Advertisement

ಇಸ್ರೋ ಸ್ಪೇಸ್‌ ಶಟಲ್‌ ಪರೀಕ್ಷೆಗೆ ಸಿದ್ಧ: ಸಂಪೂರ್ಣವಾಗಿ ಮೇಡ್‌ ಇನ್‌ ಇಂಡಿಯಾ ನಿರ್ಮಿತ

10:21 PM Nov 08, 2022 | Team Udayavani |

ಬೆಂಗಳೂರು: ಭಾರತವು ಸ್ವದೇಶಿ ನಿರ್ಮಿತ ಮರು ಬಳಕೆ ಮಾಡಬಲ್ಲ ವಾಹನ: ಸ್ಪೇಸ್‌ ಶಟಲ್‌ ಅನ್ನು ಅಭಿವೃದ್ಧಿಪಡಿಸಿದ್ದು, ಪರೀಕ್ಷೆಗೆ ತಯಾರಿ ನಡೆಸುತ್ತಿದೆ. ಸದ್ಯದಲ್ಲೇ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಈ ಪರೀಕ್ಷೆ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್‌ ಹೇಳಿದ್ದಾರೆ.

Advertisement

ಇಸ್ರೋ ಸಂಸ್ಥೆಯು ತಾನು ನಿರ್ಮಿಸಿರುವ ಮೊದಲ ಮರುಬಳಕೆಯ ಲಾಂಚ್‌ ವೆಹಿಕಲ್‌ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌(ಆರ್‌ಎಲ್‌ವಿ-ಟಿಡಿ)ಯನ್ನು ಚಳ್ಳಕೆರೆಯ ಏರೋನ್ಯಾಟಿಕಲ್‌ ಟೆಸ್ಟ್‌ ರೇಂಜ್‌ನಲ್ಲಿ ಇದೇ ಮೊದಲ ಬಾರಿಗೆ ರನ್‌ವೇ ಲ್ಯಾಂಡಿಂಗ್‌ ಎಕ್ಸ್‌ಪೆರಿಮೆಂಟ್‌(ಆರ್‌ಎಲ್‌ವಿ-ಎಲ್‌ಇಎಕ್ಸ್‌) ನಡೆಸಲಿದೆ. ಇದಕ್ಕೆ ವಾತಾವರಣವೂ ಪೂರಕವಾಗಿರಬೇಕು. ಈ ಬಗ್ಗೆ ಗಮನ ಹರಿಸುತ್ತಿದ್ದೇವೆ. ಎಲ್ಲ ಸರಿಹೋದ ಮೇಲೆ ಲಾಂಚ್‌ ಮಾಡುತ್ತೇವೆ ಎಂದು ಸೋಮನಾಥ್‌ ಅವರು ತಿಳಿಸಿದ್ದಾರೆ.

ಹೇಗೆ ಪರೀಕ್ಷೆ?
ಇಸ್ರೋ ಅಧಿಕಾರಿಗಳ ಪ್ರಕಾರ, ಆರ್‌ಎಲ್‌ವಿ ವಿಂಗ್‌ ಹಾಡಿಯನ್ನು ಹೆಲಿಕಾಪ್ಟರ್‌ ಮೂಲಕ ಮೂರರಿಂದ ಐದು ಕಿ.ಮೀ.ಗಳವರೆಗೆ ಮೇಲಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಮೇಲಿನಿಂದ ರನ್‌ವೇಗೆ ನಾಲ್ಕರಿಂದ ಐದು ಕಿ.ಮೀ. ದೂರವಿರುವಾಗ ಇದನ್ನು ಹೆಲಿಕಾಪ್ಟರ್‌ನಿಂದ ರಿಲೀಸ್‌ ಮಾಡಲಾಗುತ್ತದೆ. ಇದನ್ನು ಬಿಟ್ಟ ಮೇಲೆ ಆರ್‌ಎಲ್‌ವಿಯ ಗೈಡ್‌ನೊಂದಿಗೆ ರನ್‌ವೇ ಕಡೆಗೆ ಇದನ್ನು ಕರೆತರಲಾಗುತ್ತದೆ. ಬಳಿಕ ಸುರಕ್ಷಿತವಾಗಿ ಇಳಿಸಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next