Advertisement

ಐಟಿ ದಾಳಿ; ಮೈತ್ರಿ ಪ್ರತಿದಾಳಿ

05:55 AM Mar 29, 2019 | Team Udayavani |

 

Advertisement

ಬೆಂಗಳೂರು: ಲೋಕ ಸಭೆ ಚುನಾವಣೆ ಹೊಸ್ತಿಲಿ ನಲ್ಲಿ ಮೈತ್ರಿ ಸರಕಾರದ ಸಚಿವರು, ಶಾಸಕರ ಸಂಬಂಧಿ ಗಳು ಮತ್ತು ಆಪ್ತರ ಮನೆ ಹಾಗೂ ಕಚೇರಿಗಳ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು, ರಾಮನಗರ, ಚಿಕ್ಕ ಮಗಳೂರು, ಮಂಡ್ಯ, ಮೈಸೂರು, ಹಾಸನ ಮತ್ತು ಶಿವಮೊಗ್ಗಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಅಧಿ ಕಾರಿಗಳ ತಂಡ ಮುಂಜಾನೆ ಐದು ಗಂಟೆ  ಯಿಂದಲೇ ಕೇಂದ್ರ ಭದ್ರತಾ ಪಡೆ  ಗಳನ್ನು ನಿಯೋಜಿಸಿಕೊಂಡು ಏಕ  ಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿ ಕೊಂಡಿದೆ.

ಎಚ್‌.ಡಿ. ದೇವೇಗೌಡ, ಸಿಎಂ ಕುಮಾರ ಸ್ವಾಮಿ, ಸಚಿವ ರೇವಣ್ಣ ಕುಟುಂಬದ ಆಪ್ತರು; ಸಚಿವರಾದ ಡಿ.ಕೆ. ಶಿವಕುಮಾರ್‌, ಸಿ.ಎಸ್‌. ಪುಟ್ಟ ರಾಜು ಸಂಬಂಧಿಕರ ಮನೆ  ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕೆಲವು ಆಸ್ತಿ ಸಂಬಂಧಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಜಯನಗರ, ಬಸವನ ಗುಡಿ, ಎಚ್‌ಎಸ್‌ಆರ್‌ ಲೇಔಟ್‌, ಕೋರಮಂಗಲ ಮತ್ತು ಇತರೆಡೆ ಕೆಲವು ಉದ್ಯಮಿ ಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಐಟಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಅನುಕೂಲ ವಾಗಲಿ ಎಂದು ಆದಾಯ ತೆರಿಗೆ ಇಲಾಖೆ ಯಿಂದ ದಾಳಿ ಮಾಡಿಸಿ ದ್ದಾರೆ. ಇಂತಹ ದಾಳಿಗಳಿಗೆ ಹೆದರುವುದಿಲ್ಲ. ಎಷ್ಟೇ ದಾಳಿಗಳಾದರೂ ನನ್ನ ಮಗ ನಿಖೀಲ್‌ ಗೆಲುವು ತಪ್ಪಿಸಲು ಅಸಾಧ್ಯ.
– ಎಚ್‌.ಡಿ. ಕುಮಾರಸ್ವಾಮಿ
ಮುಖ್ಯಮಂತ್ರಿ

ಹಾಸನದಲ್ಲಿ ಪುತ್ರ ಪ್ರಜ್ವಲ್‌ ಮತ್ತು ಮಂಡ್ಯದಲ್ಲಿ ಸಿಎಂ ಕುಮಾರ ಸ್ವಾಮಿ ಅವರ ಮಗ ನಿಖೀಲ್‌ ಸ್ಪರ್ಧಿಸಿರುವ ಕಡೆ ಮಾತ್ರ ಐಟಿ ಅಧಿಕಾರಿಗಳು ದಾಳಿ ನಡೆಸಿ ದ್ದಾರೆ. ರಾಜ್ಯದ 28 ಕ್ಷೇತ್ರ ಗಳಲ್ಲಿ ಮಂಡ್ಯ ಮತ್ತು ಹಾಸನ ಗಳನ್ನು ಮಾತ್ರ ಟಾರ್ಗೆಟ್‌ ಮಾಡಲಾಗಿದೆ. ಇದಕ್ಕೆ ನಾವು ಹೆದರುವುದಿಲ್ಲ.
– ಎಚ್‌.ಡಿ. ರೇವಣ್ಣ,
ಲೋಕೋಪಯೋಗಿ ಸಚಿವ

Advertisement

ಕೇಂದ್ರ ತನಿಖಾ ಸಂಸ್ಥೆ ಅಧಿಕಾರಿಗಳು ಅವರ ಕೆಲಸ ಅವರು ಮಾಡಿಕೊಂಡು ಹೋಗುತ್ತಾರೆ. ಅದರಲ್ಲಿ ರಾಜಕೀಯ ಬೆರೆಸುವುದು ತರವಲ್ಲ. ದಾಳಿಗೊಳಗಾದವರು ಪ್ರಾಮಾಣಿಕರಾಗಿದ್ದರೆ ಯಾಕೆ ಹೆದರಬೇಕು?
– ಸುಮಲತಾ
ಮಂಡ್ಯ ಪಕ್ಷೇತರ ಅಭ್ಯರ್ಥಿ

ಐಟಿ ದಾಳಿಗೆ ರಾಜಕೀಯ ಬಣ್ಣ ಕೊಡು ವುದು ಸರಿಯಲ್ಲ. ಅವರಿಗೆ ಅವರದೇ ಆದ ಮಾಹಿತಿ ಇರುತ್ತದೆ. ಅದರಂತೆ ದಾಳಿ ಮಾಡು ತ್ತಾರೆ. ಎಲ್ಲದಕ್ಕೂ ನರೇಂದ್ರ ಮೋದಿ, ಅಮಿತ್‌ ಶಾ ಕಾರಣ ಎಂದು ದೂರು ವುದು ಸರಿಯಲ್ಲ.
– ಯಡಿಯೂರಪ್ಪ
ವಿಪಕ್ಷ ನಾಯಕ

ಐಟಿ ವಿರುದ್ಧ ವಿಪಕ್ಷ ದಾಳಿ

ಬೆಂಗಳೂರು: “ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನುಡಿದಿದ್ದ ಭವಿಷ್ಯ’ದಂತೆ ರಾಜ್ಯದ ವಿವಿಧೆಡೆ ಸಮ್ಮಿಶ್ರ ಸರಕಾರದ ಸಚಿವರು- ನಾಯಕರ ಸಂಬಂಧಿಗಳು ಮತ್ತು ಆಪ್ತರ ನಿವಾಸಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಇದು ಭಾರೀ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ದಾಳಿಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕಾರಣ ಎಂದು ದೋಸ್ತಿ ನಾಯಕರು ಆರೋಪಿಸಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆಗೆ ಐಟಿ ಕಚೇರಿ ಮುಂದೆ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಡಿಸಿಎಂ ಜಿ. ಪರಮೇಶ್ವರ್‌ ಸಹಿತ ಹಲವಾರು ನಾಯಕರ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಲಾಗಿದೆ.
ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ನೀವು ನ್ಯಾಯಯುತವಾಗಿ ಇದ್ದರೆ ಭಯ ಏಕೆ? ಹಿಂದೆ ಬಿಜೆಪಿ ನಾಯಕರ ಬೆಂಬಲಿಗರ ಮೇಲೂ ಆದಾಯ ತೆರಿಗೆ ದಾಳಿ ನಡೆದಿದೆ. ಜೆಡಿಎಸ್‌-ಕಾಂಗ್ರೆಸ್‌ ಪೂರ್ವಾಗ್ರಹ ಪೀಡಿತವಾಗಿ ಸುಳ್ಳಿನ ಆರೋಪ ಮಾಡುತ್ತಿದೆ ಎಂದು ಟೀಕಿಸಿದೆ.

ಆದಾಯ ತೆರಿಗೆ ಇಲಾಖೆಯು ಸ್ಪಷ್ಟನೆ ನೀಡಿ ಸಚಿವ, ಶಾಸಕ ಅಥವಾ ಸಂಸದರ ನಿವಾಸಗಳ ಮೇಲೆ ದಾಳಿ ಮಾಡಿಲ್ಲ.

ಇದೇ ಮೊದಲು
ರಾಜ್ಯದ ರಾಜಕೀಯ ಇತಿಹಾಸ ದಲ್ಲಿ ಇದೇ ಮೊದಲ ಬಾರಿಗೆ ಐಟಿ ಕಚೇರಿ ಮುಂದೆ ಮುಖ್ಯಮಂತ್ರಿ ಪ್ರತಿಭಟನೆ ಮಾಡಿದ್ದು, ಮಾಜಿ ಸಿಎಂ ಸಿದ್ದ ರಾಮಯ್ಯ, ಡಿಸಿಎಂ ಡಾ| ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವರಾದ ಡಿ.ಕೆ. ಶಿವಕುಮಾರ್‌, ಡಿ.ಸಿ. ತಮ್ಮಣ್ಣ, ಸಾ.ರಾ. ಮಹೇಶ್‌ ಪಾಲ್ಗೊಂಡು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.

ಸಾಮಾಜಿಕ ಜಾಲತಾಣ ಗಳಲ್ಲೂ ಈ ಬಗ್ಗೆ ಪರ- ವಿರೋಧ ಚರ್ಚೆಗಳು ನಡೆ ದಿವೆ. ಈ ಕುರಿತ ವಿಚಾರಗಳೇ ಗುರು ವಾರ ಇಡೀ ದಿನ ಟ್ರೋಲ್‌ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next