Advertisement

ಆರ್ ಎಸ್ಎಸ್ ನವರು ಹಿಟ್ಲರನ್ನು ಹಾಡಿ ಹೊಗಳಿದ್ದು ಇತಿಹಾಸದಲ್ಲಿದೆ : ಸಿದ್ದರಾಮಯ್ಯ

02:33 PM Jul 21, 2022 | Team Udayavani |

ಬೆಂಗಳೂರು: ಜನರಿಗೆ ತಪ್ಪು ಮಾಹಿತಿ ಕೊಡುವ ಕೆಲಸ ಬಿಜೆಪಿ ಮಾಡುತ್ತಿದೆ. ನಾವು ಯಾರು ಕೂಡ ಕಾನೂನನ್ನು ಮೀರಿದವರಲ್ಲ. ಆದರೆ ತನಿಖಾ ಸಂಸ್ಥೆಗಳ ಮೋದಿ ಅವರು ಬಂದ ಮೇಲೆ ಕಾನೂನಿನ ಪ್ರಕಾರ ನಡೆಯುತ್ತಿಲ್ಲ. ಇ.ಡಿ., ಐಟಿ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

Advertisement

ಬಿಜೆಪಿ ಸರ್ಕಾರದ ವಿರುದ್ಧ ಫ್ರೀಂಡಂ ಪಾರ್ಕ್‌ನಿಂದ ರಾಜಭವನದವರೆಗೆ ಗುರುವಾರ ನಡೆದ ಪ್ರತಿಭಟನಾ ಮೆರವಣಿಗೆಯ ಕಾರ್ಯಕ್ರಮದ ಅಂಗವಾಗಿ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಕರೆದ ಇಡಿ ಕಚೇರಿಗೆ ಮುತ್ತಿಗೆ ಹಾಕಿದ್ದೇವೆ. ಬಿಜೆಪಿಗೆ ಪರ್ಯಾಯ ಕಾಂಗ್ರೆಸ್, ಹಾಗಾಗಿ ಕಾಂಗ್ರೆಸ್ ಅನ್ನ ಮುಗಿಸಬೇಕು ಎಂದು ಹೊರಟಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಎಂದು ಅನೇಕ ಬಾರಿ ಮೋದಿ,ಅಮಿತ್ ಶಾ ಹೇಳಿದ್ದಾರೆ. ಕಾಂಗ್ರೆಸ್ ಬಗ್ಗೆ ಬಿಜೆಪಿಗೆ ಭಯವಿದೆ.ಅನೇಕ ಜನ ಹೇಳಿದ್ದಾರೆ. ಸೋನಿಯಾ, ರಾಹುಲ್ ಗಾಂಧಿ ಅವರ ಮೇಲೆ ಕೇಸ್ ಇಲ್ಲ. ಎಫ್ ಐ ಆರ್ ಇಲ್ಲದೆ, ಕೋರ್ಟ್ ಸಮನ್ಸ್ ವಾರೆಂಟ್, ವಿಚಾರಣೆ ಮಾಡಲು ಆಗುವುದಿಲ್ಲ.ಸುಮ್ಮನೆ ಮಾಡಲು ಆಗುವುದಿಲ್ಲ ಎಂದು ಕಾನೂನು ತಿಳಿದಿವರಿಗೆ ಗೊತ್ತಿದೆ.ನಾನು ವಕೀಲರಲ್ಲಿ‌ ಮನವಿ ಮಾಡುತ್ತೇನೆ. ಇಂತಹ ಸುಳ್ಳು ಕೇಸ್ ಗಳನ್ನು ಬಯಲು ಮಾಡಬೇಕು ಎಂದು ಮನವಿ ಮಾಡುತ್ತೇನೆ. ಈ ದೇಶಕ್ಕೆ ಚರ್ಚೆ ಮಾಡಿ, ಸಂವಿಧಾನ ಕೊಟ್ಟವರು ಕಾಂಗ್ರೆಸ್ ನವರು ಎಂದರು.

ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇದೆಯಾ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ, ಸರ್ವಾಧಿಕಾರದಲ್ಲಿ ನಂಬಿಕೆ ಇಟ್ಟುಕೊಂಡವರು, ಹಾಗಾಗಿ ಆರ್ ಎಸ್ ಎಸ್ ನವರು ಹಿಟ್ಲರ್ ಅನ್ನು ಹಾಡಿ ಹೊಗಳಿದ್ದು ಇತಿಹಾಸದಲ್ಲಿದೆ.ಸ್ವಾತಂತ್ರ್ಯಕ್ಕಾಗಿ ಇವರು ಹೋರಾಟ ಮಾಡಿಲ್ಲ. ಒಂದು ದಿನವಾದರೂ ಸಾರ್ವಕರ್, ಹೆಡ್ಗೆವಾರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರಾ.ಸಾರ್ವಕರ್ ದೇಶ ಪ್ರೇಮಿ ಎಂದು ಹೇಳುತ್ತಾರೆ. ಆದರೆ ಸಾರ್ವಕರ್ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ, ನನ್ನನ್ನು ಬಿಟ್ಟು ಬಿಡಿ ಎಂದು ಮನವಿ ಮಾಡಿದ್ದರು ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿ ತೋರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next