Advertisement

ದೇಶದ ಭವಿಷ್ಯದ ಬಗ್ಗೆ ಪ್ರಧಾನಿ ಮೋದಿ ಹೊಸ ಸೂತ್ರ : IT + IT = IT

03:14 PM May 10, 2017 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಭವಿಷ್ಯವನ್ನು ವಿವರಿಸಲು ಹೊಸ ರೀತಿಯ ವಿಲಕ್ಷಣ ಸೂತ್ರವೊಂದನ್ನು ಕಂಡುಕೊಂಡಿದ್ದಾರೆ. ಅದೆಂದರೆ ಐಟಿ + ಐಟಿ = ಐಟಿ.

Advertisement

ಪ್ರಧಾನಿ ಮೋದಿ ಪ್ರಕಾರ ಐಟಿ ಎಂದರೆ ಇನ್‌ಫಾರ್ಮೇಶನ್‌ ಟೆಕ್ನಾಲಜಿ + ಐಟಿ ಎಂದರೆ ಇಂಡಿಯಾ ಟ್ಯಾಲೆಂಟ್‌ = ಐಟಿ ಎಂದರೆ ಇಂಡಿಯಾ ಟುಮಾರೋ !

ಪ್ರಧಾನಿ ಮೋದಿ ಅವರಿಂದು ಸುಪ್ರೀಂ ಕೋರ್ಟಿನ ಹೊಸ ಡಿಜಿಟಲ್‌ ದೂರು ಸಲ್ಲಿಕೆ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡುತ್ತಾ ದೇಶದ ಭವಿಷ್ಯವನ್ನು ಕಾಣುವ ತಮ್ಮ ಈ ಹೊಸ ಗಣಿತ ಸೂತ್ರವನ್ನು ಸಭಿಕರ ಮುಂದೆ ಇಟ್ಟರು. ಮೋದಿ ಅವರ ಈ ಸೂತ್ರದ ಮಹತ್ವವನ್ನು ಜನರು ತಲೆದೂಗಿದರು.

ಮೋದಿ ಅವರು ಮಾತನಾಡುತ್ತಾ, “ಉಜ್ವಲ ಭವಿಷ್ಯಕ್ಕಾಗಿ ದೇಶವು ತಂತ್ರಜ್ಞಾನವನ್ನು ಅಪ್ಪಿಕೊಳ್ಳುವ ಅಗತ್ಯವಿದೆ. ಅರೆಬರೆಯಾಗಿ ತಂತ್ರಜ್ಞಾನವನ್ನು ಅಪ್ಪಿಕೊಂಡರೆ ಸಾಲದು; ದೇಶವು ಸಾಮೂಹಿಕವಾಗಿ ತಂತ್ರಜ್ಞಾನವನ್ನುಅಪ್ಪಿಕೊಳ್ಳಬೇಕು. ತಂತ್ರಜ್ಞಾನದ ನಿಜವಾದ ಪೂರ್ಣ ಲಾಭವನ್ನು ನಾವು ಪಡೆದುಕೊಳ್ಳಬೇಕಿದ್ದರೆ ಸಮಾಜದ ಎಲ್ಲ ವರ್ಗಗಳ ಜನರು ತಂತ್ರಜ್ಞಾನವನ್ನು ಅಪ್ಪಿಕೊಳ್ಳಬೇಕು’ ಎಂದು ಒತ್ತಿ ಹೇಳಿದರು. 

ತಂತ್ರಜ್ಞಾನ ಅಪ್ಪಿಕೊಳ್ಳಬೇಕಾದರೆ ನಮ್ಮ ಮನೋಧರ್ಮ ಮುಖ್ಯವಾಗಿ ಬದಲಾಗಬೇಕು. ನಾವು ಯಾರೋ ಒಬ್ಬರಿಗೆ ಎಸ್‌ಎಂಎಸ್‌ ಕಳುಹಿಸುತ್ತೇವೆ; ಬಳಿಕ ಅವರಿಗೇ ನಾವು ನನ್ನ ಎಸ್‌ಎಂಎಸ್‌ ನೋಡಿದಿರಾ ? ಎಂದು ಕೇಳುತ್ತೇವೆ. ಇದನ್ನು ನಾನು ಹಳೇ ಮನೋಧರ್ಮದವರರು ಎನ್ನುವುದು; ಇದು ಮುಖ್ಯವಾಗಿ ಬದಲಾಗಬೇಕು ಎಂದು ಮೋದಿ ಹೇಳಿದರು. 

Advertisement

ಇ-ಆಡಳಿತೆಯ ಮಹತ್ವವನ್ನು ಮೋದಿ ಒತ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next