Advertisement

ಇಸ್ರೋ ರಾಕೆಟ್‌ನಿಂದ ಸೆಲ್ಫಿ!

03:45 AM Feb 17, 2017 | Team Udayavani |

ನವದೆಹಲಿ: ಇಸ್ರೋ ನಭಕ್ಕೆ ಚಿಮ್ಮಿಸಿದ “ಪಿಎಸ್‌ಎಲ್‌ವಿ- ಸಿ37′ ಕೂಡ ಸೆಲ್ಫಿ ಹೊಡೆದಿದೆ! ಹೌದು, ಭೂಮಿಯಿಂದ ಚಿಮ್ಮಿದ ರಾಕೆಟು 28 ನಿಮಿಷದೊಳಗೆ ಎಲ್ಲ 104 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಹೀಗೆ ಕಕ್ಷೆಗೆ ಸೇರುವ ದೃಶ್ಯಗಳು “ಪಿಎಸ್‌ಎಲ್‌ವಿ- ಸಿ37’ಯ ಒಂದು ಬದಿಯಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಉತ್ಕೃಷ್ಟ ವಿಡಿಯೋವನ್ನು ಇಸ್ರೋ ಗುರುವಾರ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ರಾಕೆಟ್‌ ಒಂದು ತನ್ನ ಉಪಗ್ರಹಗಳ ಚಲನೆಯ ಸೆಲ್ಫಿ ಹೊಡೆದಿದ್ದು ಇದೇ ಮೊದಲು!

Advertisement

ವಿಶ್ವದ ಶ್ಲಾಘನೆ: ಏಕಕಾಲಕ್ಕೆ 104 ಉಪಗ್ರಹಗಳನ್ನು ಹಾರಿಬಿಟ್ಟು ಸಾಧನೆಗೈದ ಇಸ್ರೋಗೆ ಜಾಗತಿಕ ಮಾಧ್ಯಮಗಳು ಶಹಬ್ಟಾಸ್‌ ಹೇಳಿವೆ. “ವಿಶ್ವದ ದುಬಾರಿ ವೆಚ್ಚದ ಬಾಹ್ಯಾಕಾಶ ಆಲೋಚನೆಗಳಿಗೆ ಇದೊಂದು ಪಾಠ’ ಎಂದು ಬಿಬಿಸಿ ಬಣ್ಣಿಸಿದೆ. “28 ನಿಮಿಷದಲ್ಲಿ ಇಸ್ರೋ ಬಾಹ್ಯಾಕಾಶದಲ್ಲಿ ಹೊಸ ಭಾಷ್ಯ ಬರೆಯಿತು. ಅಂತರಿಕ್ಷದಲ್ಲಿ ಸಾಧನೆ ಮಾಡಿದ ಪ್ರತಿಷ್ಠಿತ ದೇಶಗಳ ಮುಂದೆ ಭಾರತ ಮಹತ್ವದ ಆಟಗಾರ’ ಎಂದು ಅಮೆರಿಕದ “ನ್ಯೂಯಾರ್ಕ್‌ ಟೈಮ್ಸ್‌’ ಹೇಳಿದೆ. 

“ಕಡಿಮೆ ಬಜೆಟ್ಟಿನಲ್ಲಿ ಭಾರತ ಮಾಡಿದ ಸಾಧನೆಯನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಜೀರ್ಣಿಸಿಕೊಳ್ಳಲಿ’ ಎನ್ನುವುದು ಚೀನಾದ “ಗ್ಲೋಬಲ್‌ ಟೈಮ್ಸ್‌’ ನುಡಿ. “ಆಗ ಅಮೆರಿಕ ಮತ್ತು ರಷ್ಯಾ ನಡುವೆ ಶೀತಲ ಸಮರವಿತ್ತು. ಈಗ ಭಾರತ- ಚೀನಾ ನಡುವೆ ಶೀತಲ ಸ್ಪರ್ಧೆ ಸಾಗಿದೆ’ ಎಂದು ಸಿಎನ್‌ಎನ್‌ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next