Advertisement

 ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌: ಅಂಜು ಮೌದ್ಗಿಲ್‌ಗೆ ಬೆಳ್ಳಿ

10:48 PM Jun 03, 2022 | Team Udayavani |

ಬಾಕು (ಅಜರ್‌ಬೈಜಾನ್‌): ಭಾರತದ ಅನುಭವಿ ಶೂಟರ್‌ ಅಂಜು ಮೌದ್ಗಿಲ್‌ ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ವನಿತೆಯರ 50 ಮೀ. ರೈಫ‌ಲ್‌ 3 ಪೊಸಿಶನ್‌ ಸ್ಪರ್ಧೆಯ ಫೈನಲ್‌ನಲ್ಲಿ ಅವರು ಡೆನ್ಮಾರ್ಕ್‌ನ ರಿಕ್ಕೆ ಮೀಂಗ್‌ ವಿರುದ್ಧ 12-16ರ ಹಿನ್ನಡೆ ಕಂಡು ಬಂಗಾರ
ವಂಚಿತರಾಗಬೇಕಾಯಿತು.

Advertisement

ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ಪದಕ ವಿಜೇತರಾದ ಅಂಜು ಮೌದ್ಗಿಲ್‌ 600ರಲ್ಲಿ 587 ಅಂಕ ಸಂಪಾದಿಸಿ ಫೈನಲ್‌ ಸ್ಪರ್ಧೆಗೆ ಅರ್ಹತೆ ಸಂಪಾದಿಸಿದ್ದರು. ಅರ್ಹತಾ ಸ್ಪರ್ಧೆಯಲ್ಲಿ ಅವರಿಗೆ 4ನೇ ಸ್ಥಾನ ಲಭಿಸಿತ್ತು. ಆದರೆ ಆಯುಷಿ ಪೋದ್ಧರ್‌ ಮತ್ತು ಆಶಿ ಚೌಕ್ಸಿ ಫೈನಲ್‌ ಪ್ರವೇಶಿಸಲು ವಿಫ‌ಲರಾದರು.

ಪುರುಷರಿಗೂ ಬೆಳ್ಳಿ
ಪುರುಷರ 3ಪಿ ಸ್ಪರ್ಧೆಯಲ್ಲೂ ಭಾರತ ಬೆಳ್ಳಿ ಗೆದ್ದಿತು. ಸ್ವಪ್ನಿಲ್‌ ಕುಸಾಲೆ, ದೀಪಕ್‌ ಕುಮಾರ್‌, ಗೋಲಿಗಡ ಗುರ್ಜಾರ್‌ ಅವರನ್ನೊಳಗೊಂಡ ತಂಡ ಕ್ರೊವೇಶಿಯಾಕ್ಕೆ 7-17ರಿಂದ ಶರಣಾಯಿತು. ಉಕ್ರೇನ್‌ ಕಂಚು ಗೆದ್ದಿತು. ಭಾರತವೀಗ ಒಂದು ಚಿನ್ನ, 3 ಬೆಳ್ಳಿ ಪದಕಗಳೊಂದಿಗೆ ತೃತೀಯ ಸ್ಥಾನ ಅಲಂಕರಿಸಿದೆ. ಕೊರಿಯಾ ಮತ್ತು ಸರ್ಬಿಯಾ ಮೊದಲೆರಡು ಸ್ಥಾನದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next