Advertisement
ಅವರು ಎಂಆರ್‌ಪಿಎಲ್ ವತಿಯಿಂದ ಆಯೋಜಿಸಲಾದ ಡಾ| ಬಿ.ಆರ್. ಅಂಬೇಡ್ಕರ್ ಅವರ 128ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪೂನಾ ಒಪ್ಪಂದ ಪರಿಶಿಷ್ಟ ಜಾತಿ, ಪಂಗಡಿಗಳಿಗೆ ಹೆಚ್ಚಿನ ಅವಕಾಶ ದೊರಕಿ ಸಮಾಜ ಮುಂಚೂಣಿಗೆ ಬರಲು ಸಹಕಾರಿಯಾಯಿತು ಎಂದರು. ಡಾ| ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಸಂವಿಧಾನ ಇಂದು ಮಹಿಳೆ ಯರಿಗೆ, ಮಕ್ಕಳಿಗೆ ಹೀಗೆ ಎಲ್ಲ ಸ್ತರದವರಿಗೆ ಸ್ವಾತಂತ್ರ್ಯದ ಹಕ್ಕು ನೀಡಿದೆ. ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತವರಾಗಬೇಕು ಎಂದರು.
ಎಂಆರ್‌ಪಿಎಲ್ ನಿರ್ದೇಶಕ ಎಂ. ವೆಂಕಟೇಶ್ ಮಾತನಾಡಿ, ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆದು ಕೊಂಡಾಗ ಸಮಾಜದಲ್ಲಿ ಎಲ್ಲರೂ ಶಾಂತಿ ನೆಮ್ಮದಿಯಿಂದ ನೆಲೆಸಲು ಸಾಧ್ಯವಿದೆ. ಡಾ| ಬಿ.ಆರ್. ಅಂಬೇಡ್ಕರ್ ಅವರು ನಾಲ್ಕು ಡಾಕ್ಟರೇಟ್, ಬರೋಡ ಮಹಾರಾಜರಿಂದ ಸಮ್ಮಾನ, ಮೊದಲ ಕಾನೂನು ಸಚಿವರಾಗಿ ಮಾಡಿದ ಕೆಲಸ ಎಲ್ಲವೂ ನಮಗಿಂದು ಸ್ಫೂರ್ತಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಜಿಎಂ ಬಿಎಚ್‌ವಿ ಪ್ರಸಾದ್, ಹಿರಿಯ ಅ ಧಿಕಾರಿಗಳು,ಪರಿಶಿಷ್ಟ ಜಾತಿ, ಪಂಗಡ ಸಂಘದ ಪದಾ ಧಿಕಾರಿಗಳು ಉಪಸ್ಥಿತರಿದ್ದರು.