Advertisement
ಭೂಮಿಯ ಮೇಲ್ಮೆ ನಿಂದ 500ರಿಂದ 2 ಸಾವಿರ ಕಿ.ಮೀ. ಒಳಗಿನ ವಲಯದಲ್ಲಿ ಬರುವ ಕಕ್ಷೆಯನ್ನು ಕೆಳ ಹಂತದ ಭೂ ಕಕ್ಷೆ ಎಂದು ಕರೆಯುತ್ತಾರೆ. “ನೇತ್ರ’ ಎಂಬುದು ಟೆಲಿಸ್ಕೋಪ್‌ಗ್ಳು ಹಾಗೂ ರಾಡಾರ್‌ಗಳುಳ್ಳ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನಿಂದಲೇ ಭಾರತದ ಅತೀ ಕೆಳ ಕ್ರಮಾಂಕದ ಭೂಕಕ್ಷೆಯಲ್ಲಿನ ಉಪಗ್ರಹಗಳ ಮೇಲೆ ನಿಗಾ ಇಡುವಂತೆ ಇವುಗಳನ್ನು ರೂಪಿಸಲಾಗಿರುತ್ತದೆ. ಹಾಗಾಗಿ ಇದೊಂದು ರೀತಿಯಲ್ಲಿ ಟೆಲಿಸ್ಕೋಪ್‌ನಂತೆ ಕೆಲಸ ಮಾಡುತ್ತದೆ.
ತಿರುವನಂತಪುರ ಬಳಿಯ ಪೊನ್ಮುಡಿ, ರಾಜಸ್ಥಾನದ ಮೌಂಟ್ ಅಬು, ದೇಶದ ಉತ್ತರ ಭಾಗ ಹಾಗೂ ಈಶಾನ್ಯ ಭಾಗದಲ್ಲಿ ಸ್ಥಾಪಿಸಲಾಗಿರುವ “ನೇತ್ರ’ ವ್ಯವಸ್ಥೆಯು 160ರಿಂದ 2,000 ಕಿ.ಮೀ.ವರೆಗಿನ ವ್ಯಾಪ್ತಿಯಲ್ಲಿ ಸತತ ನಿಗಾ ವಹಿಸುವ ಸಾಮರ್ಥ್ಯ ಹೊಂದಿದೆ. ಇದು 10 ಸೆಂ.ಮೀ.ನಷ್ಟು ಚಿಕ್ಕದಾದ ವಸ್ತುವನ್ನೂ ಪತ್ತೆಹಚ್ಚುವುದು.
Related Articles
ಬಾಹ್ಯಾಕಾಶದಲ್ಲಿರುವ ಇತರ ಉಪಗ್ರಹಗಳ ಅವಧಿ ಮುಕ್ತಾಯ, ಅವುಗಳ ಧ್ವಂಸ ಹಾಗೂ ಮತ್ತಿತರ ಕಾರಣಗಳಿಂದಾಗಿ ಅಲ್ಲಿ ಸೃಷ್ಟಿಯಾಗುವ ಬಾಹ್ಯಾಕಾಶ ಅವಶೇಷಗಳು, ಭಾರತೀಯ ಉಪಗ್ರಹಗಳನ್ನು ನಿಷ್ಕ್ರಿಯಗೊಳಿಸಬಲ್ಲವು. ಜತೆಗೆ ಹಾನಿಯನ್ನೂ ಮಾಡಬಲ್ಲವು. ಹಾಗಾಗಿ ಅವುಗಳಿಂದ ಉಪಗ್ರಹಗಳನ್ನು ರಕ್ಷಿಸುವ ಅಗತ್ಯವಿದೆ.
Advertisement