Advertisement

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

03:54 PM Dec 25, 2024 | Team Udayavani |

ಹೊಸದಿಲ್ಲಿ: ಬಾಹ್ಯಾಕಾಶದಲ್ಲಿ ಬೀಜ ಮೊಳೆಕೆಯೊಡೆಯುವಿಕೆಯ ಬಗ್ಗೆ ಅಧ್ಯಯನ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಮುಂದಾಗಿದೆ. ಇದಕ್ಕಾಗಿ ಅಲಸಂಡೆ ಮತ್ತು ಪಾಲಕ್‌ ಬೀಜಗಳನ್ನೊಳಗೊಂಡ ರಾಕೆಟನ್ನು ವರ್ಷಾಂತ್ಯಕ್ಕೆ ಹಾರಿಸಲಿದೆ.

Advertisement

ಸಸ್ಯ ಬೆಳವಣಿಗೆ ಬಗ್ಗೆ ಅಧ್ಯಯನ ಮಾಡಲು ರಾಕೆಟನ್ನೇ ಇಸ್ರೋ ಬಳಕೆ ಮಾಡಿಕೊಳ್ಳಲಿದೆ. ಉಪಗ್ರಹಗಳ ಜತೆಗೆ ಈ ರಾಕೆಟ್‌ನಲ್ಲಿ ಬೀಜಗಳನ್ನೊಳಗೊಂಡ ಟ್ಯೂಬ್‌ ಸಹ ಅಳವಡಿಸಲಾಗಿರುತ್ತದೆ. ಇದರಲ್ಲಿ ಗಿಡ ಬೆಳೆಯಲು ಶಾಖದ ವ್ಯವಸ್ಥೆ ಮಾಡಲಾಗಿದ್ದು, ಬಾಹ್ಯಾಕಾಶ­ದಲ್ಲಿ ಇದು ಹೇಗೆ ಬೆಳೆಯಲಿದೆ ಎಂಬು­ದನ್ನು ಅಧ್ಯಯನ ಮಾಡಲಾಗುತ್ತದೆ.

ಇದಕ್ಕಾಗಿ 8 ಅಲಸಂಡೆ ಹಾಗೂ ಪಾಲಕ್‌ ಬೀಜಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ. ಇವು 2 ಎಲೆ ಬಿಡುವವರೆಗೆ ಬೆಳವಣಿಗೆ ಹೇಗಿರಲಿದೆ ಎಂದು ಅಧ್ಯಯನ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ.

ಬಾಹ್ಯಾಕಾಶ ಡಾಕಿಂಗ್‌ ಪರೀಕ್ಷೆ: ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಾಣ ಮಾಡಲು ಮುಂದಾಗಿರುವ ಇಸ್ರೋ 2 ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಜೋಡಿಸುವ ಯೋಜನೆಯನ್ನೂ ಸಹ ಇದೇ ಯೋಜನೆಯ ಉಡಾವಣೆ­ಯೊಂದಿಗೆ ಕೈಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next