Advertisement

ನಾಟ್ಯಗೀತೆ ಪರಂಪರೆ ಉಳಿಸುವುದು ಅಗತ್ಯ

04:42 PM Sep 21, 2021 | Team Udayavani |

ಕಲಬುರಗಿ: ಹಳೆಯ ಕಾಲದ ನಾಟ್ಯಗೀತೆಗಳ ಪರಂಪರೆ ಉಳಿಸಿ-ಬೆಳೆಸುವುದು ಅಗತ್ಯವಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಂಗೀತ ವಿಭಾಗದ ಮುಖ್ಯಸ್ಥೆ ಡಾ| ಜಯದೇವಿ ಜಂಗಮಶೆಟ್ಟಿ ಹೇಳಿದರು.

Advertisement

ರಂಗಾಯಣದಲ್ಲಿ ಬಿ.ವಿ. ಕಾರಂತ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಭಾರತೀಯ ರಂಗ ಸಂಗೀತ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ರಂಗಭೂಮಿ ಸಂಗೀತಕ್ಕೆ ಕಾರಂತರ ಕೊಡುಗೆ ಅನನ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ರಂಗಕಲಾವಿದೆ, ವಿಶ್ರಾಂತ ಪ್ರಾಧ್ಯಾಪಕಿ ಶಾಂತಾ ಭೀಮಸೇನ್‌ ರಾವ್‌ ಮಾತನಾಡಿ, ಮನೆಯಲ್ಲಿ ಸಾಮಾನ್ಯವಾಗಿ ದೊರೆಯುವ ಸಲಕರಣೆಗಳನ್ನು ಸಂಗೀತ ಪರಿಕರಗಳನ್ನಾಗಿ ಬಳಸಿ ಸಂಗೀತ ನೀಡುವ ಅದ್ಭುತ ಕಲೆಗಾರಿಕೆ ಹೊಂದಿದ್ದ ಬಿ.ವಿ.ಕಾರಂತದ ಜನ್ಮದಿನವನ್ನು ಭಾರತೀಯ ರಂಗ ಸಂಗೀತ ದಿನವನ್ನಾಗಿ ರಂಗಾಯಣ ಆಚರಿಸುತ್ತಿರುವುದು ಅತ್ಯಂತ ಸಮಂಜಸವಾಗಿದೆ ಎಂದರು. ನೀತಾ ಪಾಟೀಲ, ಸ್ವಾತಿಶಂಕರ ಜೋಶಿ ಹಾಗೂ ರಂಗಾಯಣದಕಲಾವಿದರು ಹಾಡಿದ ರಂಗಗೀತೆಗಳು ಪ್ರೇಕ್ಷಕರನ್ನು ರಂಜಿಸಿದವು.

ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ಅಕ್ಷತಾ ಕುಲಕರ್ಣಿ ನಿರೂಪಿಸಿದರು, ಅಕ್ಕಮ್ಮ ವಂದಿಸಿದರು. ಮರಿಯಮ್ಮ, ಭಾಗ್ಯ ಪಾಳಾ ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next