ಬೆಂಗಳೂರು: ನೂತನ ಸರಕಾರ ರಚನೆಯ ಬಳಿಕ ಪೂರ್ಣ ಪ್ರಮಾಣದ ಸಂಪುಟ ರಚಿಸಿದ ಬಳಿಕ ಕಾಂಗ್ರೆಸ್ ಶನಿವಾರ ಬಿಜೆಪಿಗೆ ವಿಪಕ್ಷ ನಾಯಕ ಯಾರು ಎನ್ನುವ ಸವಾಲು ಮುಂದಿಟ್ಟು ಲೇವಡಿ ಮಾಡಿದೆ.
”ನಾವು ಗೆದ್ದೂ ಆಯ್ತು,ಸಿಎಂ, ಡಿಸಿಎಂ ಆಯ್ಕೆಯೂ ಆಯ್ತು,ಸಚಿವ ಸಂಪುಟವೂ ರೆಡಿ ಆಯ್ತು,ಸರ್ಕಾರದ ರಚನೆಯೂ ಆಯ್ತು,ಇದುವರೆಗೂ ನಮ್ಮ ಸರ್ಕಾರವನ್ನು ಎದುರಿಸಲು ಬಿಜೆಪಿ ಗೆ ಸಮರ್ಥ ವಿರೋಧ ಪಕ್ಷದ ನಾಯಕ ಸಿಗದಿರುವುದು ದುರಂತ!ನೈತಿಕತೆ ಇರದಿದ್ದರೇನಂತೆ,ಕನಿಷ್ಠ ವಿರೋಧ ಪಕ್ಷದ ನಾಯಕನನ್ನು ಮುಂದಿಟ್ಟುಕೊಂಡಾದರು ಬಿಜೆಪಿ ನಮ್ಮನ್ನು ವಿರೋಧಿಸಲಿ!” ಎಂದು ಟ್ವೀಟ್ ಮಾಡಿ ಲೇವಡಿ ಮಾಡಿದೆ.
ಸಂಪುಟ ರಚನೆಯ ಬೆನ್ನಲ್ಲೇ ಅವಕಾಶ ವಂಚಿತ ಕಾಂಗ್ರೆಸ್ ನಾಯಕರ ವಿಚಾರ ಉಲ್ಲೇಖಿಸಿ ತಿರುಗೇಟು ನೀಡಿರುವ ಬಿಜೆಪಿ ”ಸಚಿವರ ಪದಗ್ರಹಣದಂದೇ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಗ್ರಹಣ! ಮನೆಯೊಂದು, ಮೂರು ಬಣ, ಮೂವತ್ತು ಬಾಗಿಲು ಎಂಬಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ.”ಎಂದು ಟ್ವೀಟ್ ಮಾಡಿದೆ.