Advertisement

ರಾಜೇಶ್‌ ನಾೖಕ್‌ರಂತಹ ಸರಳ ವ್ಯಕ್ತಿತ್ವವನ್ನು ಕಂಡದ್ದೇ ಅಪರೂಪ: ರುಕ್ಮಯ ಪೂಜಾರಿ

03:21 PM May 08, 2023 | Team Udayavani |

ಬಂಟ್ವಾಳ: ಸುದೀರ್ಘ‌ 50 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ರಾಜೇಶ್‌ ನಾೖಕ್‌ರಂತಹ ಸರಳ ವ್ಯಕ್ತಿತ್ವವನ್ನು ಕಂಡದ್ದೇ ಅಪರೂಪ, ಎದುರಾಳಿಗಳ ಟೀಕೆಗೆ ಸಣ್ಣ ಉತ್ತರವನ್ನೂ ಕೊಡದೆ ಕರ್ತವ್ಯವನ್ನು ಮುಂದುವರಿಸಿಕೊಂಡು ಹೋಗುವ ಸಜ್ಜನ ರಾಜಕಾರಣಿ ರಾಜೇಶ್‌ ನಾೖಕ್‌ರನ್ನು ಮತ್ತೂಮ್ಮೆ ಗೆಲ್ಲಿಸಲು ಕ್ಷೇತ್ರದ ಜನತೆ ಉತ್ಸುಕರಾಗಿದ್ದಾರೆ ಎಂದು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಹೇಳಿದ್ದಾರೆ.

Advertisement

ಮತ್ತೆ ಮತ್ತೆ ಸೀಟಿಗಾಗಿ ಪೈಪೋಟಿ ನಡೆಸುವ ರಾಜಕಾರಣಿಗಳ ಮಧ್ಯೆ ರಾಜೇಶ್‌ ನಾೖಕ್‌ ಅವರು ಅಪರೂಪವಾಗಿ ಕಂಡುಬರುತ್ತಿದ್ದು, ಬಹಳ ಹಿಂದೆಯೇ ಚುನಾವಣೆಗೆ ನಿಲ್ಲುವ ಅವಕಾಶ ಇದ್ದರೂ ಅದನ್ನು ನಯವಾಗಿ ತಿರಸ್ಕರಿಸಿದ್ದರು. 2013ರಲ್ಲಿ ಸ್ಪರ್ಧಿಸಿ ಸೋತ ಸಂದರ್ಭದಲ್ಲೂ ಇಡೀ ಕ್ಷೇತ್ರದಾದ್ಯಂತ ಪಾದಯಾತ್ರೆ ನಡೆಸಿ ಜನತೆಯ ಕಷ್ಟವನ್ನು ಆಲಿಸಿದ ಹೆಗ್ಗಳಿಕೆ ರಾಜೇಶ್‌ ನಾೖಕ್‌ ಅವರದ್ದಾಗಿದ್ದು, ಒಟ್ಟು ಮೂರು ಬಾರಿ ಪಾದಯಾತ್ರೆಯ ಮಾಡುವ ಮೂಲಕ ದೇಶದಲ್ಲೇ ಅಪರೂಪದ ಶಾಸಕರೆನಿಸಿಕೊಂಡಿದ್ದಾರೆ.

ತನ್ನ ಕುರಿತ ಎಲ್ಲಾ ಟೀಕೆಗಳಿಗೆ ಉತ್ತರ ಕೊಡದೆ ರಾಜೇಶ್‌ ನಾೖಕ್‌ ಅವರು ತನ್ನ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರ ನೀಡುವ ಕಾರ್ಯ ಮಾಡಿದ್ದರು. ಕೊರೊನಾದಿಂದ ಮೃತಪಟ್ಟ ಮಹಿಳೆಯರೊಬ್ಬರ ಶವಸಂಸ್ಕಾರಕ್ಕೆ ವಿರೋಧ ವ್ಯಕ್ತವಾದಾಗ ತನ್ನ ಜಮೀನಿನಲ್ಲಿ ಶವಸಂಸ್ಕಾರ ಮಾಡಿ ಎನ್ನುವ ಮೂಲಕ ಸರ್ವರ ಪ್ರಶಂಸೆಗೆ ಪಾತ್ರರಾಗಿದ್ದರು ರುಕ್ಮಯ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಂಟ್ವಾಳಕ್ಕೆ ನಾರಾಯಣ ಗುರು ವಸತಿ ಶಾಲೆ
ಜಿಲ್ಲೆಯ ಮೊದಲ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆಯನ್ನು ಬಂಟ್ವಾಳ ಕ್ಷೇತ್ರಕ್ಕೆ ತಂದು ಅನುಷ್ಠಾನ ಮಾಡಿದ ಹೆಗ್ಗಳಿಕೆ ರಾಜೇಶ್‌ ನಾೖಕ್‌ ಅವರದ್ದಾಗಿದೆ. ಜತೆಗೆ ಕೋಮುಗಲಭೆಗಳಿಂದ ತುಂಬಿದ ಬಂಟ್ವಾಳದಲ್ಲಿ ಶಾಂತಿಯ ವಾತಾವರಣ ನಿರ್ಮಿಸಿದ ಕೀರ್ತಿಯೂ ಅವರದ್ದಾಗಿದೆ. ಹೀಗಾಗಿ ಅವರು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಪೂಜಾರಿಯವರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next