Advertisement

ಬಂತು ಮತ್ತೊಂದು ದುಬಾರಿ ಕಾರು

06:00 AM Jul 16, 2018 | Team Udayavani |

ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆಯ ಪ್ರಗತಿ ಅದೆಷ್ಟು ಆಕರ್ಷಣೀಯ ಎನ್ನುವುದಕ್ಕೆ ಈ ನೆಲದಲ್ಲಿ ಓಡಾಡುತ್ತಿರುವ ದೇಶಿ ಕಂಪನಿಗಳ ವಾಹನಗಳೇ ಅತ್ಯುತ್ತಮ ಸಾಕ್ಷಿ. ಒಂದಲ್ಲ, ಎರಡಲ್ಲ.. ಮುಕ್ಕಾಲು ಭಾಗ ವಾಹನಗಳು ದೇಶಿ ವಾಹನ ಸಂಸ್ಥೆಗಳು ಸಿದ್ಧಪಡಿಸಿರುವಂಥವೇ ಆಗಿವೆ. ಪ್ರತಿವರ್ಷದ ವಾಹನ ಪ್ರದರ್ಶನ ನಡೆದಾಗಲೂ ದೇಶಿ ವಾಹನ ತಯಾರಿಕಾ ಸಂಸ್ಥೆಗಳೇ ಪೈಪೋಟಿಯಲ್ಲಿರುತ್ತವೆ.

Advertisement

 ಈ ಪೈಪೋಟಿ ಅಷ್ಟಕ್ಕೇ ಸೀಮಿತವಾಗಿರುವುದಿಲ್ಲ. ವರ್ಷಾಂತ್ಯದವರೆಗೂ ಮುಂದುವರಿದಿರುತ್ತದೆ. ಸಾಮಾನ್ಯವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಇಂಥ ನಿತ್ಯದ ಪೈಪೋಟಿ ಜನಸಾಮಾನ್ಯನಿಗೆ ಗೊತ್ತಾಗುವುದು ದೀಪಾವಳಿ, ಯುಗಾದಿ, ಕ್ರಿಸ್‌ಮಸ್‌ನಂಥ ವಿಶೇಷ ಸಂದರ್ಭಗಳಲ್ಲಿ. ಗ್ರಾಹಕನನ್ನು ಸೆಳೆಯಲು ತರಹೇವಾರಿ ಆಫ‌ರ್‌ಗಳನ್ನು ನೀಡುವುದನ್ನು ಕಾಣುತ್ತೇವೆ. ಇದು ಗ್ರಾಹಕನನ್ನು ಗುರಿಯಾಗಿಸಿ ಇಟ್ಟುಕೊಂಡು ನಡೆಯುವ ಪೈಪೋಟಿಯಾದರೆ, ಮಾರುಕಟ್ಟೆಗಾಗಿ ತಂತ್ರಗಾರಿಕೆ ನಡೆಸುವ ತಜ್ಞರ ಲೆಕ್ಕಾಚಾರಗಳೇ ಬೇರೆಯಾಗಿರುತ್ತವೆ. ಹೊಸ ವಾಹನವೊಂದನ್ನು ಪರಿಚಯಿಸುವಾಗ ತಂತ್ರಗಾರಿಕೆಗಳೂ ಬದಲಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ, ‘ಇದೇನಿದು ಅನ್‌ ಸೀಸನ್‌ನಲ್ಲಿ ಲಾಂಚ್‌ ಮಾಡುತ್ತಿದ್ದಾರಲ್ಲ’ ಎಂದು ಉದ್ದರಿಸುವಂತೆ ಇರುತ್ತದೆ. ಆದರೆ ಹೀಗೆ ಪ್ರಚಾರ ಮಾಡುವುದರ ಹಿಂದೆ ಆ ವಾಹನ ಸಂಸ್ಥೆಯ ಲೆಕ್ಕಾಚಾರಗಳೇ ಬೇರೆಯಾಗಿರುತ್ತದೆ.

 ಅಂಥದೇ ಸಂದರ್ಭದಲ್ಲಿ ಎನ್ನುವಂತೆ ಇದೀಗ ಮಳೆಗಾಲದ ಸಮಯದಲ್ಲಿ ಜರ್ಮನಿ ಮೂಲದ ವಾಹನ ತಯಾರಿಕಾ ಸಂಸ್ಥೆ ಪೋರ್ಷೆ, ಹೊಸದೊಂದು ಸೆಡಾನ್‌ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ನಿಧಾನವಾಗಿ ಭಾರತೀಯ ಲಗ್ಸುರಿ ಕಾರುಗಳ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುವ ಉದ್ದೇಶ ಹೊಂದಿರುವ ಪೋರ್ಷೆ ತನ್ನ 911 ಜಿಟಿ2 ಆರ್‌ಎಸ್‌ ಕಾರನ್ನು ರಸ್ತೆಗಿಳಿಸಿದೆ. ದೇಶದ ಪ್ರಮುಖ ನಗರಗಳ ಶೋ ರೂಂಗಳಲ್ಲಿ ಈಗ 911 ಜಿಟಿ2 ಆರ್‌ಎಸ್‌ ಕಾರನ್ನು ನೋಡಬಹುದಾಗಿದೆ.

 ಧೂಳೆಬ್ಬಿಸುವ ನಿರೀಕ್ಷೆ
2017ರಲ್ಲಿಯೇ ಪೋರ್ಷೆ ಪರಿಚಯಿಸಿದ ಎರಡನೇ ತಲೆಮಾರಿನ 911 ಜಿಟಿ2 ಲಗುÕರಿ ಕಾರು, ಈಗ ಮತ್ತಷ್ಟು ಬದಲಾವಣೆಯೊಂದಿಗೆ ಭಾರತದ ರಸ್ತೆಯಲ್ಲಿ ಧೂಳೆಬ್ಬಿಸಲಿದೆ ಎನ್ನುವುದು ಸಂಸ್ಥೆಯ ನಿರೀಕ್ಷೆಯಾಗಿದೆ. 

ಎಂಜಿನ್‌ ಸಾಮರ್ಥ್ಯ
ಉತ್ತಮ ಗುಣಮಟ್ಟದ 3.8 ಲೀಟರ್‌ನ ಟಬೋìಚಾರ್ಜ್ಡ್ ಎಂಜಿನ್‌ ಅಳವಡಿಸಲಾಗಿದೆ. 686 ಬಿಎಚ್‌ಪಿ, 750 ಎನ್‌ಎಂ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಇದರದ್ದಾಗಿದೆ. ಜಡ್‌ಎಫ್ ಆಧರಿತ 7ಸ್ಪೂಡ್‌ ಡ್ಯುಯಲ್‌ ಗೇರ್‌ ಬಾಕ್ಸ್‌ ನೀಡಲಾಗಿದೆ. ಹೀಗಾಗಿ ಪ್ರತಿ ಗಂಟೆಗೆ 340 ಕಿಲೋುàಟರ್‌ ಚಲಿಸಬಲ್ಲ ಸಾಮರ್ಥ್ಯದ ಕಾರು ಇದಾಗಿದೆ. ಕಾರ್ಬನ್‌ ಬಾನೆಟ್‌ ಹಾಗೂ ಹಗುರವಾದ ಮೆಗ್ನಿàಶಿಯಂನಿಂದ ಕೂಡಿರುವ ಟಾಪ್‌ ರೂಫ್ ಇದರದ್ದಾಗಿದೆ. ಹಾಗಾಗಿ, ಒಟ್ಟಾರೆ ತೂಕದಲ್ಲಿ ಈ ಹಿಂದಿನ ಈ ಮಾದರಿಯ ಕಾರಿಗಿಂತ ಕೊಂಚ ಕಡಿಮೆ ಭಾರ ಹೊಂದಿದೆ. ಟೈಟಾನಿಯಂ ಎಕ್ಸಾಸ್ಟ್‌ ವ್ಯವಸ್ಥೆಯನ್ನೂ ಕಾರಿನಲ್ಲಿ ಅಳವಡಿಸಲಾಗಿದೆ. 

Advertisement

ಆಧುನಿಕ ತಂತ್ರಜ್ಞಾನ
ಆಟೋಮೊಬೈಲ್‌ ಕ್ಷೇತ್ರದ ಅತ್ಯಾಧುನಿಕ ತಂತ್ರಜಾnನಗಳನ್ನು ಅಳವಡಿಸಿಕೊಳ್ಳಲಾಗಿದೆ. ಕಾರಿನಲ್ಲಿನ ಡ್ಯಾಶ್‌ಬೋರ್ಡ್‌ನಲ್ಲಿ ಇಂದಿನ ಅತಿ ದುಬಾರಿ ಕಾರುಗಳಲ್ಲಿ ಇರುವ ಬಹುತೇಕ ಆಪ್ಶನ್‌ಗಳು ಈ ಕಾರಿನಲ್ಲಿಯೂ ಇರುವುದನ್ನು ಗಮನಿಸಬಹುದಾಗಿದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ವಿಶೇಷವಾದ ಗಮನ  ನೀಡಿರುವುದು ಸ್ಪಷ್ಟ. ಕಾಸಿಗೆ ತಕ್ಕ ಕಜ್ಜಾಯ ಎನ್ನುವಂತೆ 911 ಜಿಟಿ2 ಕೂಡ ದುಬಾರಿ ಕಾರುಗಳ ಸಾಲಿಗೆ ಸೇರುವ ವಾಹನವೇ ಆಗಿದೆ.

ಎಕ್ಸ್‌ ಶೋ ರೂಂ ಬೆಲೆ: 3.88 ಕೋಟಿ ರೂ.
ಮೈಲೇಜ್‌: ಲೀಟರ್‌ಗೆ10ರಿಂದ 14

ಏನಿದೆ ವಿಶೇಷ?
– 2.7 ಸೆಕೆಂಡ್‌ಗಳಲ್ಲಿ ಗಂಟೆಗೆ 60ಕಿ.ಮೀ. ವೇಗ ಕಂಡುಕೊಳ್ಳಲಿದೆ.
– 10.3 ಸೆಕೆಂಡ್‌ಗಳಲ್ಲಿ ಕನಿಷ್ಠ ಎರಡೂವರೆ ಕಿ.ುà. ದೂರ ಕ್ರಮಿಸಬಲ್ಲದು.
– ಕಾರಿನ ಗರಿಷ್ಠ ವೇಗ ಗಂಟೆಗೆ 211ಕಿ.ಮೀ.
– ಕಾರಿನ ಗ್ಲಾಸ್‌ ಹಾಗೂ ಬಾಡಿಯ ಯಾವುದೇ ಭಾಗಕ್ಕೆ ಗುಂಡು ಹಾರಿಸಿದರೂ ಅಷ್ಟು ಸುಲಭವಾಗಿ ಒಳಪ್ರವೇಶಿಸದು.
– ಕಾರಿಗೆ ಅಪಾಯವಿದೆ ಎನ್ನುವ ಸಂದೇಶವನ್ನು ಮುಂಚಿತವಾಗಿಯೇ ನೀಡಿ, ಚಾಲಕನನ್ನು ಅಲರ್ಟ್‌ ಮಾಡುವ ತಂತ್ರಜ್ಞಾನ ಅಳವಡಿಸಲಾಗಿದೆ.

ಗಣಪತಿ ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next