Advertisement

ಸತತ 4ನೇ ವರ್ಷವೂ ನಡೆಯಿತು ಪಾಳು ಗದ್ದೆಯಲ್ಲಿ ನಾಟಿ ಕಾರ್ಯ

06:35 AM Aug 01, 2017 | |

ಉಡುಪಿ: ನವ ಚೈತನ್ಯ ಯುವಕ ಮಂಡಲದ ವತಿಯಿಂದ ನಡೆದ 4ನೇ ವರ್ಷದ ನಟ್ಟಿ ಕೃಷಿಯನ್ನು ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಡಾ! ರೋಶನ್‌ ಕುಮಾರ್‌ ಶೆಟ್ಟಿ ಯವರು ನೇಜಿಯನ್ನು ಹೆಂಗಸರಿಗೆ ಕೊಟ್ಟು ಹಾಗೂ ಸ್ವತಃ ಗದ್ದೆಗೆ ಇಳಿದು ನೇಜಿಯನ್ನು ನಟ್ಟಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

ಎಲ್ಲಾ ಯುವಕ ಮಂಡಲಗಳು ಈ ರೀತಿಯ ಯೋಜನೆಯನ್ನು ಹಾಕಿಕೊಂಡು ದೇಶದ ಆಹಾರ ಉತ್ಪಾದನೆಯಲ್ಲಿ ತಮ್ಮದೆ ಆದ ಸೇವೆಯನ್ನು ನೀಡಿದಂತಾಗುತ್ತದೆ ಎಂದರು, ಈ ಸಂಸ್ಥೆಯನ್ನು ಬಹಳ ಸೂಕ್ಷ ದಿಂದ ಗಮನಿಸುತ್ತಿದ್ದೇನೆ.ಬಹಳ ಅದ್ಭುತವಾದ ಕೆಲಸವನ್ನು ಮಾಡಿಕೊಂಡು ಬಂದಿರುತ್ತಾರೆ. ಯುವಜನ ಇಲಾಖೆಯಿಂದ ಯಾವುದೆಲ್ಲ ಸವಲತ್ತುಗಳು ಇದೆ ಅದನ್ನು ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಮಖ್ಯ ಅತಿಥಿಯಾಗಿ ಕೃಷಿ ಸಂಘ ಉಡುಪಿ ಇದರ ಸದಸ್ಯರಾದ ಶ್ರೀ ಶ್ರೀನಿವಾಸ ಬಲ್ಲಾಲ್‌ ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಬಿವ್ರದ್ದಿ ಯೋಜನೆಯ ಪ್ರೇಮರಾಜ್‌, ಮತ್ತು ಯಶೋದ ,ಕೃಷಿ ಸಂಘ ಪೆರಂಪಳ್ಳಿ ವಲಯ ಅಧ್ಯಕ್ಷರು ಸುಬ್ರಹ್ಮಣ್ಯ, ಶೀಂಬ್ರ ಮಠದ ಅರ್ಚಕರು ಗುರುಪ್ರಸಾದ್‌ ಉಪಾಧ್ಯಾಯ, ಸಂಘದ ಅಧ್ಯಕ್ಷರಾದ ನೀತೇಶ್‌ ಉಪಸ್ಥಿತರಿದ್ದರು ,ಈ ಸಂದರ್ಭದಲ್ಲಿ ನಟ್ಟಿ ಮಾಡುವ ಹಿರಿಯ ಮಹಿಳೆಯರಾದ ಭಾಗೀ ಕೋಟ್ಯಾನ್‌, ನರ್ಸಿ, ಬೇಬಿ,ಅಕ್ಕಮ, ಗಿರಿಜಾ, ಸುನೀತಾ, ಪ್ರೇಮ, ಸರಸು, ಇವರ ಮಾರ್ಗದರ್ಶನದಲ್ಲಿ ಸಂಘದ ಸದಸ್ಯರು ಮಕ್ಕಳು, ಹಿರಿಯರು, ಕಿರಿಯರು, ಸರಿಸುಮಾರು 80 ಜನರು ಈ ನಟ್ಟಿ ಕಾರ್ಯದಲ್ಲಿ ಭಾಗವಹಿಸಿದರು, ಈ ಸಂದರ್ಭದಲ್ಲಿ ಶಂಕರ್‌ ಕುಲಾಲ್‌ ರವೀಂದ್ರ, ವಿಜಯ,ಸುರೇಶ್‌ ಕೋಟ್ಯಾನ್‌ ಸುರೇಶ್‌, ಶೇಖರ, ಸುಭಾಸ್‌, ಕೀರ್ತನ್‌ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು

Advertisement

Udayavani is now on Telegram. Click here to join our channel and stay updated with the latest news.

Next