Advertisement
ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್ ಕೊಟ್ಟ ಬಳಿಕ ವಿಚಾರಣೆಗೆ ಹಾಜರಾಗಲು 7 ದಿನ ಕಾಲಾವಕಾಶ ಕೇಳಿದ್ದರು. ಆದರೆ ಇದನ್ನು ಎಸ್‌ಐಟಿ ತಿರಸ್ಕರಿಸಿತ್ತು. ಈಗ ಆ ಕಾಲಾವಕಾಶ ಮುಗಿದರೂ ಪ್ರಜ್ವಲ್ ಭಾರತಕ್ಕೆ ಮರಳಿಲ್ಲ. ಹೀಗಾಗಿ ಪ್ರಜ್ವಲ್ ಮುಂದಿನ ನಡೆ ಏನು ಎಂಬುದೇ ಕುತೂಹಲ ಕೆರಳಿಸಿದೆ.
ಮೇ 15ರ ರಾತ್ರಿ ಪ್ರಜ್ವಲ್ ಬೆಂಗಳೂರಿಗೆ ಬರುವ ಸಾಧ್ಯತೆಗಳಿವೆ. ಜರ್ಮನಿಯ ಮ್ಯುನಿಚ್ ವಿಮಾನ ನಿಲ್ದಾಣದಿಂದ ಟಿಕೆಟ್ ಬುಕ್ ಆಗಿರುವ ಬಗ್ಗೆ ಇಮಿಗ್ರೇಶನ್ ಇಲಾಖೆ ಯಿಂದ ಪೊಲೀಸರಿಗೆ ಸುಳಿವು ಸಿಕ್ಕಿದೆ ಎನ್ನಲಾಗು ತ್ತಿದೆ. ಪ್ರಜ್ವಲ್ ಎರಡು ಬಾರಿ ವಿಮಾನದ ಟಿಕೆಟ್ ಬುಕ್ ಮಾಡಿ ರದ್ದು ಮಾಡಿದ್ದರು. ಮೇ 15ರಂದು ರಾತ್ರಿ 12.30ಕ್ಕೆ ಟರ್ಮಿನಲ್ 2ಕ್ಕೆ ವಿಮಾನ ತಲುಪುವ ವಿಮಾನದಲ್ಲಿ ಬರುವ ಸಾಧ್ಯತೆಗಳಿವೆ. ಕೊನೆ ಕ್ಷಣದಲ್ಲಿ ಈ ಟಿಕೆಟ್ ರದ್ದುಗೊಳಿಸಿ ಎಸ್‌ಐಟಿ ಅಧಿಕಾರಿಗಳನ್ನು ಆಟವಾಡಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.