Advertisement

ಬಿಎಸ್ ವೈ ಆಪ್ತನ ನಿವಾಸದ ಮೇಲೆ ಐಟಿ ದಾಳಿ, ಬಿಜೆಪಿ ‘ಆಂತರಿಕ ವಿಷಯ’ ಇರಬಹುದು: ಎಚ್ಡಿಕೆ

01:30 PM Oct 07, 2021 | Team Udayavani |

ಕಲಬುರಗಿ: ರಾಜ್ಯದಲ್ಲಿ ತುಂಬಾ ದಿನಗಳ ನಂತರ ಮತ್ತು ಉಪ ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿ ನಡೆದಿದ್ದು ಹಾಗೂ ಬಿಎಸ್ ವೈ ಆಪ್ತರ ನಿವಾಸದ ಮೇಲೆ ಈ ದಾಳಿ ಮಾಡಿದ್ದು ಬಿಜೆಪಿಯ ‘ಆಂತರಿಕ ವಿಷಯ’ ಇರಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ಲೇಷಿಸಿದರು.

Advertisement

ಸಿಂದಗಿಗೆ ತೆರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂದಗಿಯಲ್ಲಿ ಅಲ್ಪಸಂಖ್ಯಾತರ ಅಭ್ಯರ್ಥಿ ಹಾಕಿರುವ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ನಮ್ಮ ಪಕ್ಷದ ಮಾತನಾಡಲು ಸಿದ್ದರಾಮಯ್ಯ ಯಾರು? ನಮ್ಮ ಬಗ್ಗೆ ಮಾತನಾಡಲು ಇವರು ಯಾವ ದೊಣ್ಣೆ ನಾಯಕ ಎಂದು ಕಿಡಿಕಾರಿದರು.

ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಲು ಮತ್ತು ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ ಏನು ಕೊಡುಗೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರೇ ಸಿದ್ದರಾಮಯ್ಯ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ನಾನು ಎಚ್ಚರಿಸಲು ಬಯಸುತ್ತೇನೆ ಎಂದರು.

ಇದನ್ನೂ ಓದಿ:ಆರ್ ಎಸ್ಎಸ್ ಇಲ್ಲದಿದ್ದರೆ ಭಾರತವಿಂದು ಪಾಕಿಸ್ತಾನದಂತಾಗುತ್ತಿತ್ತು: ಈಶ್ವರಪ್ಪ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಸಿದ್ದರಾಮಯ್ಯನವರೇ ಕಾರಣ. ಯಾವ ಪಕ್ಷದಿಂದ ಹಚ್ಚು ಶಾಸಕರು ಬಿಜೆಪಿಗೆ ಸೇರಿ, ಅಧಿಕಾರಕ್ಕೆ ತರಲು ಕಾರಣರಾದವರು ಎಂದು ಮೊದಲು ಅವರು ಹೇಳಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

Advertisement

ಈಗಿನ ಆರ್ ಎಸ್ಎಸ್ ದೇಶ ಹಾಳು ಮಾಡುವ ಸಂಘಟನೆಯಾಗಿದೆ. 40 ವರ್ಷಗಳ ಹಿಂದಿನ ಆರ್ ಎಸ್ಎಸ್ ಬೇರೆ ಇತ್ತು. ಆಗಿನ ಆರ್ ಎಸ್ಎಸ್ ಕುರಿತಂತೆ ದೇವೇಗೌಡರು ಮಾತನಾಡಿದ್ದರು. ಆದರೆ, ಈಗಿರುವ ಆರ್ ಎಸ್ಎಸ್ ಬೇರೆ ಎಂದು ಕುಮಾರಸ್ವಾಮಿ ತಮ್ಮ ವಾಗ್ದಾಳಿ ಮುಂದುವರೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next