Advertisement

ಎಲ್ಲ ಸಲವೂ ಡೆತ್‌ ಓವರ್‌ಗಳಲ್ಲಿ ನಿಯಂತ್ರಣ ಅಸಾಧ್ಯ: ಬುಮ್ರಾ

12:30 AM Feb 26, 2019 | |

ವಿಶಾಖಪಟ್ಟಣ: ರವಿವಾರದ ಟಿ20 ಪಂದ್ಯದ ಅಂತಿಮ ಓವರ್‌ನಲ್ಲಿ 14 ರನ್‌ ನೀಡಿ ಭಾರತದ ಸೋಲಿಗೆ ಕಾರಣರಾದ ಉಮೇಶ್‌ ಯಾದವ್‌ ಬೆಂಬಲಕ್ಕೆ ನಿಂತಿರುವ ಜಸ್‌ಪ್ರೀತ್‌ ಬುಮ್ರಾ, ಎಲ್ಲ ಸಲವೂ ಡೆತ್‌ ಓವರ್‌ಗಳಲ್ಲಿ ಎದುರಾಳಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Advertisement

“ಡೆತ್‌ ಓವರ್‌ ಎನ್ನುವುದು ಯಾವತ್ತೂ ಅತ್ಯಂತ ಕಠಿನ ಸವಾಲಾಗಿರುತ್ತದೆ. ಇದು ಯಾರ ಪರವಾಗಿಯೂ ಬರಬಹುದು. ಕೆಲವೊಮ್ಮೆ 50-50 ಸಾಧ್ಯತೆ ಇರುತ್ತದೆ. ನಾವೇನೋ ಗರಿಷ್ಠ ಪ್ರಯತ್ನ ಮಾಡುತ್ತೇವೆ. ಕೆಲವು ದಿನ ಇದು ಕ್ಲಿಕ್‌ ಆಗುತ್ತದೆ. ಪಂದ್ಯ ನಮ್ಮ ಕೈಜಾರಿದೆ. ಚಿಂತಿಸುವ ಅಗತ್ಯವಿಲ್ಲ. ಇದೊಂದು ಕ್ಲೋಸ್‌ ಗೇಮ್‌ ಆಗಿತ್ತು’ ಎಂಬುದಾಗಿ ಬುಮ್ರಾ ಹೇಳಿದರು.

ಆಸೀಸ್‌ ಗೆಲುವಿಗೆ ಅಂತಿಮ 2 ಓವರ್‌ಗಳಲ್ಲಿ 16 ರನ್‌ ಅಗತ್ಯವಿದ್ದಾಗ ಸೂಪರ್ಬ್ ಓವರ್‌ ಮೂಲಕ ಬುಮ್ರಾ ಪಂದ್ಯವನ್ನು ಭಾರತದ ತೆಕ್ಕೆಗೆ ತಂದಿದ್ದರು. 19ನೇ ಓವರ್‌ನಲ್ಲಿ ಕೇವಲ 2 ರನ್‌ ನೀಡಿದ ಬುಮ್ರಾ, 2 ವಿಕೆಟ್‌ಗಳನ್ನೂ ಉಡಾಯಿಸಿದ್ದರಯ. ಆದರೆ ಉಮೇಶ್‌ ಯಾದವ್‌ ಎಸೆದ ಅಂತಿಮ ಓವರಿನಲ್ಲಿ 14 ರನ್‌ ಸೋರಿಹೋಗುವುದರೊಂದಿಗೆ ಪಂದ್ಯ ಭಾರತದ ಕೈಜಾರಿತು.
“ಇದೊಂದು ಲೋ ಬೌನ್ಸ್‌ ಟ್ರ್ಯಾಕ್‌ ಆಗಿತ್ತು. 140-145 ರನ್ನೇ ಸವಾಲಿನ ಮೊತ್ತವಾಗಿರುತ್ತಿತ್ತು. ನಾವು ಇದರಿಂದ ಹಿಂದುಳಿದೆವು’ ಎಂದು ಬುಮ್ರಾ ಅಭಿಪ್ರಾಯಪಟ್ಟರು. ನಾಯಕ ವಿರಾಟ್‌ ಕೊಹ್ಲಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next