Advertisement

ISRO: ಯಶಸ್ವಿಯಾಗಿ ಕಕ್ಷೆಗೆ ಸೇರಿದ ಇಸ್ರೋದ ದೇಶಿ ದಿಕ್ಸೂಚಿ ಉಪಗ್ರಹ “ನಾವಿಕ್”

01:09 PM May 29, 2023 | Team Udayavani |

ಹೈದರಾಬಾದ್:‌ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೋಮವಾರ (ಮೇ 29) ದಿಕ್ಸೂಚಿ ವ್ಯವಸ್ಥೆಯ ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್‌ ನ ಲಾಂಚ್‌ ಪ್ಯಾಡ್‌ ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.

Advertisement

ಜಿಎಸ್‌ ಎಲ್‌ ವಿ ರಾಕೆಟ್‌ ಮೂಲಕ ದಿಕ್ಸೂಚಿ ವ್ಯವಸ್ಥೆಯ ಮುಂದಿನ ತಲೆಮಾರಿನ ಉಪಗ್ರಹವನ್ನು ಉಡಾವಣೆ ಮಾಡಿದೆ. ದಿಕ್ಸೂಚಿ ಸೆಟಲೈಟ್‌ ಯಶಸ್ವಿಯಾಗಿ ಕಕ್ಷೆಯೊಳಗೆ ಸೇರಿಕೊಂಡಿರುವುದಾಗಿ ಇಸ್ರೋ ತಿಳಿಸಿದೆ.

ನಾವಿಕ್‌ ಹೆಸರಿನ ಜಿಪಿಎಸ್‌ ಆಧಾರಿತ ಈ ದಿಕ್ಸೂಚಿ ಭಾರತ ಮಾತ್ರವಲ್ಲದೇ  ಸುತ್ತಲಿನ 1,500 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ನಿಖರವಾದ ನಕ್ಷೆಯನ್ನು ಒದಗಿಸಲಿದೆ. ಎನ್‌ ವಿಎಸ್‌ 01 ಹೆಸರಿನ 2,232 ಕೆಜಿ ತೂಕದ ಉಪಗ್ರಹವನ್ನು ಹೊತ್ತ ಜಿಎಸ್‌ ಎಲ್‌ ವಿ ಸೆಟಲೈಟ್‌ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next