆ ಎಂದು ಹೇಳಿದರು.

ಈ ವೇಳೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರು ಓಲೇಕಾರ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next