Advertisement

ಅಫಜಲಪುರ ಹೆಸರು ಬದಲಿಸಲು ಅಸಾಧ್ಯ

05:37 PM Sep 14, 2021 | Team Udayavani |

ಅಫಜಲಪುರ: ಅಫಜಲ್‌ ಖಾನ್‌ ಅವರಿಂದ ಬಂದ ಅಫಜಲಪುರ ಹೆಸರನ್ನು ಲಕ್ಷ್ಮಿಪುರ ಎಂದು ಬದಲಾವಣೆ ಮಾಡುವ ಬಗ್ಗೆ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ತಮ್ಮ ಪತ್ರದ ಮುಖಾಂತರ ಈ ಹಿಂದಿನ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿರುವುದು ಸರಿಯಲ್ಲ ಹಾಗೂ ಸುಮಾರು30 ವರ್ಷಗಳ ಕಾಲ ನಮ್ಮ ಸಮುದಾಯದ ಮತಗಳನ್ನು ಪಡೆದುಕೊಂಡು ಶಾಸಕರಾಗಿ ಈಗ ಬಿಜೆಪಿಗೆ ಹೋದ ನಂತರ ಗುತ್ತೇದಾರ ಅವರು ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ ಎಂದು ಮುಸ್ಲಿಂ ಜನಜಾಗೃತಿ ಸಮಿತಿ ಅಧ್ಯಕ್ಷ ಮಕ್ಮೂಲ್‌ ಪಟೇಲ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಶಾಸಕ ಎಂ.ವೈ. ಪಾಟೀಲ್‌ ಅವರ ಪತ್ರವನ್ನು ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. 17ನೇ ಶತಮಾನದ ಉತ್ತರಾರ್ಧದಲ್ಲಿ ಅಫಜಲಪುರ ಎಂಬ ಹೆಸರು ನಡೆದು ಬಂದಿದ್ದು ಇತಿಹಾಸದಲ್ಲಿ ಲಭ್ಯವಿದೆ.

ಅಫಜಲಪುರ ಹೆಸರು ಎಂದೂ ಲಕ್ಷ್ಮಿಪುರ ಎಂದು ಇರಲೇ ಇಲ್ಲ. ಅಫಜಲಖಾನರು ಔರಂಗಜೇಬನ ದಂಡನಾಯಕನಾಗಿರಲೇ ಇಲ್ಲ. ಅಫಜಲಖಾನರೂ ಬ್ರಿಟಿಷರ ಗುಲಾಮರಾಗಿದ್ದಾರೆ ಎಂದು ಹೇಳಿರುವ ಹೇಳಿಕೆ ಶುದ್ಧ ಸುಳ್ಳುವಾಗಿದೆ ಎಂದು ದೂರಿದರು. ಅಫಜಲಖಾನರು ಆದಿಲಶಾಹಿನ ದಂಡನಾಯಕ ಮತ್ತು ಗವರ್ನರರಾಗಿದ್ದರು. ಒಳ್ಳೆಯ ಆಡಳಿತಗಾರರು, ಕುಶಲ ವ್ಯಾಪಾರಿ, ಕೃಷಿಯ ಸಮರ್ಥಕ, ನಗರ, ವಿಕಾಸ, ಚತುರ, ಇವೆಲ್ಲವೂ ಇತಿಹಾಸದಲ್ಲಿದೆ. ಅಫಜಲಖಾನರು 300 ಹಡಗುಗಳನ್ನು ನಿರ್ಮಿಸಿ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿಯೂ ತೊಡಗಿಸಿಕೊಂಡಿದ್ದರು.ಇದರ ಬಗ್ಗೆ ದಾಖಲೆಗಳು ಸಾಕಷ್ಟಿವೆ.

ಲಕ್ಷ್ಮಿಪುರ ಎಂಬುವುದರ ಉಲ್ಲೇಖ, ಆಧಾರ, ಉಗಮ, ಅಸ್ತಿತ್ವ, ದಾಖಲೆ, ಪರಿಚಯಅದರ ಐಕ್ಯತೆ ಎಲ್ಲಿಯೂ ಕಾಣಿಸಿಗುವುದಿಲ್ಲ. ಇದು ಮತೀಯ ದ್ವೇಷ ಹೊರಡಿಸುವ ಹುನ್ನಾರ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೆಸ್ಕಾಂ ಮಾಜಿ ನಿರ್ದೇಶಕ ಪಪ್ಪು ಪಟೇಲ್‌, ಜಿಪಂ ಮಾಜಿ ಸದಸ್ಯ ಮತೀನ್‌ ಪಟೇಲ್‌ ಮಾತನಾಡಿ, ಅಫಜಲ್‌ಖಾನ್‌ ಕೊಡುಗೆ ಈ ಭಾಗಕ್ಕೆ ಬಹಳಷ್ಟು ಇದೆ.

ತಮ್ಮ ರಾಜಕೀಯಕ್ಕಾಗಿ ತಾಲೂಕಿನಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮಾಜದ ನಡುವೆ ಕೋಮು ಸೌಹಾರ್ದತೆ ಕೆಡಿಸಲು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಪ್ರಯತ್ನಿಸುತ್ತಿದ್ದಾರೆ ಇದನ್ನು ಖಂಡಿಸುತ್ತೇವೆ ಎಂದರು. ಚಂದು ದೇಸಾಯಿ, ರಾಜಕುಮಾರ ಪಾಟೀಲ್‌, ದಯಾನಂದ ದೊಡ್ಮನಿ, ನಿಂಗು ಚಲವಾದಿ,ರವಿ ನಂದಶೆಟ್ಟಿ, ನಾಗಪ್ಪ ಆರೇಕರ, ಜಾಫರ್‌ ಜಮಾದಾರ, ಮಕೂºಲ್‌ ಶೇಖ್‌ ಮಾಶಾಳ, ಖಾಲೀದ್‌ ಜಾಗೀರದಾರ, ಹಮೀದ್‌ ಅಫಜಲ್‌, ತಿಪ್ಪಣ್ಣ ಗಾಡಿವಡ್ಡರ, ಸಿರಾಜ್‌ ಪೀರಾವಲೆ, ಮುಲ್ಕಸಾಬ್‌ ಕೊರಬು, ಜಾಫರ್‌ ಪಟೇಲ್‌, ಭಾಷಾ ಮುಜಾವರ, ಮಹ್ಮದ್‌ ಫಾರೂಕ್‌, ಮಾಜೀದ್‌ ಪಟೇಲ್‌ ಸೇರಿದಂತೆ ಇನ್ನಿತರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next