Advertisement
ಅವರು ಸೋಮವಾರ ಕಡಬ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಯಾವತ್ತೂ ಅಧಿಕಾರದ ಹಿಂದೆ ಬಿದ್ದಿಲ್ಲ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ, ಸಮರ್ಥವಾಗಿ ನಿಭಾಯಿಸಿದ್ದೇನೆ. ಬಿಜೆಪಿ ಇಂದು ಅತ್ಯಂತ ಜನಪ್ರಿಯ ಪಕ್ಷವಾಗಿದೆ. ಪಕ್ಷ ಸಶಕ್ತವಾದಾಗ ಹತ್ತಾರು ಆಕಾಂಕ್ಷಿಗಳು ಹುಟ್ಟಿಕೊಳ್ಳುವುದು ಸಹಜ. ಪಕ್ಷದಿಂದ ಸ್ಪರ್ಧೆಗೆ ಎಷ್ಟು ಅಭ್ಯರ್ಥಿಗಳು ಮುಂದೆ ಬರುತ್ತಾರೆಯೋ ಪಕ್ಷ ಅಷ್ಟೇ ಭದ್ರವಾಗಿದೆ ಎಂಬ ನಂಬಿಕೆ ಇದೆ. ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಿರುವುದು ಖುಷಿ ತಂದಿದೆ. ಆ ಮೂಲಕ ಪಕ್ಷದ ಶಕ್ತಿ ಪ್ರದರ್ಶನವಾಗಿದೆ ಎಂದು ನಳಿನ್ ಹೇಳಿದರು.
Related Articles
Advertisement
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಾಡಿಕೊಂಡಿರುವ ಚುಣಾವಣಾ ಮೈತ್ರಿಯೂ ಅನೈತಿಕವಾಗಿದೆ. ಎರಡೂ ಪಕ್ಷಗಳ ವಿಚಾರ ಧಾರೆಗಳು ಬೇರೆ ಬೇರೆಯಾಗಿವೆ. ರಾಷ್ಟ್ರೀಯ ವಿಚಾರಧಾರೆ ಇಲ್ಲವೇ ಇಲ್ಲ. ಅಧಿಕಾರದ ಹಿಂದೆ ಹೋಗುವ ಮೈತ್ರಿ ಯಾವತ್ತೂ ಶಾಶ್ವತವಲ್ಲ, ಅದು ಬಿದ್ದು ಹೋಗಲಿದೆ ಎಂದು ನಳಿನ್ ತಿಳಿಸಿದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ, ಶಾಸಕ ಸಂಜೀವ ಮಠಂದೂರು, ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಆರ್.ಸಿ. ನಾರಾಯಣ ರೆಂಜ, ಕೃಷ್ಣ ಶೆಟ್ಟಿ ಕಡಬ, ಪುಲಸ್ತಾ ರೈ, ವಾಡ್ಯಪ್ಪ ಗೌಡ ಎರ್ಮಾಯಿಲ್, ಪ್ರಕಾಶ್ ಎನ್.ಕೆ., ಎ.ಬಿ. ಮನೋಹರ ರೈ, ಫಯಾಝ್ ಕೆನರಾ ಮೊದಲಾದವರು ಉಪಸ್ಥಿತರಿದ್ದರು.