Advertisement

ವಿದ್ಯಾರ್ಥಿನಿಯರು ರೂಪಿಸಿದ ಉಪಗ್ರಹ ಹೊತ್ತು ನಭಕ್ಕೆ ನೆಗೆದ ಇಸ್ರೋ ಎಸ್‌ಎಸ್‌ಎಲ್‌ವಿ

10:48 AM Aug 07, 2022 | Team Udayavani |

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಹೊಸದಾಗಿ ಅಭಿವೃದ್ಧಿಪಡಿಸಿದ ಸಣ್ಣ ಉಪಗ್ರಹ ಉಡಾವಣಾ ವಾಹನದ (ಎಸ್‌ಎಸ್‌ಎಲ್‌ವಿ) ಮೊದಲ ಉಡಾವಣೆ ನಡೆಸಿದೆ.

Advertisement

“ಎಸ್‌ಎಸ್‌ಎಲ್‌ವಿ-ಡಿ1 ಎಲ್ಲಾ ಹಂತಗಳಲ್ಲಿ ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದೆ. ಕಾರ್ಯಾಚರಣೆಯ ಟರ್ಮಿನಲ್ ಹಂತದಲ್ಲಿ, ಕೆಲವು ಡೇಟಾ ನಷ್ಟ ಸಂಭವಿಸುತ್ತಿದೆ. ಸ್ಥಿರ ಕಕ್ಷೆಯನ್ನು ಸಾಧಿಸಲು ಸಂಬಂಧಿಸಿದಂತೆ ಕಾರ್ಯಾಚರಣೆಯ ಅಂತಿಮ ಫಲಿತಾಂಶವನ್ನು ತೀರ್ಮಾನಿಸಲು ನಾವು ಡೇಟಾವನ್ನು ವಿಶ್ಲೇಷಿಸುತ್ತಿದ್ದೇವೆ” ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದರು.

ಎಸ್‌ಎಸ್‌ಎಲ್‌ವಿ ಭೂಮಿಯ ವೀಕ್ಷಣಾ ಉಪಗ್ರಹ -02 ಮತ್ತು ‘ಸ್ಪೇಸ್ ಕಿಡ್ಜ್ ಇಂಡಿಯಾ’ ವಿದ್ಯಾರ್ಥಿ ತಂಡವು ಅಭಿವೃದ್ಧಿಪಡಿಸಿದ ಸಹ-ಪ್ರಯಾಣಿಕ ಉಪಗ್ರಹ ಆಜಾದಿ ಸ್ಯಾಟ್ ಅನ್ನು ಹೊತ್ತೊಯ್ದಿದೆ.

ಇದನ್ನೂ ಓದಿ:ಇಲ್ಲಿ ಮಳೆಗಾಲದಲ್ಲಿ ಸಾಯಲೂ ಬಾರದು…! ಗೃಹ ಸಚಿವರ ಕ್ಷೇತ್ರದಲ್ಲಿ ಏನಿದು ಅವಸ್ಥೆ

ಎಸ್‌ಎಸ್‌ಎಲ್‌ವಿ ಯಲ್ಲಿನ ಪ್ರಾಥಮಿಕ ಪೇಲೋಡ್ ಇಒಎಸ್-02 ಆಗಿದೆ. ಇದು ಆಪ್ಟಿಕಲ್ ರಿಮೋಟ್ ಸೆನ್ಸಿಂಗ್ ಉಪಗ್ರಹವಾಗಿದ್ದು, ಇದು ಭೂ-ಪರಿಸರ ಅಧ್ಯಯನಗಳು, ಅರಣ್ಯ, ಜಲವಿಜ್ಞಾನ, ಕೃಷಿ, ಮಣ್ಣು ಮತ್ತು ಕರಾವಳಿ ಅಧ್ಯಯನಗಳ ಕ್ಷೇತ್ರದಲ್ಲಿ ಉಷ್ಣ ವೈಪರೀತ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

Advertisement

ಆಜಾದಿ ಸ್ಯಾಟ್ (AzaadiSAT) ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಗುರುತಿಸಲು 750 ಶಾಲಾ ವಿದ್ಯಾರ್ಥಿಗಳು ನಿರ್ಮಿಸಿದ 75 ಪೇಲೋಡ್‌ಗಳನ್ನು ಒಳಗೊಂಡಿದೆ. ಉಪಗ್ರಹವನ್ನು ವಿನ್ಯಾಸಗೊಳಿಸಿದ ವಿದ್ಯಾರ್ಥಿಗಳು ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಲ್ಲಿ ಎಸ್ಎಸ್ಎಲ್ ವಿ-ಡಿ1 ಉಡಾವಣೆಯನ್ನು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next