Advertisement
ಇಲ್ಲಿನ ಕನ್ನಡ ಸಾಹಿತ್ಯ ಸಂಘದಲ್ಲಿ ಗುರುವಾರ ಎಸ್‌ಎಫ್‌ಐ ಹಮ್ಮಿಕೊಂಡಿದ್ದ ಜಿಲ್ಲಾ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಏಕಂದರೆ ಎರಡೂ ಅಪಾಯದಲ್ಲಿವೆ. ಸಂವಿಧಾನವನ್ನು ಬದಲಿಸುವ ಮತ್ತು ಮೀಸಲಾತಿಯನ್ನು ತೆಗೆಯುವ ನಿಟ್ಟಿನಲ್ಲಿ
ಸಂಚುಗಳು ನಡೆದಿವೆ. ಇದನ್ನು ನಾವು ಈಗಲೇ ಹತ್ತಿಕ್ಕದಿದ್ದರೆ ಅಥವಾ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ನಾವು ಇನ್ನಷ್ಟು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸಂವಿಧಾನ ಉಳಿಸಿ ಭಾರತವನ್ನು ವೈಜ್ಞಾನಿಕವಾಗಿ ಕಟ್ಟಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಎರಡು ಇಂದಿನ ವಿದ್ಯಾರ್ಥಿ ಸಮುದಾಯದ ಮುಂದೆ ಇದೆ
ಎಂದರು. ಶಿಕ್ಷಕ ಎಚ್.ಎಂ. ತಳವಾರ ಮಾತನಾಡಿ, ಇಂದು ದೇಶದಲ್ಲಿ ಮತೀಯ ಭಾವನೆಗಳನ್ನು ಕೆರಳಿಸಿ ರಾಜಕೀಯ ಹಿಡಿತ ಸಾಧಿಸುವ ಕೆಲಸ ನಡೆಯುತ್ತಿದೆ. ಈ ಕೆಲಸಕ್ಕಾಗಿ ವಿದ್ಯಾರ್ಥಿ ಸಮುದಾಯವನ್ನು ಬಳಕೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಇಲ್ಲದ ಆಲೋಚನೆಗಳನ್ನು ಹುಟ್ಟಿಸಲಾಗುತ್ತಿದೆ. ಕೋಮುವಾದಿ ಭಾವನೆಗಳಿಗೆ ವಿದ್ಯಾರ್ಥಿಗಳು ಕಿವಿಗೊಡಬೇಡಿ. ಇದರಿಂದ ನಿಮ್ಮ ಭವಿಷ್ಯ ಹಾಳು ಮಾಡಲಾಗುತ್ತಿದೆ. ಈಗ ಏನಿದ್ದರೂ ಶಿಕ್ಷಣಕ್ಕೆ, ಕಲಿಕೆಗೆ ಒತ್ತು ನೀಡಿ. ಇದರಿಂದ ನೀವು ಬೆಳೆಯಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ನೀವು ಮುಂದೆ ಸಮಾಜದ ಹಾಗೂ ದೇಶದ ಮುಂದೆ ಪ್ರಶ್ನೆಯಾಗಿ ನಿಲ್ಲುತ್ತಿರಿ ಎಂದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಸುನೀಲ ಮಾನ್ಪಡೆ ಮಾತನಾಡಿ, ಹೈಕ ಭಾಗಕ್ಕೆ 371 (ಜೆ)ನೇ ಕಲಂ ಜಾರಿ ಏನೋ ಮಾಡಲಾಗಿದೆ. ಇದು ಸರಿಯಾಗಿ ಜಾರಿಗೆ ಬರಬೇಕಾದರೆ ಸರಕಾರದ ಇಚ್ಛಾಶಕ್ತಿ ಕೊರತೆ ಇದೆ. ಅದನ್ನು ಮಾಡುವಲ್ಲಿ ಸರಕಾರ ಸೋತಿದೆ. ಸಂವಿಧಾನವನ್ನು ಬದಲಿಸುತ್ತೇವೆ ಎನ್ನುವ ಧ್ವನಿ ಎತ್ತುವ ಯಾರೇ ಆಗಿರಲಿ ಅವರನ್ನು ಶಿಕ್ಷೆಗೆ ಗುರಿ ಮಾಡುವಂತಹ ಕಾನೂನಿನ ಅವಶ್ಯತೆ ಇದೆ. ಇಲ್ಲದೆ ಹೋದರೆಯುವ ಜನತೆ ಇದಕ್ಕೂ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ ಎಂದರು.
ಎಸ್‌ಎಫ್‌ಐ ಸಂಘಟಕರಾದ ಅಪೂರ್ವಲಾಲ್ ನದಾಫ್, ಶಂಕರ ಕವಲಗಿ ಸ್ವಾಗತಿಸಿದರು. ರಾಮಲಿಂಗ ಬಿರಾದಾರಕಾರ್ಯಕ್ರಮ ನಿರೂಪಿಸಿ, ವಂದಿಸಿದರು.