Advertisement

ಚರಂಡಿ ದುಸ್ಥಿತಿ ಇದು !

01:33 PM Mar 01, 2017 | Team Udayavani |

ಹುಬ್ಬಳ್ಳಿ: ಕಳೆದ ಆರು ತಿಂಗಳಿಂದ ಹರಿಯುತ್ತಿರುವ ಒಳಚರಂಡಿ ನೀರು.. ಕಣ್ಣು ತೆರೆದು ನೋಡದ ಪಾಲಿಕೆ.. ಮೂಗು ಮುಚ್ಚಿಕೊಂಡು ಪಾದಚಾರಿಗಳು ಸಂಚಾರ.. ರೋಗಗ್ರಸ್ಥವಾಗಿರುವ ಮುಖ್ಯರಸ್ತೆ. ಹೌದು. ಒಂದು ಕಡೆ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಸ್ಮಾರ್ಟ್‌ ಸಿಟಿ ಬಂದಿದೆ.

Advertisement

ಇನ್ನೇನಿದ್ದರೂ ಕೇವಲ ಅಭಿವೃದ್ಧಿಯೇ ಅಭಿವೃದ್ಧಿ ಎಂದು ಬಡಾಯಿ ಕೊಚ್ಚಿಕೊಳ್ಳುವವರು ಒಂದು ಬಾರಿ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಹಳೇ ಬಸ್‌ ನಿಲ್ದಾಣದತ್ತ ಹೋಗಿ ಬಂದರೆ ಅವಳಿನಗರದ  ಸ್ಮಾರ್ಟ್‌ ಸಿಟಿಯ ಎಲ್ಲ ಲಕ್ಷಣಗಳು ಕಂಡು ಬರುತ್ತವೆ. ಕಳೆದ ಹಲವು ತಿಂಗಳಿಂದ ಒಳಚರಂಡಿ ಕಟ್ಟಿಕೊಂಡು ರಸ್ತೆಯ ಮೇಲೆಲ್ಲ ನೀರು ಹರಿಯುತ್ತಿದೆ.

ಇದಕ್ಕಾಗಿ ಪಾಲಿಕೆ ಸಿಬ್ಬಂದಿ  ಹಲವು ಬಾರಿ ಜಟ್ಟಿಂಗ್‌ ಯಂತ್ರದ ಮೂಲಕ ಸ್ವತ್ಛತೆ ಮಾಡಿ ಹೋದರೆ ಅವರು ಹೋದ ಕ್ಷಣಾರ್ಧದಲ್ಲಿ ಮತ್ತೇ ಅದೇ ಹಾಡು, ಅದೇ ಪಾಡು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ  ಕುರಿತು ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸುಧಾರಣೆಯಾಗಲೇ ಕಾಮಗಾರಿಯಾಗಲಿ ಆಗಲಿಲ್ಲ.

ಸಿಕ್ಕಿದ್ದು ಮಾತ್ರ ಬೊಗಳೆ ಮಾತುಗಳೇ ಹೊರತು ಕೆಲಸವಲ್ಲ ಎಂದು ಹೆಸರು ಹೇಳಲಿಚ್ಚಿಸದ ಅಂಗಡಿಯವರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಒಂದು ಬಾರಿ ಮನವಿ ನೀಡಿದರೆ ಅಥವಾ ದೂರು ನೀಡಿದರೆ ಎಲ್ಲವೂ ಸರಿಯಾಗಿ ಬಿಡುತ್ತದೆ ಎಂದುಕೊಂಡು ಪಾಲಿಕೆಗೆ ಯಾರಾದರೂ ದೂರು ನೀಡಿದರೆ ಅದು ಆಗದ ಕೆಲಸ. ಈ ಕುರಿತು ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಿ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next