Advertisement

ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಇಸ್ರೋ ಕೊಡುಗೆ ಅಪಾರ

11:35 AM Nov 29, 2017 | Team Udayavani |

ಬೆಂಗಳೂರು: ದೇಶದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಇಸ್ರೋ ಸಂಸ್ಥೆ ಅಪಾರ ಕೊಡುಗೆ ನೀಡಿದೆ. ಮೈಸೂರು ರಾಕೆಟ್‌ನಿಂದ ಪ್ರಾರಂಭಗೊಂಡ ಬಾಹ್ಯಾಕಾಶದ ಮೈಲುಗಲ್ಲು ಇಂದು ವಿದೇಶದ ಉಪಗ್ರಹಗಳ ಉಡಾವಣೆ ವರೆಗೂ ಸಾಗಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್‌.ಕಿರಣ್‌ಕುಮಾರ್‌ ಅಭಿಪ್ರಾಯಪಟ್ಟರು.

Advertisement

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯವು ಆಯೋಜಿಸಿದ್ದ “ಬಾಹ್ಯಾಕಾಶ ತಂತ್ರಜ್ಞಾನ ಕೈಸಾಲೆ’ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲೇ ಮೊದಲ ಬಾರಿಗೆ ರಾಕೆಟ್‌ ಬಳಸಿದ್ದು ಮೈಸೂರಿನಲ್ಲಿ ಎಂಬ ಉಲ್ಲೇಖವಿದೆ. ಇದು ಇಡೀ ವಿಶ್ವವೇ ಬೆರಗಾಗುವಂತ ಸಾಧನೆಯನ್ನು ಇಸ್ರೋ ಮಾಡಿದ್ದು, ಅನೇಕ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿಸಿದೆ ಎಂದು ಹೇಳಿದರು. 

ಬಾಹ್ಯಕಾಶ ನೌಕೆ ನಿರ್ಮಾಣದಲ್ಲಿ ಅತ್ಯಾಧುನಿಕ ತಂತ್ರಜಾnನ, ಒಡೆಯದಂತಹ ಗಾಜಿನ ಕವಚ ಬಳಸಿ ವಿದೇಶಗಳಿಗಿಂತ ಕಡಿಮೆ ವೆಚ್ಚದಲ್ಲಿ ನೌಕರ ನಿರ್ಮಿಸಿರುವುದು ಇಸ್ರೋದ ಕೌಶಲ್ಯ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಜನತೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳಬೇಕಾದ ಅವಶ್ಯಕತೆ ಇದೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು.  

“ಸ್ಪೇಸ್‌ ಸ್ಪಿನ್‌ ಒನ್‌’ ಎಂಬ ಆ್ಯಪ್‌ ಅಭಿವೃದ್ಧಿಪಡಿಸಿದ್ದು ಇದರಿಂದ ಹಿಮಾಲಯ, ಬೆಂಗಳೂರಿನ ಮೆಟ್ರೋ ನಿಲ್ದಾಣ ಹಾಗೂ ಪ್ರವಾಸಿ ಕ್ಷೇತ್ರಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಅಧ್ಯಕ್ಷ ಡಾ. ಕಸ್ತೂರಿ ರಂಗನ್‌, ರಿಧಿ ಮಿಶ್ರಾ, ಎ.ಎಸ್‌. ಮಣೆಕರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next