ಗದಗ: 2017ರ ಸರಕಾರದ ಆದೇಶದಂತೆ ಸ್ಥಳೀಯ ಸಂಸ್ಥೆಯಲ್ಲಿ ಕ್ಲೀನರ್ ಆಗಿ ಕಾರ್ಯನಿರ್ವಹಿಸುವವರನ್ನು ಲೋಡರ್ಗಳನ್ನಾಗಿ ಪರಿಗಣಿಸಿ ವೇತನ ಪಾವತಿಸುವುದರೊಂದಿಗೆ ಕಳೆದ ಏಳು ತಿಂಗಳಿಂದ ಬಾಕಿ ಇರುವ ಪೌರ ಕಾರ್ಮಿಕರ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ಪೌರಕಾರ್ಮಿಕರ ಸಂಘ ಗದಗ ಘಟಕ ಒತ್ತಾಯಿಸಿದೆ.
ಈ ಕುರಿತು ಸಂಘದ ಪ್ರಮುಖರು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ, ಗದಗ-ಬೆಟಗೇರಿ ನಗರಸಭೆಯಲ್ಲಿ 2012ನೇ ಇಸ್ವಿಯಿಂದ ಇಲ್ಲಿಯವರಗೆ ದುರಗಪ್ಪ ಪೂಜಾರ, ಚಂದ್ರಶೇಖರ ದೊಡ್ಡಮನಿ, ಪ್ರಕಾಶ ದೊಡ್ಡಮನಿ, ವಿರೂಪಾಕ್ಷಿ ರಾಮಗಿರಿ, ಮಾರುತಿ ಪರಾಪುರ, ವಿಜಯ ಅಳವುಂಡಿ, ಮರಿಯಪ್ಪ ಹೊಸಳ್ಳಿ, ಮಂಜುನಾಥ ಕಡಬೂರ ಇವರೆಲ್ಲರೂ ನಗರಸಭೆ ವತಿಯಿಂದ ಕ್ಲೀನರ್‌ಗಳಾಗಿ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ, 2017ರ ರಾಜ್ಯ ಸರಕಾರದ ಆದೇಶದಂತೆ ಅವರನ್ನು ಲೋಡರ್ಗಳಾಗಿ ಪರಿಗಣಿಸದೇ ವಂಚಿಸಲಾಗಿದೆ. ಇಂದಿಗೂ ಅವರಿಗೆ ಕ್ಲೀನರ್ ಹೆಸರಲ್ಲೇ ವೇತನ ಪಾವತಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅದರೊಂದಿಗೆ ಕಳೆದ ಏಳು ತಿಂಗಳುಗಳಿಂದ ಬಾಕಿ ಇರುವ ನಗರಸಭೆ ಎಲ್ಲ ಪೌರಕಾರ್ಮಿಕರ ವೇತನವನ್ನು ಮೇ 22ರ ಒಳಗಾಗಿ ಪಾವತಿಸಬೇಕು. ಇಲ್ಲವೇ ನಗರಸಭೆ ಎದುರಿಗೆ ವಾಹನಗಳ ಸಮೇತ ಪ್ರತಿಭಟನೆ ನಡೆಸುವುದಾಗಿ ಸಂಘದ ಪ್ರಮುಖರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಮಹಾಸಂಘದ ಗದಗ ಘಟಕದ ಅಧ್ಯಕ್ಷ ವಿರುಪಾಕ್ಷಪ್ಪ ಬಿ. ರಾಮಗಿರಿ, ರಮೇಶ ಬಾರಕೇರ, ಎಸ್.ಪಿ. ಬಳ್ಳಾರಿ, ದುರಗಪ್ಪ ಪೂಜಾರಿ, ಶಿವು ಯಳವತ್ತಿ, ಮಾರುತಿ ಪರಾಪುರ, ಮುತ್ತು ದೊಡ್ಡಮನಿ, ಶಿವು ಜಬಲದಿನ್ನಿ, ಪ್ರಕಾಶ ದೊಡಮನಿ, ಮಂಜು ಕಡಬುರ ಇದ್ದರು.