Advertisement

ಇಸ್ರೊ ಸರ್ವ ಪ್ರಥಮ ಸಾಧನೆ: ಕಿರಣ್‌ಕುಮಾರ್‌

03:13 PM Jun 26, 2018 | Harsha Rao |

ಬಂಟ್ವಾಳ: ಭಾರತವು 104 ಉಪಗ್ರಹಗಳ ಗುತ್ಛವನ್ನು ಒಂದೇ ರಾಕೆಟ್‌ನಲ್ಲಿ ನಭಕ್ಕೆ ಕಳುಹಿಸುವ ಮೂಲಕ ಮಹತ್ತರ ಸಾಧನೆ ಮಾಡಿದೆ. ಮಂಗಳನ ಕಕ್ಷೆಗೆ ಉಪಗ್ರಹವನ್ನು ಕಳುಹಿಸುವ ಮೊತ್ತಮೊದಲ ಪ್ರಯತ್ನದಲ್ಲಿ ಯಶಸ್ಸು ಕಂಡಿದೆ. ಮುಂದಿನ ಪ್ರಯತ್ನದಲ್ಲಿ ಮಾನವ ಪದಾರ್ಪಣೆ ಪ್ರಯತ್ನ ನಡೆಯಲಿದೆ ಎಂದು ಇಸ್ರೋ ಪೂರ್ವಾಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಹೇಳಿದರು.

Advertisement

ಅವರು ಸೋಮವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಜಿಲ್ಲೆಯ ಪ್ರಥಮ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಉದ್ಘಾಟನೆ ಬಳಿಕ ನಡೆದ ವಿದ್ಯಾರ್ಥಿ ವಿಜ್ಞಾನಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಉಪಗ್ರಹಗಳಿಂದ ಉಪಕಾರ
ಉಪಗ್ರಹದ ಮೂಲಕ ಜನರ ಹಿತ ಕಾಪಾಡುವಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಉಪಗ್ರಹದ ಮೂಲಕ ಹವಾಮಾನದ ವ್ಯತ್ಯಾಸವನ್ನು ಮುಂಚಿತವಾಗಿ ಗುರುತಿಸಲು ಸಾಧ್ಯವಾಗುವುದು. ಸಮುದ್ರಲ್ಲಿಮತ್ಸé ಸಂಪತ್ತನ್ನು ಗುರುತಿಸಿ
ಮೀನುಗಾರರಿಗೆ ಅನುಕೂಲ ಮಾಹಿತಿ ನೀಡುವ ಮೂಲಕ ಕೋಟ್ಯಂತರ ಇಂಧನ ವೆಚ್ಚವನ್ನು ತಗ್ಗಿಸಲು ಸಾಧ್ಯವಾಗಿದೆ. ಇತರ ದೇಶಗಳಿಗೂ ಭಾರತದ ಉಪಗ್ರಹಗಳ ಪ್ರಯೋಜನ ಸಿಗುವಂತಾಗಿದೆ ಎಂದರು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಜ್ಞಾನದ ಜತೆಗೆ ಕೌಶಲ, ಉತ್ತಮ ಗುಣನಡತೆ ಬೆಳೆಸುವ ಸಮಗ್ರ ಶಿಕ್ಷಣ ನೀಡುತ್ತಿರುವುದು ಮೆಚ್ಚುಗೆಯ ವಿಚಾರ ಎಂದರು.

ವಿದ್ಯಾಕೇಂದ್ರ ಸಂಚಾಲಕ ಡಾ| ಪ್ರಭಾಕರ ಭಟ್‌ ಪ್ರಸ್ತಾವಿಸಿ, ಸ್ವಾಗತಿಸಿದರು. ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಸಭಾಧ್ಯಕ್ಷತೆ ವಹಿಸಿದ್ದರು. ರಾ.ಸ್ವ. ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಪರ್ಕ ಪ್ರಮುಖ್‌ ಕೆ. ಎಸ್‌. ವೆಂಕಟೇಶ್‌ ಮೈಸೂರು ಶುಭ ಹಾರೈಸಿದರು. ಮುಂಬಯಿ ಚಾರ್ಟರ್ಡ್‌ ಅಕೌಂಟೆಂಟ್‌ ಎಂ.ಎನ್‌. ಶೆಟ್ಟಿ, ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್‌, ವಿಷಯ ಪರಿವೀಕ್ಷಕ ರಾಧಾಕೃಷ್ಣ ಭಟ್‌, ಸಹಸಂಚಾಲಕ ರಮೇಶ್‌ಎನ್‌., ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಉದಯ ವಿ.ಜಿ. ಬೆಂಗಳೂರು, ಸವೊìತ್ತಮ ಬಾಳಿಗಾ, ಪ್ರಾಂಶುಪಾಲ ಕೃಷ್ಣಪ್ರಸಾದ್‌ ಕಾಯರ್‌ಕಟ್ಟೆ ಉಪಸ್ಥಿತರಿದ್ದರು.

Advertisement

ವಿದ್ಯಾರ್ಥಿಗಳಿಗೆ ಮೆಚ್ಚುಗೆ
ಸಂವಾದದಲ್ಲಿ ತಾಲೂಕಿನ ವಿವಿಧ 60 ಶಾಲೆಗಳ ವಿದ್ಯಾರ್ಥಿಗಳು ಭಾಗ ವಹಿಸಿದ್ದು, 75ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿದರು. ಇಸ್ರೋ ಪೂರ್ವಾಧ್ಯಕ್ಷರು ಇಲ್ಲಿನ ವಿದ್ಯಾರ್ಥಿಗಳ ವೈಜ್ಞಾನಿಕ ಕುತೂಹಲವನ್ನು ಮೆಚ್ಚಿಕೊಂಡರು.

ಕಾರ್ಯಕ್ರಮ ಪೂರ್ವದಲ್ಲಿ ಅಟಲ್‌ ಟಿಂಕರಿಂಗ್‌ ಲ್ಯಾಬನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಇಸ್ರೊ ಪೂರ್ವಾಧ್ಯಕ್ಷರು ವಿದ್ಯಾರ್ಥಿಗಳು ನಿರ್ಮಿಸಿದ ತಾಂತ್ರಿಕ ಉಪಕರಣಗಳ ವಿವರಣೆ ಪಡೆದರು. ಶಾಲಾ ಸಂಚಾಲಕ ವಸಂತ ಮಾಧವ ವಂದಿಸಿದರು. ಮಾತಾಜಿ ಶೈಲಿನಿ ಕಾರ್ಯಕ್ರಮ ನಿರ್ವಹಿಸಿದರು.

ವಿದ್ಯಾರ್ಥಿ ವಿಜ್ಞಾನಿ ಸಂವಾದ  ಕೇಳಿಬಂದ ಪ್ರಶ್ನೆಗಳು
– ಏಲಿಯನ್ಸ್‌ಗಳು ಇವೆಯೇ?

ಇದುವರೆಗೆ ಅಂತಹ ಯಾವುದೇ ಅಧಿಕೃತ ಪುರಾವೆ ಸಹಿತ ಮಾಹಿತಿ ದೊರೆತಿಲ್ಲ.

– ಬಾಹ್ಯಾಕಾಶದ ಕಪ್ಪು ರಂಧ್ರಗಳು ಬೆಳಕನ್ನೂ ಪ್ರತಿಫಲಿಸುವುದಿಲ್ಲ. ಹಾಗಿದ್ದರೆ ಅವನ್ನು ಗುರುತಿಸುವುದು ಹೇಗೆ?
ಕಪ್ಪುರಂಧ್ರಗಳ ಇತರ ಪರಿಣಾಮಗಳ ಮೂಲಕ ಗುರುತಿಸುತ್ತಾರೆ. ವಿಸ್ಫೋಟ ಪೂರ್ವದಲ್ಲಿ ನಡೆದಿರುವ ವಿದ್ಯುತ್ಕಾಂತೀಯ ಅಲೆಗಳು ಇಂತಹ ಪರಿಣಾಮಗಳನ್ನು ಸೂಸುತ್ತವೆ.

– ಶೂನ್ಯ ಗುರುತ್ವ ಬಲವನ್ನು ಹೇಗೆ ನಿಭಾಯಿಸುತ್ತಾರೆ?
ನಿರ್ದಿಷ್ಟವಾಗಿ ಶೂನ್ಯ ಗುರುತ್ವವನ್ನು ಅಂತರಿಕ್ಷ ಯಂತ್ರದಲ್ಲಿ ಸೃಷ್ಟಿಸಿ ಬಾಹ್ಯಾಕಾಶ ಯಾನಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ. ಆಗ ಆತನ ಅಂಗಾಂಗದ ಮೇಲೆ, ಆರೋಗ್ಯ, ದೈಹಿಕ ವ್ಯತ್ಯಾಸಗಳನ್ನು ಗುರುತಿಸಿಕೊಳ್ಳಲಾಗುತ್ತದೆ.

– ಬಾಹ್ಯಾಕಾಶದಲ್ಲಿ ಮಾನವ ನಿರ್ಮಿತ ಉಪಗ್ರಹವೆಷ್ಟು?
ಬಾಹ್ಯಾಕಾಶದಲ್ಲಿ ಪ್ರಸ್ತುತ 8,500ರಷ್ಟು ಮಾನವ ನಿರ್ಮಿತ ಉಪಗ್ರಹಗಳು ಸುತ್ತುತ್ತಿದ್ದು, 1700 ರಷ್ಟು ಉಪಗ್ರಹಗಳು ಸಕ್ರಿಯವಾಗಿವೆ. ಉಳಿದವುಗಳು ನಿಷ್ಪ್ರಯೋಜಕವಾಗಿದ್ದು, ಅವುಗಳನ್ನು ಸ್ಥಾನಪಲ್ಲಟ ಮಾಡುವ ಮೂಲಕ ಅಂತರಿಕ್ಷವನ್ನು ಸ್ವತ್ಛಗೊಳಿಸುವ ಕ್ರಮ ನಡೆಯುತ್ತದೆ.

– ಜ್ಯೋತಿಷ ಶಾಸ್ತ್ರ ನಿಜವೇ, ಗ್ರಹಗಳ ಪ್ರಭಾವ ಮಾನವನ ಮೇಲೆ ಇದೆಯೇ?
ಹುಣ್ಣಿಮೆಯ ಸಂದರ್ಭ ಸಮುದ್ರದ ನೀರು ಉಕ್ಕೇರುತ್ತದೆ. ಇದು ಚಂದ್ರಗಹದ ನೈಸರ್ಗಿಕ ಪ್ರಭಾವವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next