Advertisement

ಐಟಿ ಉದ್ಯೋಗದ ಆಫ‌ರ್‌ ವಾಪಸ್‌?: ಕ್ಯಾಂಪಸ್‌ನಿಂದ ಆಯ್ಕೆಯಾದವರಿಗೆ ನಿರಾಶೆ

10:20 PM Oct 03, 2022 | Team Udayavani |

ನವದೆಹಲಿ: ಕ್ಯಾಂಪಸ್‌ ಸಂದರ್ಶನ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೀಡಲಾದ ಆಫ‌ರ್‌ ಲೆಟರ್‌ಗಳನ್ನು ವಿಪ್ರೊ, ಇನ್ಫೋಸಿಸ್‌ ಮತ್ತು ಟೆಕ್‌ ಮಹೀಂದ್ರಾ ಕಂಪನಿಗಳು ಹಿಂಪಡೆದಿವೆ ಎಂದು ವರದಿಯಾಗಿದೆ.

Advertisement

ಹಲವು ಹಂತಗಳ ಸಂದರ್ಶನ ಮತ್ತು ಕಠಿಣ ಆಯ್ಕೆ ಪ್ರಕ್ರಿಯೆ ನಂತರ ನೂರಾರು ಮಂದಿ ವಿದ್ಯಾರ್ಥಿಗಳಿಗೆ ಆಫ‌ರ್‌ ಲೆಟರ್‌ಗಳನ್ನು ಈ ಐಟಿ ಕಂಪನಿಗಳು ನೀಡಿದ್ದವು. ಮೊದಲಿಗೆ ಕಂಪನಿಗೆ ಸೇರುವ ದಿನಾಂಕವನ್ನು ಮುಂದೂಡಲಾಗಿತ್ತು. ನಂತರ ಆಫ‌ರ್‌ ಲೆಟರ್‌ಗಳನ್ನೇ ಕಂಪನಿಗಳು ಹಿಂಪಡೆದಿವೆ. ಇದರಿಂದ ಉದ್ಯೋಗದ ಕನಸು ಕಂಡಿದ್ದ ವಿದ್ಯಾರ್ಥಿಗಳಿಗೆ ನಿರಾಶೆಯಾಗಿದೆ ಎಂದು “ದ ಬ್ಯುಸಿನೆಸ್‌ ಲೈನ್‌’ ವರದಿ ಮಾಡಿದೆ.

ಟಿಸಿಎಸ್‌ ಉದ್ಯೋಗಿಗಳಿಗೆ ನೀಡಬೇಕಾಗಿದ್ದ ವೇರಿಯೇಬಲ್‌ ಪೇ ಅನ್ನು ಮುಂದೂಡಿದ್ದರೆ, ಇನ್ಫೋಸಿಸ್‌ನಲ್ಲಿ ಅದನ್ನು ಶೇ.70ರಷ್ಟು ಇಳಿಕೆ ಮಾಡಲಾಗಿತ್ತು. ವಿಪ್ರೋದಲ್ಲಿ ವೇರಿಯೇಬಲ್‌ ಪೇ ನೀಡುವುದನ್ನು ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next