Advertisement

ಐಎಡಿ ತಂತ್ರಜ್ಞಾನದ ಪರೀಕ್ಷೆ; ಯಶಸ್ವಿಯಾಯಿತು ಇಸ್ರೋ ಪ್ರಯೋಗ

07:16 PM Sep 04, 2022 | Team Udayavani |

ನವದೆಹಲಿ: ಭವಿಷ್ಯದ ಯೋಜನೆಗಳ ವೇಳೆ ಮಂಗಳ ಅಥವಾ ಶುಕ್ರ ಗ್ರಹದ ಅಂಗಳದಲ್ಲಿ ಪೇಲೋಡ್‌ಗಳನ್ನು ಇಳಿಸಲು ಬಳಸುವಂಥ ಇನ್‌ಫ್ಲೇಟೇಬಲ್‌ ಏರೋಡೈನಾಮಿಕ್‌ ಡಿಸೆಲೆರೇಟರ್‌(ಐಎಡಿ)ನ ಪ್ರಾಯೋಗಿಕ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನೆರವೇರಿಸಿದೆ.

Advertisement

ಮಂಗಳ ಅಥವಾ ಶುಕ್ರ ಗ್ರಹದ ವಾತಾವರಣಕ್ಕೆ ಒಂದು ವಸ್ತುವನ್ನು ವಾಯುಬಲ ವಿಜ್ಞಾನದ ಅನ್ವಯ ಇಳಿಸುವ ಉದ್ದೇಶದಿಂದ ಐಎಡಿಯನ್ನು ಅಭಿವೃದ್ಧಿಪಡಿಸಲಾಗಿದೆ.

ಪ್ರಾಯೋಗಿಕ ಪರೀಕ್ಷೆ ವೇಳೆ ರಾಕೆಟ್‌ನ ಪೇಲೋಡ್‌ ಬೇಯೊಳಗೆ ಐಎಡಿಯನ್ನು ಮಡಚಿ ಇಟ್ಟು, ತಿರುವನಂತಪುರದ ಥುಂಬಾದಿಂದ ರಾಕೆಟ್‌ ಉಡಾವಣೆ ಮಾಡಲಾಯಿತು. ಈ ರಾಕೆಟ್‌ ಐಎಡಿಯನ್ನು 84 ಕಿ.ಮೀ. ಎತ್ತರಕ್ಕೆ ಸಾಗಿಸಿತು.

ಐಎಡಿ ಅಲ್ಲೇ ಉಬ್ಬಿಕೊಂಡ ಪರಿಣಾಮ, ಪೇಲೋಡ್‌ ನಿಧಾನವಾಗಿ ರಾಕೆಟ್‌ನಿಂದ ಹೊರಬಂದು ವಾತಾವರಣಕ್ಕೆ ಇಳಿಯಿತು. ಈ ಮೂಲಕ ಯೋಜನೆಯ ಎಲ್ಲ ಗುರಿಯನ್ನೂ ನಿಖರವಾಗಿ ಸಾಧಿಸಿದಂತಾಯಿತು ಎಂದು ಇಸ್ರೋ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next