Advertisement

ಕೋವಿಡ್ ಸುಳ್ಳು ಸುದ್ದಿ : ಪೊಲೀಸರು ಥಳಿಸಿದ್ದು ವಲಸೆ ಕಾರ್ಮಿಕರಿಗಲ್ಲ

09:46 AM May 13, 2020 | mahesh |

ಕೋವಿಡ್ ವ್ಯಾಪಿಸುತ್ತಿರುವಷ್ಟೇ ವೇಗದಲ್ಲಿ ಅದರ ಕುರಿತಾದ ಸುಳ್ಳು ಸುದ್ದಿಗಳೂ ವ್ಯಾಪಿಸುತ್ತಿವೆ. ಸಾಮಾಜಿಕ ಜಾಲತಾಣಗಳ‌ಲ್ಲಿ ಹಬ್ಬುತ್ತಿರುವ ಸುದ್ದಿಗಳ ಸತ್ಯ ದರ್ಶನ ಇಲ್ಲಿರುತ್ತದೆ.

Advertisement

ಲಾಕ್‌ಡೌನ್‌ನಿಂದಾಗಿ ಸಾವಿರಾರು ವಲಸೆ ಕಾರ್ಮಿಕರು ಕಾಲ್ನಡಿಗೆ ಯಲ್ಲೇ ಊರಿಗೆ ತೆರಳುತ್ತಿರುವ ಹಾಗೂ ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್‌ ಉಲ್ಲಂಘನೆಗಾಗಿ ಕಾರ್ಮಿಕರ ಮೇಲೆ ಪೊಲೀಸರು ಕ್ರಮ ಕೈಗೊಂಡಿರುವ ಘಟನೆಗಳು ವರದಿಯಾಗಿವೆ. ಆದರೆ, ಬಿಹಾರದ ವಲಸೆ ಕಾರ್ಮಿಕರಿಗೆ ಪೊಲೀಸರು ಥಳಿಸುತ್ತಿದ್ದಾರೆ ಎಂದು ಹೇಳಲಾದ ವೀಡಿಯೋವೊಂದು ಕಳೆದೆರಡು ದಿನಗಳಿಂದ ವೈರಲ್‌ ಆಗುತ್ತಿದೆ. ಮೂವರು ವ್ಯಕ್ತಿಗಳು ಮೊಣಕಾಲೂರಿ ಕುಳಿತಿದ್ದು, ಪೊಲೀಸರು ಅವರಿಗೆ ಥಳಿಸುತ್ತಿದ್ದಾರೆ. ಹೊಡೆಯಬೇಡಿ ಎಂದು ಕಣ್ಣೀರು ಹಾಕುತ್ತಾ ಆ ವ್ಯಕ್ತಿಗಳು ಗೋಗರೆಯುತ್ತಿರುವ ಮನಕಲಕುವ ದೃಶ್ಯ ಅದರಲ್ಲಿದೆ. ಲಾಕ್‌ಡೌನ್‌ ಸಮಯದಲ್ಲಿ ಕಾರ್ಮಿಕರನ್ನು ಪೊಲೀಸರು ನಡೆಸಿಕೊಳ್ಳುತ್ತಿರುವ ರೀತಿಯಿದು ಎಂಬ ಅಡಿಬರಹವನ್ನೂ ಈ ದೃಶ್ಯದ ಜತೆ ಹರಿಬಿಡಲಾಗಿದೆ. ವಾಸ್ತವದಲ್ಲಿ ಇದೊಂದು ಸುಳ್ಳಿನ ಕಂತೆ.

ವೀಡಿಯೋದಲ್ಲಿರುವುದು ವಲಸೆ ಕಾರ್ಮಿಕರೂ ಅಲ್ಲ, ಅದು ಬಿಹಾರದಲ್ಲಿ ನಡೆದ ಘಟನೆಯೂ ಅಲ್ಲ. ಮಾ. 28ರಂದು ತೆಲಂಗಾಣದ ಖಮ್ಮಾಮ್‌ ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದಾಗಲೇ ಹೊರಗೆ ಕುಳಿತು ಇಸ್ಪೀಟು ಆಡುತ್ತಿದ್ದ ಸ್ಥಳೀಯರಿಗೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಥಳಿಸಿದ್ದರು. ಅಮಾನವೀಯವಾಗಿ ಹಲ್ಲೆ ನಡೆಸಿದ್ದಕ್ಕಾಗಿ ಅವರ ವಿರುದ್ಧ ಕ್ರಮವನ್ನೂ ಕೈಗೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next