ದೇವನಹಳ್ಳಿ: ಪೋಷಕರು ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಪ್ರತಿ ಮಗುವು ಆರೋಗ್ಯವಾಗಿರುವುದನ್ನು ಧೃಡಪಡಿಸಿಕೊಳ್ಳಲು ಆರೋಗ್ಯ ತಪಾಸಣೆ ಶಿಬಿರ ಗಳಲ್ಲಿ ಆರೋಗ್ಯ ಪರೀಕ್ಷೆಯನ್ನು ಮಾಡಿಬೇಕು ಎಂದು ವಿಹಾನ್ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಪ್ರತಾಪ್ ಯಾದವ್ ತಿಳಿಸಿದರು.
ತಾಲೂಕಿನ ಚಪ್ಪರದ ಕಲ್ಲು ಸರ್ಕಲ್ ಬಳಿಯ ವಿಹಾನ್ ಪಬ್ಲಿಕ್ ಶಾಲೆಯ ಆವರಣದಲ್ಲಿ ವಿಹಾನ್ ಪಬ್ಲಿಕ್ ಶಾಲೆ ಮತ್ತು ನ್ಯೂ ಮಾನಸ ಆಸ್ಪತ್ರೆ, ಶ್ರೀಕೃಷ್ಣ ದೇವರಾಯ ದಂತ ವೈಧ್ಯಕೀಯ ಸಂಸ್ಥೆ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ದಂತ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರಿಗೆ ಮಕ್ಕಳ ಮೇಲೆ ಹೆಚ್ಚಿನ ಪ್ರೀತಿ ಇದ್ದ ಕಾರಣ, ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡುವಂತೆ ನೆಹರು ಸೂಚಿಸಿದ್ದರು. ಅದರಂತೆ ಪ್ರತಿ ವರ್ಷವೂ ಸಹ ರಾಜ್ಯದ ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ಮಕ್ಕಳಿಗೂ ಹಲ್ಲಿನ ಪರೀಕ್ಷೆ ಮಾಡಿ, ನ್ಯೂನತೆ ಕಂಡುಬರುವ ಮಕ್ಕಳಿಗೆ ಚಿಕಿತ್ಸೆ ನೀಡುಲಾಗುತ್ತದೆ. ಮಕ್ಕಳಿಗೆ ಅವರ ಹಕುಗಳು ಕರ್ತವ್ಯಗಳ ಬಗ್ಗೆ ತಿಳಿಹೇಳಬೇಕು. ವಿದ್ಯೆ ಕಲಿಸುವ ಶಿಕ್ಷಕರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಮಕ್ಕಳಿಗೆ ಮನವರಿಕೆ ಮಾಡಬೇಕು. ಸ್ವಾಭಿಮಾನ ಮತ್ತು ಗೌರವದಿಂದ ಬದುಕುವ ಹಕ್ಕಿದೆ ಎಂಬುವುದರ ಅರಿವು ಎಲ್ಲರಿಗೂ ತಿಳಿಯಬೇಕು. ಪ್ರತಿ ಮಕ್ಕಳಿಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕು.
ಮಕ್ಕಳು ಎಂದರೆ ಎಲ್ಲರಿಗೂ ಅಕ್ಕರೆ ಅವರನ್ನು ದೇವರಿಗೆ ಹೋಳಿಸುತ್ತಾರೆ. ಗುಣವಿರುವ ಮಕ್ಕಳೆಲ್ಲಾ ದೇವರಂತೆ ಎಂಬ ಹಾಡು ಮಕ್ಕಳ ಮಹತ್ವವನ್ನು ಬಿಂಬಿಸುತ್ತದೆ. ಮಕ್ಕಳು ಏನು ಮಾಡಿದರೂ ಚಂದ ಸಮಾಜದಲ್ಲಿ ಮಕ್ಕಳಿಗೂ ಕೆಲವು ಹಕ್ಕು ಮತ್ತು ಕರ್ತವ್ಯಗಳಿವೆ ಎಂದು ಹೇಳಿದರು. ಈ ವೇಳೆಯಲ್ಲಿ ಶ್ರೀಕೃಷ್ಣ ದೇವರಾಯ ದಂತ ವೈಧ್ಯಕೀಯ ಸಂಸ್ಥೆಯ ಪ್ರೊ.ಡಾ.ಭಾರ್ಗವ, ನ್ಯೂ ಮಾನಸ ಆಸ್ಪತ್ರೆಯ ವೈಧ್ಯ ಚಂದ್ರಲೇಖಾ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಮತ್ತಿತ್ತರರು ಇದ್ದರು.