Advertisement

ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ : ಗಾನೇಮತ್‌-ಅಂಗದ್‌ ಜೋಡಿಗೆ ಬಂಗಾರ

04:58 PM Mar 24, 2021 | Team Udayavani |

ಹೊಸದಿಲ್ಲಿ: ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ನಲ್ಲಿ ಭಾರತೀಯರ ಬಂಗಾರದ ಬೇಟೆ ಮುಂದು ವರಿದಿದೆ. ಮಂಗಳವಾರದ ಮಿಕ್ಸೆಡ್‌ ಸ್ಕೀಟ್‌ ತಂಡ ಸ್ಪರ್ಧೆ ಯಲ್ಲಿ ಗಾನೇಮತ್‌ ಶೆಖೋನ್‌-ಅಂಗದ್‌ ವೀರ್‌ ಸಿಂಗ್‌ ಬಾಜ್ವಾ ಚಿನ್ನಕ್ಕೆ ಗುರಿ ಇರಿಸಿದರು.

Advertisement

ಫೈನಲ್‌ನಲ್ಲಿ ಭಾರತದ ಜೋಡಿ ಕಜಾಕ್‌ಸ್ಥಾನದ ಓಲ್ಗಾ ಪನರಿನಾ-ಅಲೆಕ್ಸಾಂಡರ್‌ ಯೆಶೆಂಕೊ ವಿರುದ್ಧ 33-29 ಅಂತರದ ಗೆಲುವು ಸಾಧಿಸಿತು. ಇದರೊಂದಿಗೆ ಕೂಟದಲ್ಲಿ ಭಾರತ ಗೆದ್ದ ಚಿನ್ನದ ಪದಕಗಳ ಸಂಖ್ಯೆ ಏಳಕ್ಕೆ ಏರಿತು. ಆತಿಥೇಯರ ಪಡೆ ಅಗ್ರಸ್ಥಾನ ಕಾಯ್ದುಕೊಂಡಿತು.

ಇದೇ ಸ್ಪರ್ಧೆಯಲ್ಲಿದ್ದ ಭಾರತದ ಪರಿನಾಜ್‌ ಧಾಲೀ ವಾಲ್‌-ಮೈರಾಜ್‌ ಅಹ್ಮದ್‌ ಖಾನ್‌ ಕಂಚಿನ ಪದಕ ದಿಂದ ವಂಚಿತರಾದರು. ಇಲ್ಲಿ ಕತಾರ್‌ನ ರೀಮ್‌ ಎ ಶಶಾìನಿ-ರಶೀದ್‌ ಹಮದ್‌ ಜೋಡಿ ಜಯ ಸಾಧಿಸಿತು.

ಇದನ್ನೂ ಓದಿ :ಮಾನವ ಹಕ್ಕುಗಳ ಉಲ್ಲಂಘನೆ : ವಿಶ್ವಸಂಸ್ಥೆಯಲ್ಲಿ ಲಂಕೆ ವಿರುದ್ಧ ನಿರ್ಣಯ

Advertisement

Udayavani is now on Telegram. Click here to join our channel and stay updated with the latest news.

Next