Advertisement

ಇಸ್ರೋ ಸಾಧನೆ: ಚೀನಾಗೆ ವೇದನೆ

03:45 AM Feb 21, 2017 | Team Udayavani |

ಬೀಜಿಂಗ್‌: ಕಡಿಮೆ ವೆಚ್ಚದಲ್ಲಿ 104 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆಗೊಳಿಸಿ ವಿಶ್ವದ ಗಮನ ಸೆಳೆದ ಇಸ್ರೋ ದಾಖಲೆ ಇದೀಗ ಚೀನಾದ ನಿದ್ದೆಗೆಡಿಸಿದೆ. ಚೀನಾವು ಭಾರತದಿಂದ ಪಾಠ ಕಲಿಯಬೇಕಿದೆ ಎಂದು ಸ್ವತಃ ಇಲ್ಲಿನ ಸರ್ಕಾರಿ ಸ್ವಾಮ್ಯದ ಮಾಧ್ಯಮವೇ ಹೇಳಿದೆ. 

Advertisement

ಇಸ್ರೋ ಹಾದಿಯಲ್ಲಿ ಚೀನಾವೂ ಸಾಗಲಿದೆ ಎಂದು ಪ್ರತಿಕ್ರಿಯೆ ನೀಡಿದ್ದ ಇಲ್ಲಿನ ಸರ್ಕಾರ, ಇದೀಗ “ಅತ್ಯಂತ ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮೂಲಕ ದಕ್ಷ ಹಾಗೂ ವಿಶ್ವಾಸಾರ್ಹ ಸೇವೆ ನೀಡುತ್ತಿರುವ ಭಾರತವು ಚೀನಾವನ್ನು ಹಿಂದಿಕ್ಕಿತೇ’ ಎಂದು ತನ್ನ ಬಾಹ್ಯಾಕಾಶ ವಿಜ್ಞಾನಿಗಳನ್ನು ಪ್ರಶ್ನಿಸಿದೆ. ಜತೆಗೆ, ಭಾರತದೊಂದಿಗೆ ಸ್ಪರ್ಧೆ ಅನಿವಾರ್ಯ. ಚೀನಾದ ಬಾಹ್ಯಾಕಾಶ ಸಂಸ್ಥೆಗೆ ಇದೊಂದು ಸವಾಲು ಎಂದೂ ಚೀನಾ ಸರ್ಕಾರಿ ಮಾಧ್ಯಮ ಗ್ಲೋಬಲ್‌ ಟೈಮ್ಸ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next