Advertisement

ಗಾಲೆ ಟೆಸ್ಟ್‌: ಬಾಬರ್‌ ಆಜಂ ಶತಕ: ಲಂಕಾ-ಪಾಕ್‌ ಸಮಬಲ ಓಟ

11:50 PM Jul 17, 2022 | Team Udayavani |

ಗಾಲೆ: ಗಾಲೆ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ಥಾನ ನಡುವೆ ಸಮಬಲದ ಪೈಪೋಟಿ ಕಂಡುಬಂದಿದೆ.

Advertisement

ಶ್ರೀಲಂಕಾದ 222 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡಿದ ಪಾಕಿಸ್ಥಾನ 218ಕ್ಕೆ ಆಲೌಟ್‌ ಆಯಿತು. 4 ರನ್‌ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಲಂಕಾ ಎರಡನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 36 ರನ್‌ ಗಳಿಸಿದೆ.

ಪಾಕ್‌ ನಾಯಕ ಬಾಬರ್‌ ಆಜಂ ಅವರ 7ನೇ ಟೆಸ್ಟ್‌ ಶತಕ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪೂರೈಸಿದ 10 ಸಾವಿರ ರನ್‌ ಹಾಗೂ ಪ್ರಭಾತ್‌ ಜಯಸೂರ್ಯ ಸತತ 3ನೇ ಇನ್ನಿಂಗ್ಸ್‌ ನಲ್ಲೂ 5 ಪ್ಲಸ್‌ ವಿಕೆಟ್‌ ಕೆಡವಿದ್ದೆಲ್ಲ ರವಿವಾರದ ಆಟದ ವಿಶೇಷಗಳಾಗಿದ್ದವು.

ಪಾಕಿಸ್ಥಾನದ 218 ರನ್ನಿನಲ್ಲಿ ಆಜಂ ಗಳಿಕೆಯೇ 119 ರನ್‌ ಆಗಿತ್ತು (244 ಎಸೆತ, 12 ಬೌಂಡರಿ, 2 ಸಿಕ್ಸರ್‌). ಈ ಸಾಧನೆಯ ವೇಳೆ ಬಾಬರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಪೂರ್ತಿಗೊಳಿಸಿದರು. ಅತೀ ಕಡಿಮೆ 228 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ನೆಟ್ಟ ಏಷ್ಯಾದ ಬ್ಯಾಟರ್‌ ಎನಿಸಿದರು. 232 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಗೈದ ವಿರಾಟ್‌ ಕೊಹ್ಲಿ ದಾಖಲೆಯನ್ನು ಅವರು ಮುರಿದರು. ಎಡಗೈ ಸ್ಪಿನ್ನರ್‌ ಪ್ರಭಾತ್‌ ಜಯಸೂರ್ಯ 5 ವಿಕೆಟ್‌ ಉಡಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next