Advertisement

ಒಲವೆಂದರೆ ಬೇವು- ಬೆಲ್ಲವಲ್ಲ ಅದು ಬಾಳಿನ ಉಪ್ಪು

03:45 AM Mar 29, 2017 | Harsha Rao |

ನನ್ನೊಳಗೆ ಅವನಿದ್ದಾನೆ ಮತ್ತು ನನ್ನಂತಹ ಹಠಮಾರಿಯೊಬ್ಬಳ ಹದಿಹರೆಯದ ಹಾದಿ ಸವೆಯಲು ಬೇಕಿರುವ ಚೌಕಟ್ಟಿಲ್ಲದ ಆತ್ಮ ಸಂಗಾತದ ಮುದವನ್ನು ನೀಡಿದ್ದಾನೆ. ಅಹಂಕಾರವಿಲ್ಲದ ಕಟ್ಟೊಲುಮೆಯೊಂದು ನನ್ನ ಮನೆಯೊಳಗೆ ಅರಳಿ ಕಂಪು ಸೂಸಿದ್ದೇ ಅವನಿಂದ ಎನಿಸಿ ಕರೆ ಮಾಡಲಾ? ಎಂದು ಜೀವ ತುಡಿಯುತ್ತಿತ್ತು.

Advertisement

ನಿನ್ನ ಯೋಚನೆಗಳೆಲ್ಲ ಹಾಡುವ ಲಿನೆಟ್‌ಗಳಾಗಿ ಕಾಡುತ್ತಿವೆ… ಮೌನವಾಗಿ¨ªಾಗ ಮನಸ್ಸಿನಲ್ಲಿ ನಿನ್ನ ಜತೆ ಏನೋ ಒಂದು ನಡೆಯುತ್ತಿರುತ್ತದೆ… ನಿನ್ನಂಥ ಸಖೀ ಇದ್ದರೆ ಮಾತೇ ಇಲ್ಲದೆ ಎಷ್ಟೆಲ್ಲ ನುಡಿಯಬಹುದು… ಪ್ರಕೃತಿ ಸಹಜ ಜೈವಿಕ ಲಕ್ಷಣಗಳು ಆತ್ಮಶಕ್ತಿಯನ್ನು ವ್ಯತ್ಯಾಸಗೊಳಿಸಬಲ್ಲವು ಎನ್ನುವ ಪ್ರವೃತ್ತಿಯನ್ನು ಅಲ್ಲಗಳೆದು, ದೇಹವನ್ನು ಪಣಕ್ಕಿಟ್ಟು, ಆತ್ಮವನ್ನು ಗೆದ್ದು ಒಲವಿನಲ್ಲಿ ಉತ್ತುಂಗಕ್ಕೇರುವುದು ಎಲ್ಲೋ ನಿನ್ನಂಥ ಕೆಲವರಿಗೆ ಮಾತ್ರ ಸಾಧ್ಯ ಎಂದವರ ಬಗ್ಗೆ ಕೊನೆಗೆ ನನಗೆ ಅನಿಸಿ¨ªಾದರೂ ಏನೆನ್ನುವುದನ್ನು ದಾಖಲಿಸಬೇಕೆನಿಸಿ ಬರೆಯುತ್ತಿದ್ದೇನೆ.

ಒಲವಿಗೆ ಹೆಸರೂ, ಅವತಾರಗಳೂ ಬಹಳಷ್ಟು, ನನಗೆ ಈ ಒಲವಿನ ಹುಡುಕಾಟ ಒಂದು ನಿರಂತರ ವ್ಯಾಧಿ. ಹುಚ್ಚಾಪಟ್ಟೆ ತಿರುಗಾಡದೆ ಮಾಡಲಾಗದ ಸಾಹಸದಲ್ಲಿ ಅನೇಕ ಸಲ ಜಗತ್ತು ನನ್ನ ವಿರುದ್ಧ ನಡೆದು ಅನುಭೂತಿ ಕೊಟ್ಟಿದ್ದರೆ, ಬಹುತೇಕ ಸಲ ಅದರೊಡನೆ ಗು¨ªಾಡಿ ಅನುಭವ ತಂದುಕೊಂಡಿರುವ ನನಗೆ ಗೊತ್ತಿದೆ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾದಾಗ ಉಂಟಾಗುವ ಸಂಕಟಕ್ಕೆ, ಜೀವನದ ಇಂತಹ ಘಟನೆಗಳು ಪೂರ್ವ ನಿಯೋಜಿತ. ಇದೆಲ್ಲ ಘಟಿಸಲೇ ಬೇಕಿತ್ತು ಎಂದು ಕಾಣುತ್ತದೆ, ನಡೆಯಬೇಕಿರುವುದನ್ನು ಯಾರೂ ತಡೆವುದು ಸಾಧ್ಯವಿಲ್ಲ, ಎನ್ನುತ್ತ ನೋವಿಗೆ ತಣ್ತೀಜ್ಞಾನದ ಮುಲಾಮು ಹಾಕುವ ನಾನು ಜಗತ್ತಿನ ಪರಮ ಅಸುಖೀ ಎಂದು.

ಯಾರ ಕಣ್ಣಿಗೂ ಬೀಳದೆ, ಯಾರ ಜಪ್ತಿಗೂ ಬಾರದೆ, ಉರಿ ಸೋಕಿದ ಕರ್ಪೂರದಂತೆ ಕರಗಿ ಹೋಗಬೇಕು ಎಂದು ಬಯಸಿ ಎಲ್ಲ ಸಂಪರ್ಕ ಮಾಧ್ಯಮಗಳಿಂದ ಸನ್ಯಾಸ ಸ್ವೀಕರಿಸಿ, ಎಲ್ಲರಿಂದ, ಎಲ್ಲದರಿಂದ ಸ್ವಯಂ ಗಡಿಪಾರಾಗಿ ಹಳ್ಳಿಯೊಂದರ ಮೂಲೆಯಲ್ಲಿ ನಿಶ್ಯಬ್ದವಾಗಿ ಬದುಕುತ್ತಿರುವ ಈ ಹೊತ್ತಲ್ಲಿ ಚಿಗುರು ಬೇವಿನ ಮರಗಳ ಹೂ ವಾಸನೆ ಎÇÉೆಡೆ ಹರಡಿ, ಗಾಳಿ ಈ ಮಧ್ಯಾಹ್ನ ಅವನ ನೆನಪು ಹೊತ್ತು ತಂದಿದೆ. ಅವನ ಒಲವು ನನ್ನೊಳಗೆ ಮಿಳಿತಗೊಂಡ ಈ ಹೊತ್ತು ನಾನು ಭಾವನೆಗಳ ಮೂಲಕ ಬಯಲಾಗಿದ್ದೇನೆ. ನನ್ನೊಳಗೆ ಅವನಿದ್ದಾನೆ ಮತ್ತು ನನ್ನಂತಹ ಹಠಮಾರಿಯೊಬ್ಬಳ ಹದಿಹರೆಯದ ಹಾದಿ ಸವೆಯಲು ಬೇಕಿರುವ ಚೌಕಟ್ಟಿಲ್ಲದ ಆತ್ಮ ಸಂಗಾತದ ಮುದವನ್ನು ನೀಡಿದ್ದಾನೆ. ಅಹಂಕಾರವಿಲ್ಲದ ಕಟ್ಟೊಲುಮೆಯೊಂದು ನನ್ನ ಮನೆಯೊಳಗೆ ಅರಳಿ ಕಂಪು ಸೂಸಿದ್ದೇ ಅವನಿಂದ ಎನಿಸಿ ಕರೆ ಮಾಡಲಾ? ಎಂದು ಜೀವ ತುಡಿಯುತ್ತಿತ್ತು.

ಮನಸು – ಮೈ ಹೊರೆ ಅನಿಸಿ, ಅನಿಸಿಕೆಗಳು ನಿವೇದನೆಗಳಾದ ಈ ಮಧ್ಯಾಹ್ನ ಬಹಳ ಕಠೊರವಾಗಿ ಸುಡುತಿದೆ. ಏಕಾಂತದ ಆಲಾಪಗಳು ಹರಿಯದೇ ಮೈತುಂಬ ಬೆವರು. ತೆರೆದ ನೀಲಿ ಆಕಾಶದಲ್ಲಿ ಒಂದೇ ಒಂದು ಮೋಡದ ತುಣುಕಿಲ್ಲ. ಗುಡಿಸಲಿನ ಪುಟ್ಟ ಕಿಟಕಿಯ ಸಂದಿಯಿಂದ ಆಗಸ ನನ್ನ ಕೋಣೆಯೊಳಗೇ ಬಂದ ಹೊತ್ತಲ್ಲಿ ಕೆಲವು ಹೊಸ ಪದಗಳಿಗಾಗಿ ಹುಡುಕಾಡುತ್ತಿ¨ªೆ. ಏಕೈಕ ಸಂಪರ್ಕ ಮಾಧ್ಯಮವಾದ ಫೋÓr… ಬಂತೆಂದು ಸೂಚಿಸುವಂತೆ ಹೊರಗೆ ಸೈಕಲ್‌ ಬೆಲ… ಆಯಿತು. ಎದ್ದು ಹೊರ ಬಂದವಳ ಕೈ ಸೇರಿದ್ದು ಎರಡು ಪತ್ರ. ಓದುತ್ತಿದ್ದವಳನ್ನು ಹಿಡಿದು ನಿಲ್ಲಿಸಿದ್ದು ಅವನ ಪತ್ರದ ಸಾಲುಗಳು.

Advertisement

ಆತ ಹೀಗೆ ಬರೆದಿದ್ದ. “ಒಲವು’ ಎನ್ನುವ ಸಾರ್ವಭೌಮತ್ವಕ್ಕೆ ಚಕ್ರವರ್ತಿನಿಯ ಮೆರುಗಿದೆ. ಒಲವಿಗೆ, ಒಲವಿಗಾಗಿ ನಿರ್ನಾಮವಾದ ಅನೇಕ ರಾಜಮನೆತನಗಳ ಕಳೆಯಿದೆ. ಮರೆತು ಹೋದ ದೊರೆಗಳು ಒಲವಿನ ತೋಳುಗಳÇÉೇ ನಿದ್ರಿಸುತ್ತಿ¨ªಾರೆ. ಚಕ್ರವರ್ತಿಗಳು ಬದಲಾದರು. ಚಕ್ರಾಧಿಪತ್ಯಗಳು ಬದಲಾದವು. ಆದರೆ ಒಲವೆಂಬ ಚಕ್ರವರ್ತಿನಿ ಮಾತ್ರ ಬದಲಾಗದೆ ಉಳಿದಿ¨ªಾಳೆ. ಒಲವಿಗೆ ಮೂರ್ತ ರೂಪ ಕೊಟ್ಟರೆ ಹುಟ್ಟಿದಂತಿರುವ ನೀನು ಇರುವುದೇ ಹೀಗೆ. ನೀನು ಹೀಗೇ ಇರಬೇಕು ಕೂಡ. ನಿನ್ನ ಭೇಟಿಯಿಂದ ಬದುಕು ಹೇಗೆಲ್ಲ ಕವಲೊಡೆಯಿತು! ನಿನ್ನ ಜತೆ ಬದುಕುವುದನ್ನು ಕಲಿಯುತ್ತ ಬದುಕಿದ ಈ ಅನುಭವ, ಪುನಶ್ಚೇತರಿಕೆಗೆ ಚಿಮುಕಿಸಿದ ಮಂತ್ರಜಲದಂತೆ. ನಿನ್ನ ಇರವೇ ಬದುಕಿಗೊಂದು ವೈಭವ ತಂದಿದೆ. ಪಾವಿತ್ರ್ಯ ನೀಡಿದೆ. ನಿನ್ನ ಸಾಂಗತ್ಯ ನೆನಪಾದರೆ ತುಟಿ ಪಿಟಕ್ಕೆನ್ನದೆ ಒಂದು ಮಹಾನ…

ಆನಂದವನ್ನು ಅನುಭವಿಸುತ್ತಿರುವಂತೆ ಭಾಸವಾಗುತ್ತದೆ. ಆ ಕಂಠ, ಆ ಅಪ್ರತಿಮ ಒಲವಿಗೆ ವಂದೇ. ಒಲವನ್ನು ಪ್ರೇಮ ಭಿಕ್ಷೆಯಾಗಿಸದೇ, ಇದು ನಿತ್ಯ ನಂದಿ ಹೋಗಿ ಮತ್ತೆ ಹಚ್ಚುವ ಸಂಜೆ ದೀಪವಲ್ಲ. ಇಬ್ಬರ ಮೈ – ಮನ ಬೆಳಗುವ ಚಿಕ್ಕೀ ಮಳೆ ಎಂದರ್ಥೈಸಿದ ನಿನ್ನ ಅರಿವು ನನ್ನೊಳಗಿಳಿಯುತ್ತಿರುವ ಈ ಹೊತ್ತಿನ ಹಾರೈಕೆ ಒಂದೇ, ನನ್ನ ಹಿಡಿಯೊಳಗಿರಲಿ ನಿನ್ನ ಬೆರಳು. ಧ್ರುವ ಮರೆಯದಂತೆ ನಡೆಸುತ್ತಲಿರು…’ 

ಅಡಿಯಿಟ್ಟರೆ ಸಾಕು ನೆಲದ ಹವಣು ಅರಿಯುವವಳ ಮೈ, ಹೃದಯದೊಳಗಿನ ಪರಿತಾಪದಿಂದ ಬೆಚ್ಚಗಾಗಬಾರದು. ಹೆಣ್ಣು ಮಕ್ಕಳು ಯಾವತ್ತೂ ಬರಿದಾಗಿರಬಾರದು. ತುಂಬಿಕೊಂಡಿರಬೇಕು. ಎದೆಯೊಳಗೆ ಕಾತರವಿಟ್ಟುಕೊಂಡು ಮಲಗಿದರೆ ಕಣ್ಣು ಮುಚ್ಚಬಹುದು, ನಿದ್ರೆ ಬಂದೀತೇ ಎನ್ನುವ ವಯಸ್ಸಿನ ಗೊಂದಲವನ್ನು ನೀನು ದಾಟಿ ಬಂದಿರುವೆ. ಹಳೆಯ ನೆನಪುಗಳನ್ನು ಹೆಕ್ಕಿದರೆ ಸತ್ತು ಹೋದವರು ಹಾಗೇ ಹೋಗದೆ ಪಿಶಾಚಿಯಾಗಿ ಬಂದು ಕಾಡುವಂತೆ ಮಮತೆಯ ನೋವುಗಳು ಕಾಡುತ್ತವೆ. ಆ ನೆನಪುಗಳು ಕನಸು-ಇರುವಿಕೆಗಳ ನಡುವೆ ಎತ್ತೆತ್ತಲೋ ತೂಗಾಡುತ್ತವೆ. ಆಷಾಢಮಾಸದ ಗಾಳಿಯಲ್ಲಿ, ಯಾರೊಬ್ಬರೂ ಕೂಡದೆ, ಸುಮ್ಮನೆ ಜೋರಾಗಿ ಬೀಸಿಬಿಟ್ಟ ಹುಡುಗರ ಕೈಯ ಉಯ್ನಾಲೆಯಂತೆ. 

ಬಿಟ್ಟು ಬಂದಿದ್ದಕ್ಕೆ ಉಂಟಾಗುವ  ವ್ಯಾಕುಲವನ್ನು ಲೆಕ್ಕಕ್ಕಿಡಬೇಡ. ಬದುಕ ಬೇಟದಲ್ಲಿ ಮುಖ್ಯವಾಗಿ ಇರಬೇಕಾಗಿರುವುದು ಲಹರಿಯಲ್ಲವೇ? ಒಲವಿನ ವಿಷಯ ಯೋಚಿಸಿದಾಗ ಒಂದೊಂದು ಬಾರಿ ಅನ್ನಿಸುತ್ತದೆ: ಇದು ತನ್ನನ್ನು ಯಾಚಕಳನ್ನಾಗಿಯೋ, ತಿರಸ್ಕೃತಳನ್ನಾಗಿಯೋ ಮಾಡುವುದು ಖಂಡಿತವೆಂದು. ಹಾಗೆಂದು ಹೇಳಿ ಹಿಮ್ಮೆಟ್ಟಲು ಸಾಧ್ಯವೇ? ವಯಸ್ಸು ಮತ್ತು ತಲೆಮಾರಿನ ತಳಮಳದಿಂದ ನಾವು ನಾವೇ ಪಾರಾಗಬೇಕು. ವೈಯಕ್ತಿಕ ಅಗತ್ಯಗಳೆಲ್ಲವೂ ಸಾಮಾಜಿಕ ಮನ್ನಣೆ ಪಡೆದಿರಬೇಕು ಎಂದಿಲ್ಲ. ಒಲವಿನ ಜತೆ ನಿಕಟವಾಗಿ¨ªಾಗ ಅದರ ಅಂದಚೆಂದವನ್ನು ಮುಟ್ಟಿ – ತಟ್ಟಿ ನಲಿದಿದ್ದೇವೆ. ಜೀವಗಳ ಮೈಮೇಳೈಸಿದಾಗ ಮೈದೋರಿ ನಿಂತ ರಸಿಕತೆಯಲ್ಲಿ ಭಗವಂತನನ್ನು ಕಂಡಷ್ಟೇ ಆನಂದಗೊಂಡಿದ್ದೇವೆ. ಒಲವೆಂದರೆ ಬೇವು -ಬೆಲ್ಲವಲ್ಲ, ಅದು ಬಾಳಿನ ಉಪ್ಪು. ಎಂದು ಬರೆದಿದ್ದ ಅಪ್ಪನ ಪತ್ರ ಓದುವಾಗ ಈ ಸಲ ಏನು ಬರೆದಿರಬಹುದು ಎನ್ನುವ ಕುತೂಹಲದಲ್ಲಿ ಹಾಳೆಯ ಮಡಿಕೆ ಬಿಚ್ಚಿದವಳಿಗೆ ನಿರಾಸೆಯಾಗಲಿಲ್ಲ.

ನೆಲದ ಋತುಗಳು ಬದಲಾಗುವಂತೆಯೇ ನನ್ನೆದೆಯ ಋತುಗಳು ಬದಲಾಗುವುದನ್ನೂ ಒಪ್ಪಿಕೊಳ್ಳಲು ಬೇಕಾಗುವ ಚೈತ್ರಚೈತನ್ಯ ಹೃದಯಕ್ಕೆ ರವಾನೆಯಾಗಿ ಸ್ವಸ್ಥವಾಯಿತು ಮನಸು ನಿಜಾನಂದದಿ.

– ಮೈಥಿಲಿ ಧರ್ಮಣ್ಣ

Advertisement

Udayavani is now on Telegram. Click here to join our channel and stay updated with the latest news.

Next