Advertisement

ಯಾರೋ ವ್ಯಕ್ತಿಗಳು ಮಾಡಿದ ಕೃತ್ಯಕ್ಕೆ ಸಮಾಜವನ್ನು ದೋಷಿಸುವುದು ಸರಿಯಲ್ಲ: ಡಿ ಕೆ ಶಿವಕುಮಾರ್

09:03 AM Apr 21, 2020 | keerthan |

ಬೆಂಗಳೂರು: ಪಾದರಾಯನಪುರ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಆದರೆ ಯಾರೋ ವ್ಯಕ್ತಿಗಳು ಮಾಡಿದ ಕೃತ್ಯಕ್ಕೆ ಸಮಾಜವನ್ನು ದೋಷಿಸುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

Advertisement

ಸದಾಶಿವ ನಗರದ ತನ್ನ ನಿವಾಸದಲ್ಲಿ ಬೆಂಗಳೂರಿನ ಮುಸ್ಲಿಂ ನಾಯಕರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಪಾದರಾಯನಪುರ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಸರ್ಕಾರ ತೆಗೆದುಕೊಳ್ಳುವ ಎಲ್ಲಾ ಒಳ್ಳೆಯ ನಿರ್ಧಾರಗಳಲ್ಲಿ ನಾವು ಸಹಕಾರ ಕೊಡುತ್ತೇವೆ. ನಾವು ಇಷ್ಟೇಲ್ಲ ಸಹಕಾರ ನೀಡುತ್ತಿದ್ದರೂ, ತಮ್ಮ ಮಂತ್ರಿಗಳ, ಶಾಸಕರ ಹೇಳಿಕೆಗಳನ್ನೂ ಗಮನಿಸಿ. ಯಾವುದೇ ಪಕ್ಷದ ನಾಯಕರೂ ಪ್ರಚೋದನಕಾರಿ ಹೇಳಿಕೆ ನೀಡಿದರೆ, ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಡಿಕೆ ಶಿವಕುಮಾರ್  ಮನವಿ ಮಾಡಿದರು.

ಪಾದರಾಯನಪುರ ಘಟನೆ ಖಂಡನೀಯ, ವ್ಯಕ್ತಿಗಳು ಮಾಡಿದ ಕೃತ್ಯಕ್ಕೆ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು. ಪೊಲೀಸರನ್ನು ಕೆಲವು ಮಂತ್ರಿಗಳು ನಿಂದಿಸುತ್ತಿರುವುದು ಸರಿಯಲ್ಲ. ವಾರ್ನಿಂಗ್ ಕೊಡೋದು ಸರಿಯಲ್ಲ. ಆಶಾ ಕಾರ್ಯಕರ್ತೆಯರೂ ಉತ್ತಮ ಕೆಲಸ ಮಾಡ್ತಿದಾರೆ ಎಂದರು.

ಮುಂದಿನ ದಿನಗಳಲ್ಲಿ ನೀವು ಎಲ್ಲಿಗೆ ಕರೆದರೂ, ಬರಲು ಸಹಕಾರ ಕೊಡಲು ನಾವು ಸಿದ್ದರಿದ್ದೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next